Asteroid: ಭೂಮಿಯತ್ತ ಧಾವಿಸುತ್ತಿದೆ ಭಯಾನಕ ಅಪಾಯ, ಅಲರ್ಟ್ ಘೋಷಿಸಿದ NASA

Asteroid Nearing Earth - ಬಾಹ್ಯಾಕಾಶ ಮತ್ತು ವಿಜ್ಞಾನದ ವಿಶ್ವ ಸ್ವತಃ ಒಂದು ಅದ್ಭುತವಾಗಿದೆ. ಹಲವು ಬಾರಿ ಅಸ್ಟ್ರಾಯಿಡ್ ಗಳು (Asteroid) ಎಂದು ಕರೆಯಲ್ಪಡುವ ಬಾಹ್ಯಾಕಾಶದಲ್ಲಿ ಚಲಿಸುವ ಕ್ಷುದ್ರಗ್ರಹಗಳು ಭೂಮಿಗೆ ಅಪಾಯವನ್ನುಂಟು ಮಾಡುತ್ತವೆ. ಇತಿಹಾಸದಲ್ಲಿ ಈ ಕ್ಷುದ್ರಗ್ರಹಗಳಿಂದ ಭೂಮಿಯು ಹಾನಿಗೊಳಗಾದ  ಅನೇಕ ಉದಾಹರಣೆಗಳಿವೆ. 

Written by - Nitin Tabib | Last Updated : Nov 8, 2021, 05:25 PM IST
  • ಬಾಹ್ಯಾಕಾಶ ಮತ್ತು ವಿಜ್ಞಾನದ ವಿಶ್ವ ಸ್ವತಃ ಒಂದು ಅದ್ಭುತವಾಗಿದೆ.
  • ಹಲವು ಬಾರಿ ಅಸ್ಟ್ರಾಯಿಡ್ ಗಳು (Asteroid) ಎಂದು ಕರೆಯಲ್ಪಡುವ ಬಾಹ್ಯಾಕಾಶದಲ್ಲಿ ಚಲಿಸುವ ಕ್ಷುದ್ರಗ್ರಹಗಳು ಭೂಮಿಗೆ ಅಪಾಯವನ್ನುಂಟು ಮಾಡುತ್ತವೆ.
  • ಇತಿಹಾಸದಲ್ಲಿ ಈ ಕ್ಷುದ್ರಗ್ರಹಗಳಿಂದ ಭೂಮಿಯು ಹಾನಿಗೊಳಗಾದ ಅನೇಕ ಉದಾಹರಣೆಗಳಿವೆ.
Asteroid: ಭೂಮಿಯತ್ತ ಧಾವಿಸುತ್ತಿದೆ ಭಯಾನಕ ಅಪಾಯ, ಅಲರ್ಟ್ ಘೋಷಿಸಿದ NASA title=
Asteroid (File Photo)

Asteroid Nearing Earth - ಬಾಹ್ಯಾಕಾಶ ಮತ್ತು ವಿಜ್ಞಾನದ ವಿಶ್ವ ಸ್ವತಃ ಒಂದು ಅದ್ಭುತವಾಗಿದೆ. ಹಲವು ಬಾರಿ ಅಸ್ಟ್ರಾಯಿಡ್ ಗಳು (Asteroid) ಎಂದು ಕರೆಯಲ್ಪಡುವ ಬಾಹ್ಯಾಕಾಶದಲ್ಲಿ ಚಲಿಸುವ ಕ್ಷುದ್ರಗ್ರಹಗಳು ಭೂಮಿಗೆ ಅಪಾಯವನ್ನುಂಟು ಮಾಡುತ್ತವೆ. ಇತಿಹಾಸದಲ್ಲಿ ಈ ಕ್ಷುದ್ರಗ್ರಹಗಳಿಂದ ಭೂಮಿಯು ಹಾನಿಗೊಳಗಾದ  ಅನೇಕ ಉದಾಹರಣೆಗಳಿವೆ. ಏತನ್ಮಧ್ಯೆ, ಇತ್ತೀಚೆಗೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಭೂಮಿಯತ್ತ ಬೃಹತ್ ಕ್ಷುದ್ರಗ್ರಹ ಬರುತ್ತಿದೆ ಎಂದು ಎಚ್ಚರಿಕೆ ನೀಡಿದೆ. ಆಶ್ಚರ್ಯಕರವಾಗಿ, ಈ ಕ್ಷುದ್ರಗ್ರಹವು ಫ್ರಾನ್ಸ್‌ನ ಐಫೆಲ್ ಟವರ್‌ಗಿಂತ (Eifel Tower) ಗಾತ್ರದಲ್ಲಿ  ದೊಡ್ಡದಾಗಿದೆ.

