BSNL Best Offer: ಕೇವಲ ರೂ.1287 ರೂ.ಗಳಿಗೆ 4999 ರೂ. ಬೆಲೆಯ Google Nest Mini

BSNL ಇತ್ತೀಚೆಗೆ 90 ದಿನಗಳ ವಿಶೇಷ ಪ್ರಚಾರದ ಆಫರ್ ಅನ್ನು ಬಿಡುಗಡೆ ಮಾಡಿದೆ ಇದರಲ್ಲಿ ನೀವು Google Nest Mini ಮತ್ತು Google Nest Hub ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಬ್ರಾಡ್‌ಬ್ಯಾಂಡ್ ಬಳಕೆದಾರರಿಗಾಗಿ ಜಾರಿಗೊಳಿಸಲಾಗಿರುವ ಈ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Oct 17, 2021, 06:45 PM IST
  • BSNL ನ 90 ದಿನಗಳ ಪ್ರಮೋಶನಲ್ ಕೊಡುಗೆ
  • ಅಗ್ಗದ ಬೆಲೆಯಲ್ಲಿ ಗೂಗಲ್ ನೆಸ್ಟ್ ಮಿನಿ, ಗೂಗಲ್ ನೆಸ್ಟ್ ಹಬ್ ಖರೀದಿಸಿ.
  • ಈ ಕೊಡುಗೆಗಳು ವಿಶೇಷವಾಗಿ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿವೆ.
BSNL Best Offer: ಕೇವಲ ರೂ.1287 ರೂ.ಗಳಿಗೆ 4999 ರೂ. ಬೆಲೆಯ Google Nest Mini title=
BSNL Best Offer (File Photo)

ನವದೆಹಲಿ: BSNL Broadband Users - ಸರ್ಕಾರಿ ಟೆಲಿಕಾಂ ಕಂಪನಿ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಹಳೆಯ ಮತ್ತು ಹೊಸ ಬ್ರಾಡ್ ಬ್ಯಾಂಡ್ ಬಳಕೆದಾರರಿಗಾಗಿ ವಿಶೇಷ ಕೊಡುಗೆಯನ್ನು ನೀಡಿದೆ. BSNL ಇತ್ತೀಚೆಗೆ ದೇಶಾದ್ಯಂತದ  BSNL ಬ್ರಾಡ್‌ಬ್ಯಾಂಡ್ ಬಳಕೆದಾರರು Google Nest Mini ಮತ್ತು Google Nest Hub ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಘೋಷಿಸಿದೆ. ಹಾಗಾದರೆ ಬನ್ನಿ ಈ ಕೊಡುಗೆಯ ಲಾಭವನ್ನು ಎಲ್ಲಿಯವರೆಗೆ ಹಾಗೂ ಹೇಗೆ ಪಡೆಯಬೇಕು ತಿಳಿದುಕೊಳ್ಳೋಣ ಬನ್ನಿ

ಕೇವಲ ರೂ.1,287ಕ್ಕೆ ಗೂಗಲ್ ನೆಸ್ಟ್ ಮಿನಿ
ಈ ಕೊಡುಗೆ ಭಾರತ್ ಫೈಬರ್ ಅಥವಾ ಏರ್ ಫೈಬರ್ ನ ಹೊಸ ಯೋಜನೆಗಳಲ್ಲಿದೆ. ಈ ಕೊಡುಗೆಯ ಅಡಿ ನೀವು ಭಾರತ್ ಫೈಬರ್ ಹಾಗೂ ಏರ್ ಫೈಬರ್ ನ ಹೊಸ ಪ್ಲಾನ್ ನಲ್ಲಿ 13 ತಿಂಗಳವರೆಗೆ ಪ್ರತಿ ತಿಂಗಳು 99 ರೂ. ಪಾವತಿಸಿ ಒಟ್ಟು 1,287 ರೂ.ಗಳಲ್ಲಿ ಗೊಗಲ್ ನೆಸ್ಟ್ ಮಿನಿಯನ್ನು ಖರೀದಿಸಬಹುದು. ಈ ಸ್ಮಾರ್ಟ್ ಡಿವೈಸ್ ಅಸಲಿ ಬೆಲೆ ರೂ. 4999 ಆಗಿದೆ. ಈ ಕೊಡುಗೆ ವಿಶೇಷವಾಗಿ FTTH, ಏರ್ ಫೈಬರ್ (BSNL AirFibre) ಹಾಗೂ DSL ಬಳಕೆದಾರರಿಗೆ ಮಾತ್ರ ಇದ್ದು, ಇದರಲ್ಲಿ ಕನಿಷ್ಠ ಅಂದರೆ ರೂ.799 ರಿಚಾರ್ಚ್ ಮಾಡಿಸಬೇಕು.

