Android ಬಳಕೆದಾರರಿಗೆ ದೊಡ್ಡ ಅಪಾಯ ಕಾದಿರುವ ಸುದ್ದಿಯೊಂದು ಪ್ರಕಟವಾಗಿದೆ ಮತ್ತು ಇದು ನಕಲಿ ಅಪ್ಲಿಕೇಶನ್‌ಗಳ ಅಪಾಯ ಎಂದು ಹೇಳಲಾಗುತ್ತಿದೆ. ನೀವು ಕೂಡ ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ, ನಕಲಿ ಅಪ್ಲಿಕೇಶನ್‌ಗಳು ಯಾವಾಗಲೂ Android ಬಳಕೆದಾರರಿಗೆ ದೊಡ್ಡ ಬೆದರಿಕೆಯಾಗಿವೆ ಮತ್ತು ಈ ಸಮಯದಲ್ಲಿ, WhatsApp ಮತ್ತು YouTube ನಂತಹ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಅಡಗಿರುವ ಹೊಸ ಅಪಾಯಕಾರಿ ಮಾಲ್‌ವೇರ್ ಕುರಿತು Meta, Android ಫೋನ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ರೆಡ್ ಅಲರ್ಟ್ ಜಾರಿಗೊಳಿಸಿದೆ. ಮೆಟಾ ತನ್ನ ಇತ್ತೀಚಿನ ತ್ರೈಮಾಸಿಕ ಅಡ್ವರ್ಸರಿಯಲ್ ಥ್ರೆಟ್ ವರದಿ 2022 ರಲ್ಲಿ ಈ ಜನಪ್ರಿಯ ಅಪ್ಲಿಕೇಶನ್‌ಗಳ ಕ್ಲೋನ್ ಮಾಡಿದ ಆವೃತ್ತಿಗಳಲ್ಲಿ ಹೊಸ ಡ್ರಾಕರೀಸ್ ಮಾಲ್‌ವೇರ್ ಅನ್ನು ಇಂಜೆಕ್ಟ್ ಮಾಡಲಾಗುತ್ತಿದೆ ಎಂದು ಬಹಿರಂಗಪಡಿಸಿದೆ. ಕೇವಲ WhatsApp ಮತ್ತು YouTube ಅಲ್ಲ, ಆದರೆ ಸಿಗ್ನಲ್, ಟೆಲಿಗ್ರಾಮ್ ಮತ್ತು ಕಸ್ಟಮ್ ಚಾಟ್ ಅಪ್ಲಿಕೇಶನ್‌ಗಳಂತಹ ಇತರ ತ್ವರಿತ ಸಂದೇಶ ರವಾಹಿಸುವ ಅಪ್ಲಿಕೇಶನ್‌ಗಳನ್ನು ಸಹ ಆನ್‌ಲೈನ್ ಸೈಬರ್ ಅಪರಾಧಿಗಳು ಗುರಿಯಾಗಿಸುತ್ತಿದ್ದಾರೆ.
ಇದನ್ನೂ ಓದಿ-ಜಿಯೋ 5G ಫೋನ್ ಬಿಡುಗಡೆಗೆ ಸಿದ್ಧ: ಇದರ ಬೆಲೆ ಇಷ್ಟೊಂದು ಕಡಿಮೆನಾ?