ವಿಶ್ವದ ಅತಿ ಎತ್ತರದ ಕಟ್ಟಡಗಳಲ್ಲಿ ಒಂದಾದ ಫ್ರಾನ್ಸ್‌ನ ಐಫೆಲ್ ಟವರ್‌ಗಿಂತಲೂ ಗಾತ್ರದಲ್ಲಿ ದೊಡ್ಡದಾದ ಕ್ಷುದ್ರಗ್ರಹವೊಂದು ಭೂಮಿಯ ಹತ್ತಿರದಿಂದ ಹಾದುಹೋಗುವ ಬಗ್ಗೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ. ನಾಸಾ ಈ ಕ್ಷುದ್ರಗ್ರಹವನ್ನು ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ ಪಟ್ಟಿಯಲ್ಲಿ ಇರಿಸಿದೆ. ಈ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿದರೆ ಅದರ ಪರಿಣಾಮ ಭೀಕರವಾಗಿರಬಹುದು, ಆದರೆ ಇದು ನಮ್ಮ ಭೂಮಿಯಿಂದ ದೂರ ಹಾದುಹೋಗುತ್ತದೆ ಎಂಬುದು ಸಮಾಧಾನದ ವಿಷಯವಾಗಿದೆ ಮತ್ತು ಅಷ್ಟೇ ಅಲ್ಲ, ಭೂಮಿಯ ಮೂಲಕ ಹಾದುಹೋದ ನಂತರ, ಇಂತಹ ಮತ್ತೊಂದು ಕ್ಷುದ್ರಗ್ರಹ ಭೂಮಿಯ ಸನೀಹಕ್ಕೆ ಬರಲು ಕನಿಷ್ಠ 10 ವರ್ಷಗಳು ಬೇಕು ಎನ್ನಲಾಗಿದೆ.

ವಿಜ್ಞಾನಿಗಳ ಪ್ರಕಾರ, ಈ ಕ್ಷುದ್ರಗ್ರಹದ ಹೆಸರು 4660 Nereus ಮತ್ತು ಇದು ಫುಟ್ಬಾಲ್  ಪಿಚ್ ಗಿಂತ ಗಾತ್ರದಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ನಾಸಾದ ಅಂದಾಜಿನ ಪ್ರಕಾರ, ಡಿಸೆಂಬರ್ 11 ರ ವೇಳೆಗೆ ಇದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋಗಲಿದೆ. ಭೂಮಿಯಿಂದ ಈ ಕ್ಷುದ್ರಗ್ರಹದ ಅಂತರವು 3.9 ಮಿಲಿಯನ್ ಕಿಲೋಮೀಟರ್‌ಗಳು ಅಂದರೆ ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 10 ಪಟ್ಟು ಹೆಚ್ಚು ಇರಲಿದೆ. ಕ್ಷುದ್ರಗ್ರಹವು 330 ಮೀಟರ್ ಉದ್ದವಿದೆ. ಬಾಹ್ಯಾಕಾಶದಲ್ಲಿರುವ 90 ಪ್ರತಿಶತದಷ್ಟು ಕ್ಷುದ್ರಗ್ರಹಗಳು ಇದಕ್ಕಿಂತ ಚಿಕ್ಕದಾಗಿದೆ ಎಂದು ವರದಿಯನ್ನು ಉಲ್ಲೇಖಿಸಿ ಹೇಳಲಾಗಿದೆ.

ಇದನ್ನೂ ಓದಿ-Asteroid:ಭೂಮಿಯ ಅತ್ಯಂತ ಸನೀಹಕ್ಕೆ ಬಂದ ಕ್ಷುದ್ರಗ್ರಹ, ವಿಜ್ಞಾನಿಗಳು ಕೂಡ ಇದನ್ನು ಅಂದಾಜಿಸಿರಲ್ಲಿಲ್ಲವಂತೆ

4660 Nereus 1982 ರಲ್ಲಿ ಪತ್ತೆಯಾದ Appolo ಗುಂಪಿನ ಸದಸ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದಿನ ಕ್ಷುದ್ರಗ್ರಹಗಳಂತೆಯೇ ಇದು ಕೂಡ ಭೂಮಿಯ ಬಳಿ ಸೂರ್ಯನ ಕಕ್ಷೆಯ ಮೂಲಕ ಹಾದುಹೋಗಲಿದೆ. ಸದ್ಯ, ಒಳ್ಳೆಯ ಸಂಗತಿ ಎಂದರೆ ಡಿಸೆಂಬರ್ 11 ರವರೆಗೆ ಭೂಮಿಗೆ ಅತಿ ಸಮೀಪದಲ್ಲಿ ಹಾದು ಹೋಗುವ ಈ ಕ್ಷುದ್ರಗ್ರಹ ಭೂಮಿಗೆ ಯಾವುದೇ ಅಪಾಯ ತಂದೊಡ್ಡುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು

ಕ್ಷುದ್ರಗ್ರಹಗಳೆಂದರೇನು?
ಕ್ಷುದ್ರಗ್ರಹಗಳೆಂದರೆ ಗ್ರಹದಂತೆ ಸೂರ್ಯನ ಸುತ್ತ ಸುತ್ತುವ ಬಂಡೆಗಳು ಎಂದರ್ಥ. ಆದರೆ ಗಾತ್ರದಲ್ಲಿ ಗ್ರಹಗಳಿಗಿಂತ ಇವು ಚಿಕ್ಕದಾಗಿರುತ್ತವೆ. ಸೌರವ್ಯೂಹದ ರಚನೆಯ ನಂತರ, ಇಂತಹ ಅನಿಲ ಮತ್ತು ಧೂಳಿನ ಮೋಡಗಳು ಗ್ರಹದ ಆಕಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ಹಿಂದುಳಿದವು. ಈ ಬಂಡೆಗಳು ಅಂದರೆ ಕ್ಷುದ್ರಗ್ರಹಗಳು. ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಭೂಮಿಯ ಸಮೀಪವಿರುವ ಕ್ಷುದ್ರಗ್ರಹಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. 

ಇದನ್ನೂ ಓದಿ-2008 GO20 Asteroid: ನಾಳೆ ಭೂಮಿಯ ತುಂಬಾ ಸನೀಹದಿಂದ ಹಾದುಹೋಗಲಿದೆ ಈ ಕ್ಷುದ್ರಗ್ರಹ, ಭೂಮಿಯ ಮೇಲೆ ಏನು ಪ್ರಭಾವ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News