ಈ ಟ್ರಿಕ್ ಮೂಲಕ ಸೂಪರ್ ಸ್ಪೀಡ್ ಆಗುತ್ತದೆ ನಿಮ್ಮ Mobile internet!

5Gಯೊಂದಿಗೆ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗುವ ಭಯ ಕೂಡಾ ಇದೆ. ಹಾಗಿದ್ದರೆ ಮೊಬೈಲ್ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬೇಕಾದರೆ, ನೀವು ಕೆಲವು ವಿಧಾನಗಳನ್ನು ಬಳಸಬಹುದು. 

Written by - Ranjitha R K | Last Updated : May 15, 2023, 04:19 PM IST
  • 5G ಸೇವೆಗಳನ್ನು ಭಾರತದಾದ್ಯಂತ ಪ್ರಾರಂಭ
  • ವೇಗವಾದ ಮತ್ತು ಸುಗಮ ಇಂಟರ್ನೆಟ್ ಅಕ್ಸೆಸ್
  • ಮೊಬೈಲ್ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು ಏನು ಮಾಡಬೇಕು
ಈ ಟ್ರಿಕ್ ಮೂಲಕ ಸೂಪರ್ ಸ್ಪೀಡ್ ಆಗುತ್ತದೆ ನಿಮ್ಮ Mobile internet! title=

ಬೆಂಗಳೂರು : ಜಿಯೋ ಮತ್ತು ಏರ್‌ಟೆಲ್‌ 5G ಸೇವೆಗಳನ್ನು ಭಾರತದಾದ್ಯಂತ ಪ್ರಾರಂಭಿಸಲಾಗುತ್ತಿದೆ. ಇದರಿಂದ ಬಳಕೆದಾರರು ವೇಗವಾದ ಮತ್ತು ಸುಗಮ ಇಂಟರ್ನೆಟ್  ಅಕ್ಸೆಸ್ ಅನ್ನು ನಿರೀಕ್ಷಿಸಬಹುದು. 5Gಯೊಂದಿಗೆ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗುವ ಭಯ ಕೂಡಾ ಇದೆ. ಹಾಗಿದ್ದರೆ ಮೊಬೈಲ್ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬೇಕಾದರೆ, ನೀವು ಕೆಲವು ವಿಧಾನಗಳನ್ನು ಬಳಸಬಹುದು. 

ನೆಟ್ವರ್ಕ್ ಸಂಪರ್ಕ : 
ಮೊಬೈಲ್ ಫೋನ್‌ ನಲ್ಲಿ ಸ್ಪೀಡ್ ಮತ್ತು ಸುಗಮ ಇಂಟರ್ನೆಟ್ ಅಕ್ಸೆಸ್ ಪಡೆಯಲು ಬಯಸುವುದಾದರೆ 5G ನೆಟ್‌ವರ್ಕ್‌ಗೆ  ಕನೆಕ್ಟ್ ಆಗಿದ್ದೀರಾ ಎನುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.   ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಅನ್ನು ತೆರೆಯಬಹುದು. ಇಲ್ಲಿ ನೀವು 5G ನೆಟ್‌ವರ್ಕ್‌ಗೆ ಕನೆಕ್ಟ್ ಆಗಿದ್ದೀರಾ ಅಥವಾ ಇಲ್ಲವಾ ಎನ್ನುವುದನ್ನು ನೋಡಲು ಗಳಾಗಿವೆಯೇ ಅಥವಾ  ಸೆಲ್ಯುಲಾರ್ ಆಯ್ಕೆಗೆ ಹೋಗಿ.

ಇದನ್ನೂ ಓದಿ : ರಾತ್ರಿ ವೇಳೆ Android ಬಳಕೆದಾರರ ಬೇಹುಗಾರಿಕೆ ನಡೆಸುತ್ತಾ WhatsApp!

ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡಿ : 
ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡುವ ಮೂಲಕ ಸ್ಲೋ ಇಂಟರ್ನೆಟ್ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಬಹುದು. ನಿಮ್ಮ ಫೋನ್ ಅನ್ನು  ರಿ ಸ್ಟಾರ್ಟ್ ಮಾಡಲು ಪವರ್ ಆಫ್ ಸ್ಲೈಡರ್ ಅನ್ನು ಕಾಣಿಸುವವರೆಗೆ ಪವರ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ. ಪವರ್ ಆಫ್ ಸ್ಲೈಡರ್ ಅನ್ನು ಬಲಕ್ಕೆ ಸ್ಲೈಡ್ ಮಾಡಿ. ಕೆಲವು ಸೆಕೆಂಡುಗಳ ನಂತರ ನಿಮ್ಮ ಫೋನ್ ಅನ್ನು ಮತ್ತೆ ಆನ್ ಮಾಡಿ. 