ಇದನ್ನೂ ಓದಿ-BSNL Offers: ತನ್ನ ಬಳಕೆದಾರರಿಗೆ ಭಾರಿ ಉಡುಗೊರೆ ನೀಡಿದ BSNL, ನಾಲ್ಕು ತಿಂಗಳಿಗೆ ಉಚಿತ ಸೇವೆ

ಗೂಗಲ್ ನೆಸ್ಟ್ ಹಬ್ ಮೇಲೂ ಕೂಡ ಭಾರಿ ರಿಯಾಯಿತಿ
ಹಳೆ ಮತ್ತು ಹೊಸ, ಎರಡೂ ರೀತಿಯ ಗ್ರಾಹಕರು ಈ ಕೊಡುಗೆಯ ಲಾಭ ಪಡೆಯಲು ಪ್ರತಿ ತಿಂಗಳು ಬ್ರಾಡ್ ಬ್ಯಾಂಡ್ ಮೇಲೆ ಕನಿಷ್ಠ ಅಂದರೆ ರೂ. 1999 ರೂ. ವೆಚ್ಚ ಮಾಡಬೇಕು. ಈ ಕೊಡುಗೆಗಳನ್ನು ಭಾರತ್ ಫೈಬರ್ ಅಥವಾ ಏರ್ ಫೈಬರ್ ನ ಹೊಸ ಪ್ಲಾನ್ ಗಳ ಜೊತೆ ಪಡೆಯಲು ನೀವು 13 ತಿಂಗಳುಗಳ ವರೆಗೆ ಪ್ರತಿ ತಿಂಗಳು 199 ಹಣ ಪಾವತಿಸಿ ಒಟ್ಟು 2587 ಹಣ ಪಾವತಿಸಬೇಕು. ಹಳೆ ಪ್ಲಾನ್ ಗ್ರಾಹಕರು ಕೂಡ ರೂ.199 ಪಾವತಿಸಿ 13 ತಿಂಗಳುಗಳ ಬದಲಾಗಿ 12 ತಿಂಗಳಿಗೆ ಒಟ್ಟು ರೂ.2388 ಪಾವತಿಸಿ ಲಾಭ ಪಡೆಯಬಹುದು.

ಇದನ್ನೂ ಓದಿ-BSNL ಗ್ರಾಹಕರಿಗೆ ದೀಪಾವಳಿ ಗಿಫ್ಟ್ , ಸಿಗಲಿದೆ ಸಣ್ಣ ರಿಚಾರ್ಜ್ ನ 30 ದಿನಗಳ ಪ್ಲಾನ್

BSNL ಈ ಕೊಡುಗೆಗಳು ಪ್ರೋಮೊಶನಲ್ ಕೊಡುಗೆಗಳಾಗಿವೆ (BSNL Promotional Offers). ಕೇವಲ 90 ದಿನಗಳವರೆಗೆ ಮಾತ್ರ ಅಂದ್ರೆ ಅಕ್ಟೋಬರ್ 15, 2021 ರಿಂದ ಜನವರಿ 12, 2021ರ ನಡುವೆ ಮಾತ್ರ ನೀವು ಈ ಯೋಜನೆಗಳ ಲಾಭ ಪಡೆಯಬಹುದು. ಅಂಡಮಾನ್ ನಿಕೊಬಾರ್ ಹೊರತುಪಡಿಸಿ ದೇಶದ ಇತರ ಎಲ್ಲಾ ಭಾಗಗಳಲ್ಲಿ ನೀವು ಈ ಯೋಜನೆಗಳ ಲಾಭ ಪಡೆಯಬಹುದು.

ಇದನ್ನೂ ಓದಿ-BSNL 4G Network: BSNLನಿಂದ ಮೊಟ್ಟಮೊದಲ 4G ಕರೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News