ಗೇಮ್ ಆಫ್ ಥ್ರೋನ್ಸ್ ಬ್ಯಾಟಲ್ ಕ್ರೈ ಫಾರ್ ಡ್ರಾಗನ್ಸ್ ಹೆಸರಿನ ಡ್ರಕರೀಸ್ ಮಾಲ್‌ವೇರ್ ಅನ್ನು ಬಿಟರ್ ಎಪಿಟಿ ಹ್ಯಾಕಿಂಗ್ ಗ್ರೂಪ್ ಬಿಡುಗಡೆ ಮಾಡಿದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ಈ ಹ್ಯಾಕಿಂಗ್ ಗುಂಪು ಬ್ರಿಟನ್, ನ್ಯೂಜಿಲೆಂಡ್, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಕುರಿತು ವರದಿ ಮಾಡಿರುವ ಮೆಟಾ, "ನಾವು ಡ್ರಾಕಾರಿಸ್ ಎಂದು ಹೆಸರಿಸಲಾಗಿರುವ ಹೊಸ ಕಸ್ಟಮ್ ಮಾಲ್‌ವೇರ್ ಆಂಡ್ರಾಯ್ಡ್ ಕುಟುಂಬವನ್ನು ಗುರಿಯಾಗಿಸುತ್ತಿರುವುದನ್ನು ನಾವು ನೋಡಿದ್ದೇವೆ. ನಿರ್ದಿಷ್ಟವಾಗಿ, ಇದು ವಿಕಲಾಂಗ ಬಳಕೆದಾರರಿಗೆ ಸಹಾಯ ಮಾಡಲೆಂದೇ ಇರುವ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಆಕ್ಸೆಸಿಬಿಲಿಟಿ ಸೇವೆಗಳನ್ನು ಬಳಸುತ್ತದೆ.
ಇದನ್ನೂ ಓದಿ-Alert! ನೀವೂ ಕೂಡ ಚೈನಾ ಕಂಪನಿಯ ಈ ಫೋನ್ ಗಳನ್ನು ಬಳಸುತ್ತೀರಾ? ತಕ್ಷಣ ಈ ಕೆಲಸ ಮಾಡಿ... ಇಲ್ದಿದ್ರೆ !
ಈ Android ಮಾಲ್‌ವೇರ್ ಎಷ್ಟು ಅಪಾಯಕಾರಿ?
ಡ್ರಾಕಾರಿಸ್ ಮಾಲ್ವೇರ್ ಒಂದು ವಿಶೇಷ ಕಾರಣಕ್ಕಾಗಿ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಕಾರಣ ಈ ಮಾಲ್‌ವೇರ್ ಸ್ಟ್ರೈನ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲು ಹ್ಯಾಕರ್‌ಗಳಿಗೆ ಸಹಾಯ ಮಾಡುತ್ತದೆ. ಈ ಮಾಲ್‌ವೇರ್ ಕರೆ ಲಾಗ್‌ಗಳು, ಸಂಪರ್ಕ ಮಾಹಿತಿ, ಫೈಲ್‌ಗಳು, ಎಸ್‌ಎಂಎಸ್ ಪಠ್ಯಗಳು, ಜಿಯೋ-ಲೊಕೇಶನ್ ಮತ್ತು ಬಳಕೆದಾರರ ಸಾಧನದ ವಿವರಗಳನ್ನು ಕದಿಯುವ ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲ, ಈ ಮಾಲ್ವೇರ್ ರಹಸ್ಯವಾಗಿ ಚಿತ್ರಗಳನ್ನು ತೆಗೆಯುವ ಮತ್ತು ಆಂಡ್ರಾಯ್ಡ್ ಸಾಧನದ ಮೈಕ್ರೋಫೋನ್ ಅನ್ನು ಸಕ್ರಿಯಗೊಳಿಸುವ ಮತ್ತು ಬಳಕೆದಾರರಿಗೆ ತಿಳಿಯದಂತೆ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅತ್ಯಂತ ಅಪಾಯಕಾರಿ ಭಾಗವೆಂದರೆ ಈ ಮಾಲ್‌ವೇರ್ ಭದ್ರತಾ ತಪಾಸಣೆಗಳನ್ನು ಬೈಪಾಸ್ ಮಾಡಬಹುದು ಮತ್ತು ಆಂಟಿ-ವೈರಸ್ ಸಿಸ್ಟಮ್ ಮೂಲಕ ನಡೆಸಲಾಗುವ ಯಾವುದೇ ತನಿಖೆಯನ್ನು ತಪ್ಪಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.