Bill Gates Meets PM Modi: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಭಾರತಕ್ಕೆ ಭೇಟಿ ನೀಡಿದ್ದು ಅವರು ಗುರುವಾರ (ಫೆ.29) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಾರ್ವಜನಿಕ ಒಳಿತಿಗಾಗಿ ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಕೃಷಿ ಮತ್ತು ಆರೋಗ್ಯದಲ್ಲಿ ನಾವೀನ್ಯತೆಗಾಗಿ ಕೃತಕ ಬುದ್ಧಿಮತ್ತೆ (AI) ಬಳಕೆ ಕುರಿತು ಚರ್ಚಿಸಿದರು.
ಈ ಕುರಿತಂತೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಲ್ ಗೇಟ್ಸ್, "ನರೇಂದ್ರ ಮೋದಿಯವರನ್ನು ಭೇಟಿಯಾಗುವುದು ಯಾವಾಗಲೂ ಸ್ಫೂರ್ತಿದಾಯಕವಾಗಿದೆ ಮತ್ತು ಚರ್ಚಿಸಲು ಬಹಳಷ್ಟು ಇತ್ತು" ಎಂದು ಬರೆದಿದ್ದಾರೆ.
It is always inspiring to meet with @narendramodi and there was a lot to discuss. We talked about AI for public good; DPI; women-led development; innovation in agriculture, health, and climate adaptation; and how we can take lessons from India to the world. @PMOIndia pic.twitter.com/Y3REO67gxP
— Bill Gates (@BillGates) February 29, 2024
"ನಾವು ಸಾರ್ವಜನಿಕ ಒಳಿತಿಗಾಗಿ ಎಐ ಬಗ್ಗೆ ಮಾತನಾಡಿದ್ದೇವೆ; ಡಿಪಿಐ; ಮಹಿಳಾ ನೇತೃತ್ವದ ಅಭಿವೃದ್ಧಿ; ಕೃಷಿ, ಆರೋಗ್ಯ ಮತ್ತು ಹವಾಮಾನ ಹೊಂದಾಣಿಕೆಯಲ್ಲಿ ನಾವೀನ್ಯತೆ; ಮತ್ತು ನಾವು ಭಾರತದಿಂದ ಜಗತ್ತಿಗೆ ಹೇಗೆ ಪಾಠಗಳನ್ನು ತೆಗೆದುಕೊಳ್ಳಬಹುದು" ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಿರುವುದಾಗಿ ಬಿಲ್ ಗೇಟ್ಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ- 2027ರವರೆಗೆ AI ಬೇಡಿಕೆ ಶೇ. 15ರಷ್ಟು ಬೆಳೆಯುವ ನಿರೀಕ್ಷೆ
ಬಿಲ್ ಗೇಟ್ಸ್ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, "ನಿಜಕ್ಕೂ ಅದ್ಭುತ ಸಭೆ! ನಮ್ಮ ಗ್ರಹವನ್ನು ಉತ್ತಮಗೊಳಿಸುವ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಬಲಗೊಳಿಸುವ ಕ್ಷೇತ್ರಗಳನ್ನು ಚರ್ಚಿಸಲು ಯಾವಾಗಲೂ ಸಂತೋಷವಾಗುತ್ತದೆ" ಎಂದು ತಿಳಿಸಿದ್ದಾರೆ.
A wonderful meeting indeed! Always a delight to discuss sectors which will make our planet better and empower millions of people across the globe. @BillGates https://t.co/IKFM7lEMOX
— Narendra Modi (@narendramodi) February 29, 2024
ಇದನ್ನೂ ಓದಿ- ಯಂತ್ರ ಪತ್ರಕರ್ತರ ಹೆಚ್ಚಳ: ಸುದ್ದಿಮನೆಯನ್ನು ಕೈವಶ ಮಾಡಿಕೊಳ್ಳುವುದೇ ಕೃತಕ ಬುದ್ಧಿಮತ್ತೆ?
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಭೆಗೂ ಮುನ್ನ ನಾಗ್ಪುರದ ಜನಪ್ರಿಯ ಚಹಾ ಮಾರಾಟಗಾರ ಸುನಿಲ್ ಪಾಟೀಲ್ ಅವರೊಂದಿಗೆ Instagram ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಬಿಲ್ ಗೇಟ್ಸ್, ಭಾರತದ ನಾವೀನ್ಯತೆ ಸಂಸ್ಕೃತಿಯನ್ನು ಶ್ಲಾಘಿಸಿದರು.
"ಭಾರತದಲ್ಲಿ, ನೀವು ತಿರುಗುವ ಎಲ್ಲೆಡೆ ಹೊಸತನವನ್ನು ಕಾಣಬಹುದು, ಸರಳವಾದ ಕಪ್ ಚಹಾದ ತಯಾರಿಕೆಯಲ್ಲಿಯೂ ಸಹ" ಎಂದು ವೀಡಿಯೊದೊಂದಿಗೆ ಹಂಚಿಕೊಂಡ ಪೋಸ್ಟ್‌ನಲ್ಲಿ ಗೇಟ್ಸ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.