ನವದೆಹಲಿ: ನಿಮಗೆ ಅಚ್ಚರಿಯಾಗಬಹುದು. ಹತ್ತು ಸೆಕೆಂಡಿನ ಈ ವಿಡಿಯೋ ಬೆಲೆ ಬರೊಬ್ಬರಿ 48 ಕೋಟಿ ರೂಪಾಯಿ (Costly Video). ಇದು ಸತ್ಯವೇ, ಇದು ಸಾಧ್ಯವೇ..? ಜಗತ್ತಿನಾದ್ಯಂತ ಜನ ಈ ಪ್ರಶ್ನೆ ಕೇಳುತ್ತಿದ್ದಾರೆ. ಹೌದು ಇದು ಸತ್ಯ. ನಂಬಲು ಸಾಧ್ಯವಿಲ್ಲದಿದ್ದರೂ ನೀವು ನಂಬಲೇ ಬೇಕು. ಆ ಹತ್ತು ಸೆಕೆಂಡ್ ವಿಡಿಯೋ ಬೆಲೆ 6.6 ಮಿಲಿಯನ್ ಡಾಲರ್. ಅಂದರೆ ಬರೋಬ್ಬರಿ 48.47 ಕೋಟಿ ರೂಪಾಯಿ. ಇದೊಂದು ಡಿಜಿಟಲ್ ಕ್ರಾಂತಿ. ಕಲಾವಿದರಿಗೆ ಹೊಸ ಅವಕಾಶ ತೆರೆದಿಟ್ಟ ಡಿಜಿಟಲ್ ಕ್ರಾಂತಿ (Digital Revolution) ಇದು.
ಲಭ್ಯ ಮಾಹಿತಿಗಳ ಪ್ರಕಾರ ಮಿಯಾಮಿಯ ನಿವಾಸಿ ಪಾಬ್ಲೋ ರಾಡ್ರಿಗಸ್ ಫ್ರೈಲೆ (Pablo Rodriguez Fraile) ಕಳೆದ ವರ್ಷ ಸುಮಾರು 67 ಸಾವಿರ ಡಾಲರ್ ಅಂದರೆ 49.23 ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ವಿಡಿಯೋ ತಯಾರಿಸಿದ್ದರು. ಕಳೆದ ವಾರ ಅದೇ ಹತ್ತು ಸೆಕೆಂಡಿನ ವಿಡಿಯೋ (A 10-second video clip) ಬರೋಬ್ಬರಿ 6.6 ಮಿಲಿಯನ್ ಡಾಲರ್ ಅಂದರೆ 48.47 ಕೋಟಿ ರೂಪಾಯಿಗಳಿಗೆ ಬಿಕರಿಯಾಗಿದೆ. ಇಡೀ ಜಗತ್ತಿನಲ್ಲಿ ಈಗ ಅದೇ ವಿಡಿಯೋದ ಚರ್ಚೆ ನಡೆಯುತ್ತಿದೆ.
A new type of digital asset known as NFT has exploded in popularity as enthusiasts and investors scramble to spend enormous sums of money on items that only exist online - like the 10 second-video ‘CROSSROADS’ which sold for $6.6 million https://t.co/2wrD4iFdkS pic.twitter.com/JTDrmv7a4D
— Reuters (@Reuters) March 2, 2021
ಇದನ್ನೂ ಓದಿ : WhatsApp Feature - ಟೈಪ್ ಮಾಡದೆಯೇ WhatsApp ಮೂಲಕ Text ಸಂದೇಶ ಕಳುಹಿಸುವುದು ಹೇಗೆ?
ಆ ವಿಡಿಯೋದಲ್ಲಿ ಅಂತಾದ್ದೇನಿದೆ.?
ಕಂಪ್ಯೂಟರ್ (Computer) ನೆರವಿನಿಂದ ಈ ವಿಡಿಯೋ ಮಾಡಲಾಗಿದೆ. ಅದರಲ್ಲಿ ಅಮೇರಿಕ ಮಾಜಿ ರಾಷ್ಟ್ರಪತಿ Donald Trump ಬೋರಲು ಬಿದ್ದಂತೆ ಕಾಣಿಸುತ್ತಿದೆ. ಟ್ರಂಪ್ ಶರೀರದ ಮೇಲೆ ಹಲವಾರು ಸಂದೇಶಗಳನ್ನು ಬರೆಯಲಾಗಿದೆ. ಜನ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿರುವುದು ಕೂಡಾ ಗಮನಕ್ಕೆ ಬರುತ್ತದೆ.
ವರದಿಯ ಪ್ರಕಾರ ಈ ಡಿಜಿಟಲ್ ವಿಡಿಯೋ ಖರೀದಿಸಲು ಮೊದಲ ಸಲ ಕ್ರಿಪ್ಟೋಕರೆನ್ಸಿ (Cryptocurrency) ಬಳಸಲಾಗಿದೆ. ಈ ವಿಡಿಯೋದಲ್ಲೊಂದು ಡಿಜಿಟಲ್ ಹಸ್ತಾಕ್ಷರವಿದೆ. ಇದರಿಂದ ಅದರ ಅಸಲೀ ಮಾಲೀಕರನ್ನು ಪತ್ತೆ ಹಚ್ಚಬಹುದಾಗಿದೆ. ಅಂದರೆ, ಈ ವಿಡಿಯೋ ಕದಿಯಲು ಸಾಧ್ಯವಿಲ್ಲ
ನಾನ್ ಫಂಜಿಬಲ್ ಟೋಕನ್ (Non-Fungible Token) ಬಳಕೆ:
ಈ ಡಿಜಿಟಲ್ ವಿಡಿಯೋದಲ್ಲಿ ಮೊದಲ ಸಲ ನಾನ್ ಪಂಜಿಬಲ್ ಟೋಕನ್ ಬಳಕೆಯಾಗಿದೆ. ಈ ಎನ್ ಎಫ್ ಟಿಯನ್ನು ಆನ್ ಲೈನ್ ನಲ್ಲಿ (Online) ಈಗ ಸಾಕಷ್ಟು ಜನ ಬಳಸುತ್ತಾರೆ. ಎನ್ ಎಫ್ ಟಿಗಾಗಿ ಮಾರುಕಟ್ಟೆ ಸೃಷ್ಟಿಸುತ್ತಿರುವ ಕಂಪನಿಯಾದ ಓಪನ್ ಸೀ (OpenSea) ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ NFT ಮಾರುಕಟ್ಟೆಯಲ್ಲಿ 86.3 ದಶಲಕ್ಷ ಡಾಲರ್ ಹೂಡಿಕೆಯಾಗಿದೆ.
ಇದನ್ನೂ ಓದಿ : BSNL OFFER : ಬಿಎಸ್ ಎನ್ ಎಲ್ ಅಪೂರ್ವ ಆಫರ್..! ಜಸ್ಟ್ 75 ರೂಪಾಯಿ ರಿಚಾರ್ಜಿಗೆ ಸಿಮ್ ಫ್ರೀ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.