Ather 450s Festive Offer: 1.32 ಲಕ್ಷ ರೂ.ಗಳ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೀಪಾವಳಿಯಲ್ಲಿ ₹86000ಕ್ಕೆ ಖರೀದಿಸಬಹುದು

Ather 450s Festive Offer: ಹಬ್ಬದ ಸಂದರ್ಭದಲ್ಲಿ ಹಲವು ಕಂಪನಿಗಳು ಆಕರ್ಷಕ ಕೊಡುಗೆಗಳನ್ನು ಪರಿಚಯಿಸುತ್ತಿವೆ. ಅಂತೆಯೇ, ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲೂ ಕೂಡ ಹಬ್ಬದ ಆಫರ್ ಪರಿಚಯಿಸಲಾಗುತ್ತಿದ್ದು, Ather ಕಂಪನಿ ತನ್ನ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ ಆಫರ್ ಘೋಷಿಸಿದೆ. 

Written by - Yashaswini V | Last Updated : Oct 31, 2023, 12:11 PM IST
  • ಅಥರ್ 450S ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಬೆಲೆ 1.32 ಲಕ್ಷ ರೂ.
  • ಇದೀಗ ಅಥರ್ ತನ್ನ ಈ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬಂಪರ್ ಆಫರ್ ನೀಡುತ್ತಿದೆ
  • ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಿವೆ ಎಂದು ನೋಡುವುದಾದರೆ...
Ather 450s Festive Offer: 1.32 ಲಕ್ಷ ರೂ.ಗಳ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೀಪಾವಳಿಯಲ್ಲಿ ₹86000ಕ್ಕೆ ಖರೀದಿಸಬಹುದು  title=

Ather 450s Festive Offer: ಭಾರತದ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾದ ಅಥರ್ ಎನರ್ಜಿ ಈ ಹಬ್ಬದ ಸೀಸನ್ ನಲ್ಲಿ ತನ್ನ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ. ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಕೊಡುಗೆ ನಿಮಗೆ ಮನೋಲ್ಲಾಸವನ್ನು ನೀಡಲಿದೆ. 

ದೇಶದ ಪ್ರಮುಖ ಆಟೋ ಕಂಪನಿಯಾದ ಅಥರ್ ಎನರ್ಜಿ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ಅತ್ಯಾಕರ್ಷಕ ಫೆಸ್ಟೀವ್ ಆಫರ್ ಘೋಷಿಸಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಗ್ರಾಹಕರು 1.32 ಲಕ್ಷ ರೂ.ಗಳ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ₹86000ಕ್ಕೆ ಖರೀದಿಸಬಹುದಾಗಿದೆ. 

ಇದನ್ನೂ ಓದಿ- Komaki ಫೆಸ್ಟೀವ್ ಧಮಾಕ! ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸಿಗಲಿದೆ ವಿಶೇಷ ಕೊಡುಗೆ

ಹೌದು, ಅಥರ್ ಎನರ್ಜಿ ದೀಪಾವಳಿ ಸಂದರ್ಭದಲ್ಲಿ ತನ್ನ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅಥರ್ 450s ನಲ್ಲಿ 5000 ರೂ.ಗಳ ಹೆಚ್ಚುವರಿ ಹಬ್ಬದ ಕೊಡುಗೆಯನ್ನು ನೀಡುತ್ತಿದೆ. ಇದಲ್ಲದೆ, ಇದರಲ್ಲಿ ಫೆಸ್ಟೀವ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ಇನ್ನೂ ಹಲವು ಕೊಡುಗೆಗಳು ಲಭ್ಯವಾಗಲಿದೆ. 

ಏನೆಲ್ಲಾ ಕೊಡುಗೆಗಳು ಲಭ್ಯವಿವೆ ಎಂದು ನೋಡುವುದಾದರೆ... 
Ather 450s ವಾಸ್ತವಿಕ ಬೆಲೆ: ₹1,32,550
ಲಭ್ಯವಿರುವ ಕೊಡುಗೆಗಳು: 
ಫೆಸ್ಟೀವ್ ಆಫರ್:  ₹5000
ಕಾರ್ಪೊರೇಟ್ ಡಿಸ್ಕೌಂಟ್: ₹1500
2ವಾಟ್‌ನ ವಿನಿಮಯ ಮೌಲ್ಯ:  ₹40000
Ather 450s ನ ಹೊಸ ಬೆಲೆ:  ₹86050

ಇದನ್ನೂ ಓದಿ- ವಿದ್ಯುತ್ ವೆಚ್ಚವಿಲ್ಲದೆ ಮನೆಯನ್ನು ಬೆಳಗಿಸಲು ಇಂದೇ ಖರೀದಿಸಿ ಸೌರಶಕ್ತಿ ಚಾಲಿತ ಎಲ್‌ಇಡಿ ಲೈಟ್‌

Ather 450sನ ವೈಶಿಷ್ಟ್ಯಗಳು: 
ಈ ವರ್ಷದ ಆಗಸ್ಟ್ 11ರಂದು ಬಿಡುಗಡೆಯಾದ Ather 450s ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಗ್ರಾಹಕರು ಒಟ್ಟು 18ಕ್ಕೂ ಹೆಚ್ಚು ನ್ಯಾವಿಗೇಷನ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ.   ಅಥರ್ 450S ನಲ್ಲಿನ ಬ್ಯಾಟರಿ ಸಾಮರ್ಥ್ಯವು 2.9 kWh ಆಗಿದೆ. ಕಂಪನಿಯ ಪ್ರವೇಶ ಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು ಗಂಟೆಗೆ ಇದರ ಗರಿಷ್ಠ ವೇಗ 90 ಕಿಲೋಮೀಟರ್ ಮತ್ತು ಈ ಸ್ಕೂಟರ್ 105 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತನ್ನ ಅಧಿಕೃತ  ವೆಬ್‌ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News