ನವದೆಹಲಿ : ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಈಗ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲೂ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿದೆ. 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ ನಂತರ, ಈಗ Jio ತನ್ನ ಮೊದಲ 5G ಸ್ಮಾರ್ಟ್‌ಫೋನ್ ಮೇಲೆ ಕಾರ್ಯನಿರ್ವಹಿಸುತ್ತಿದೆ. ಮೂಲಗಳ ಪ್ರಕಾರ, ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಈಗ ಕಂಪನಿಯು ತನ್ನದೇ ಆದ ಲ್ಯಾಪ್‌ಟಾಪ್, ಜಿಯೋಬುಕ್ ಲ್ಯಾಪ್‌ಟಾಪ್ (JioBook Laptop) ಅನ್ನು ಬಿಡುಗಡೆ ಮಾಡಲು ಹೊರಟಿದೆ. ಈ ಲ್ಯಾಪ್‌ಟಾಪ್‌ನ ವಿಶೇಷತೆಯೇ ಅದರ ಬೆಲೆಯಾಗಿದೆ.
ಲಾಂಚ್ ಆಗಲಿದೆ JioBook ಲ್ಯಾಪ್‌ಟಾಪ್ :
91Mobiles ತನ್ನ ವರದಿಯಲ್ಲಿ ಜಿಯೋದ (Jio) ಮೊದಲ ಲ್ಯಾಪ್‌ಟಾಪ್, ಜಿಯೋಬುಕ್ ಲ್ಯಾಪ್‌ಟಾಪ್‌ನ (JioBook Laptop) ಹಾರ್ಡ್‌ವೇರ್ ಅನುಮೋದನೆ ದಾಖಲೆಯನ್ನು ಶೇರ್ ಮಾಡಿದೆ. ಲಿಸ್ಟಿಂಗ್ ಪ್ರಕಾರ, ಕಂಪನಿಯ ಹೆಸರು Emdoor Digital Technology Co Ltd,ಎನ್ನಲಾಗಿದೆ. ಅಂದರೆ, ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಜಿಯೋ (Jio) ಥರ್ಡ್ ಪಾರ್ಟಿ ವೆಂಡರ್ ಜೊತೆ ಕೈಜೋಡಿಸಿದೆ.
ಇದನ್ನೂ ಓದಿ : Flipkart TV Days:: ಈ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 24 ಸಾವಿರ ರೂ.ಗೆ ಖರೀದಿಸಿ
ಹೊಸ ಲ್ಯಾಪ್‌ಟಾಪ್ ಹಾರ್ಡ್‌ವೇರ್ :
ಮೊದಲೇ ತಿಳಿಸಿದ ಹಾಗೆ 91ಮೊಬೈಲ್ಸ್ ವರದಿಯ ಪ್ರಕಾರ, ಈ ಜಿಯೋ ಲ್ಯಾಪ್‌ಟಾಪ್ ವಿಂಡೋಸ್ 10 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಬಹುದು. ಈ ಲ್ಯಾಪ್‌ಟಾಪ್ ಅನ್ನು ವಿಂಡೋಸ್ 11 ಗೆ ಅಪ್‌ಗ್ರೇಡ್ ಮಾಡಬಹುದು. JioPhone Next ನಂತೆ, JioBook ಲ್ಯಾಪ್‌ಟಾಪ್ ಕೂಡ ಅತ್ಯಂತ ಅಗ್ಗದ ಬೆಲೆಗೆ ಲಭ್ಯವಿರಲಿದೆ. ಈ ಲ್ಯಾಪ್‌ಟಾಪ್ AMD ಅಥವಾ ಇಂಟೆಲ್‌ನ x86 ಪ್ರೊಸೆಸರ್‌ಗಳ ಬದಲಾಗಿ ARM ಪ್ರೊಸೆಸರ್‌ಗಳನ್ನು ಹೊಂದಿರಲಿದೆ.
ಜಿಯೋದ ಮೊದಲ ಲ್ಯಾಪ್‌ಟಾಪ್‌ನ ವೈಶಿಷ್ಟ್ಯಗಳು :
ಸದ್ಯಕ್ಕೆ ಈ ಲ್ಯಾಪ್ಟಾಪ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ 91ಮೊಬೈಲ್‌ಗಿಂತ ಮುಂಚೆಯೇ, ಈ ಲ್ಯಾಪ್‌ಟಾಪ್ (Laptop) ಅನ್ನು ಭಾರತದ ಪ್ರಮಾಣೀಕೃತ ವೆಬ್‌ಸೈಟ್, BIS ಮತ್ತು ಗೀಕ್‌ಬೆಂಚ್‌ನಲ್ಲಿ ತೋರಿಸಲಾಗಿತ್ತು. Geekbench ಪ್ರಕಾರ, JioBook Android 11 ನಲ್ಲಿ ಕಾರ್ಯನಿರ್ವಹಿಸುತ್ತದೆ. Geekbench ಪ್ರಕಾರ, ಈ ಲ್ಯಾಪ್‌ಟಾಪ್ ಅನ್ನು MediaTek MT8788 ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ 2GBವರೆಗೆ RAM ಇರಲಿದೆ ಎನ್ನಲಾಗಿದೆ.
ಇದನ್ನೂ ಓದಿ : 8 ವರ್ಷಗಳ ನಂತರ ಹೊಸ ಲೋಗೋವನ್ನು ಪಡೆಯುತ್ತಿದೆ Google Chrome
ಪ್ರಸ್ತುತ JioBook ಲ್ಯಾಪ್‌ಟಾಪ್‌ನ ಈ ಸುದ್ದಿಗಳನ್ನು ದೃಢೀಕರಿಸಲು ಸಾಧ್ಯವಿಲ್ಲ. ಅದರ ವೈಶಿಷ್ಟ್ಯಗಳು (features of Jio book laptop) ಮತ್ತು ನಿಖರ ಬೆಲೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕಂಪನಿ ಯಾವಾಗ ನೀಡಲಿದೆ ಎನ್ನುವುದು ಕುತುಇಹಲಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.