ಫೋರ್ಸ್ ಕ್ಲೋಸ್ ಅಪ್ಸ್ :
ಬ್ಯಾಕ್ ಗ್ರೌಂಡ್ ನಲ್ಲಿ ಬಹಳಷ್ಟು app ಗಳು ಓಪನ್ ಇದ್ದರೆ, ಆ ಅಪ್ ಗಳು ಡೇಟಾವನ್ನು ಬಳಸುತ್ತಿರುತ್ತವೆ.  ಇದು ನಿಮ್ಮ ಕನೆಕ್ಷನ್ ಅನ್ನು ಸ್ಲೋ ಮಾಡುತ್ತವೆ. ಅಪ್ಲಿಕೇಶನ್‌ಗಳನ್ನು ಮುಚ್ಚಲು, ನೀವು ಅಪ್ಲಿಕೇಶನ್ ಸ್ವಿಚರ್ ಅನ್ನು ತೆರೆಯಬಹುದು. ನಂತರ  ಯಾವ ಅಪ್ ಗಳನ್ನು ರನ್ ಮಾಡುವ ಅವಶ್ಯಕತೆ ಇಲ್ಲವೋ ಆ ಅಪ್ಲಿಕೇಶನ್ ಮೇಲೆ ಸ್ವೈಪ್ ಮಾಡಿ.

ಇದನ್ನೂ ಓದಿ :  Tata Nexon: ಕೇವಲ 6 ಲಕ್ಷ ರೂಪಾಯಿಗೆ ಈ ಕಾರನ್ನು ಮನೆಗೆ ತನ್ನಿ!

Cache ಕ್ಲಿಯರ್ ಮಾಡಿ :  
ನಿಮ್ಮ ಫೋನ್‌ನ ಸ್ಟೋರೇಜ್ ಇತ್ತೀಚೆಗೆ ಭೇಟಿ ನೀಡಿದ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಂದ ಡೇಟಾವನ್ನು ಸಂಗ್ರಹಿಸುತ್ತದೆ. ಇದು ಲೋಡಿಂಗ್ ಸಮಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಆದರೆ ಇದು  ಹೆಚ್ಚು ಸ್ಪೇಸ್ ತೆಗೆದುಕೊಳ್ಳುವುದರಿಂದ ಫೋನ್ ಸ್ಪೀಡ್ ನಿಧಾನವಾಗುತ್ತದೆ.  ಫೋನಿನ ಸ್ಟೋರೇಜ್ ಕ್ಲಿಯರ್ ಮಾಡಲು ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ. ಜನರಲ್ ಸ್ಟೋರೇಜ್ ಮತ್ತು ಐಕ್ಲೌಡ್ ಯುಸೇಜ್  ಮ್ಯಾನೇಜ್ ಸ್ಟೋರೇಜ್ ಗೆ ಹೋಗಿ. ಯಾವುದರ Cache ಕ್ಲಿಯರ್  ಮಾಡಬೇಕೋ ಆ ಅಪ್ಲಿಕೇಶನ್ ಮೇಲೆ ಟ್ಯಾಪ್ ಮಾಡಿ. 

ಸಾಫ್ಟ್‌ವೇರ್ ಅಪ್ಡೇಟ್ ಮಾಡಿ : 
ನಿಮ್ಮ ಫೋನ್‌ನ ಸಾಫ್ಟ್‌ವೇರ್ ಹೊಸ ವೈಶಿಷ್ಟ್ಯಗಳು ಮತ್ತು ಬಗ್ ಫಿಕ್ಸ್ ನೊಂದಿಗೆ ನಿರಂತರವಾಗಿ ಅಪ್ಡೇಟ್ ಆಗುತ್ತಿರುತ್ತದೆ. ಸಾಫ್ಟ್‌ವೇರ್‌ನ ಇತ್ತೀಚಿನ ಆವೃತ್ತಿಯನ್ನು ಚಲಾಯಿಸದಿದ್ದರೆ,  ಬಗ್ ನಿಂದಾಗಿ ಇಂಟರ್ನೆಟ್ ಸ್ಪೀಡ್ ನಿಧಾನವಾಗುವ ಸಾಧ್ಯತೆಯಿದೆ.  ಸಾಫ್ಟ್ವೇರ್ ಅಪ್ಡೇಟ್ ಮಾಡಲು ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ. ಜನರಲ್ > ಸಾಫ್ಟ್‌ವೇರ್ ಅಪ್ಡೇಟ್ ಗೆ ಹೋಗಿ. ಅಪ್ಡೇಟ್  ಲಭ್ಯವಿದ್ದರೆ, ಡೌನ್‌ಲೋಡ್ ಮಾಡಿ  ಇನ್ಸ್ಟಾಲ್ ಮೇಲೆ ಟ್ಯಾಪ್ ಮಾಡಿ.

ಇದನ್ನೂ ಓದಿ : 8 Seater Car: 6-7 ಸೀಟರ್ ಮರೆತುಬಿಡಿ… ಬಂದಿದೆ 8 ಸೀಟರ್ ಕಾರು! ಫೀಚರ್ ಪರಮಾದ್ಭುತ-ಬೆಲೆಯೂ ಭಾರೀ ಕಡಿಮೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News