5 ಸೀಟರ್ ಮೌಲ್ಯದಲ್ಲಿ ಮನೆಗೆ ತನ್ನಿ ಉತ್ತಮ ಮೈಲೇಜ್ ನೀಡಬಲ್ಲ 7 ಸೀಟರ್ ಕಾರ್

Maruti Ertiga: ಪ್ರಸ್ತುತ ಮಾರುಕಟ್ಟೆಯಲ್ಲಿ ಇಚ್ಚೆಗೆ ಅನುಗುಣವಾಗಿ ಹಾಗೂ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಹಲವು ಮಾದರಿಯ ಕಾರುಗಳು ಲಭ್ಯವಿವೆ. ನೀವು 7 ಸೀಟರ್ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇಲ್ಲಿದೆ ಉತ್ತಮ ಅವಕಾಶ. ನೀವು 5 ಸೀಟರ್ ಮೌಲ್ಯದಲ್ಲಿ  7 ಆಸನಗಳ ಕಾರ್ ಅನ್ನು ನಿಮ್ಮದಾಗಿಸಬಹುದು. 

Written by - Yashaswini V | Last Updated : Nov 2, 2023, 08:48 PM IST
  • ಕುಟುಂಬದಲ್ಲಿ ಐದಕ್ಕಿಂತ ಹೆಚ್ಚು ಜನರಿದ್ದರೆ ಅಂತಹ ಸಂದರ್ಭದಲ್ಲಿ 7 ಆಸನಗಳ ಕಾರ್ ಅವಶ್ಯಕತೆ ಇರುತ್ತದೆ.
  • ಆದರೆ, 7-ಸೀಟರ್ ಕಾರ್ ತುಂಬಾ ದುಬಾರಿ ಎಂದು ಜನರು ಭಾವಿಸುತ್ತಾರೆ.
  • ನಿಮ್ಮ ಊಹೆ ಸಂಪೂರ್ಣವಾಗಿ ಸತ್ಯವಲ್ಲ.
5 ಸೀಟರ್ ಮೌಲ್ಯದಲ್ಲಿ ಮನೆಗೆ ತನ್ನಿ ಉತ್ತಮ ಮೈಲೇಜ್ ನೀಡಬಲ್ಲ 7 ಸೀಟರ್ ಕಾರ್  title=

Maruti Ertiga: ಕಾರ್ ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಸಣ್ಣ ಕುಟುಂಬವಾಗಿದ್ದರೆ ಐದು ಆಸನಗಳ ಕಾರ್ ಸಾಕಾಗಬಹುದು. ಆದರೆ, ಕುಟುಂಬದಲ್ಲಿ ಐದಕ್ಕಿಂತ ಹೆಚ್ಚು ಜನರಿದ್ದರೆ ಅಂತಹ ಸಂದರ್ಭದಲ್ಲಿ 7 ಆಸನಗಳ ಕಾರ್ ಅವಶ್ಯಕತೆ ಇರುತ್ತದೆ. ಆದರೆ, 7-ಸೀಟರ್ ಕಾರ್ ತುಂಬಾ ದುಬಾರಿ ಎಂದು ಜನರು ಭಾವಿಸುತ್ತಾರೆ. ಆದರೆ, ನಿಮ್ಮ ಊಹೆ ಸಂಪೂರ್ಣವಾಗಿ ಸತ್ಯವಲ್ಲ. 

ವಾಸ್ತವವಾಗಿ, ಕಾರುಗಳು ಆಸನಗಳ ಹೊರತಾಗಿ ಅದರ ವೈಶಿಷ್ಟ್ಯಗಳು, ವಿಶೇಷಣಗಳು ಸೇರಿದಂತೆ ಹಲವು ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಮಾರುತಿ ಸುಜುಕಿ ಕಂಪನಿಯ ಪ್ರಸಿದ್ಧ ಕಾರುಗಳಾದ ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಾರುತಿ ಸುಜುಕಿ ಬ್ರೆಝಾದ ನೋಡುವುದಾದರೆ ಎರ್ಟಿಗಾ 7 ಸೀಟರ್ ಕಾರ್, ಬ್ರೆಝಾ 5 ಸೀಟರ್ ಕಾರ್. ಆದರೆ, ಎರ್ಟಿಗಾಗಿಂತ ಬ್ರೆಝಾ  ಕೊಂಚ ದುಬಾರಿ. 

ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಾರುತಿ ಸುಜುಕಿ ಬ್ರೆಝಾದ ಬೆಲೆ: 
7 ಸೀಟರ್ ಕಾರ್ ಆಗಿರುವ ಮಾರುತಿ ಸುಜುಕಿ ಎರ್ಟಿಗಾದ ಆರಂಭಿಕ ಬೆಲೆ 8.64 ಲಕ್ಷ ರೂ.ಗಳಾಗಿದ್ದು ಇದರ ಟಾಪ್ ವೆರಿಯಂಟ್‌ಗೆ 13.08 ಲಕ್ಷ ರೂ. (ಎಕ್ಸ್ ಶೋ ರೂಂ) ಇರಲಿದೆ. ಇದೇ ವೇಳೆ 5 ಸೀಟರ್ ಕಾರ್ ಆಗಿರುವ ಮಾರುತಿ ಸುಜುಕಿ ಬ್ರೆಝಾ ಕಾರಿನ ಆರಂಭಿಕ ಬೆಲೆ  8.29 ಲಕ್ಷರೂ.ಗಳಿಂದ ಆರಂಭವಾಗಿ 13.98 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ವರೆಗೆ ಇರುತ್ತದೆ. ಅಂದರೆ, ಎರ್ಟಿಗಾದ ಉನ್ನತ ರೂಪಾಂತರವು ಬ್ರೆಜ್ಜಾದ ಉನ್ನತ ರೂಪಾಂತರಕ್ಕಿಂತ ಅಗ್ಗವಾಗಿದೆ. ಅರ್ಥಾತ್ ನೀವು 5 ಸೀಟರ್ ಕಾರಿನ ಬೆಲೆಯಲ್ಲಿ 7 ಸೀಟರ್ ಕಾರ್ ಅನ್ನು ಖರೀದಿಸಬಹುದು. 

ಇದನ್ನೂ ಓದಿ- Automatic vs Manual ಕಾರ್ ಇವೆರಡರಲ್ಲಿ ಯಾವುದು ಉತ್ತಮ ಆಯ್ಕೆ

ಮಾರುತಿ ಸುಜುಕಿ ಎರ್ಟಿಗಾದ ಉತ್ತಮ ಮಾರಾಟದ ಹಿಂದಿನ ಪ್ರಮುಖ ಕಾರಣವೆಂದರೆ ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ 7 ಆಸನಗಳ ಕಾರ್ ಆಗಿದೆ. ಮಾರುತಿ ಸುಜುಕಿ ಎರ್ಟಿಗಾ ಸಂಪೂರ್ಣ ಕುಟುಂಬದ ಅಗತ್ಯತೆಗಳಿಗೆ ಅನುಗುಣವಾಗಿ ಹೇರಳವಾದ ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. 

ಪವರ್ಟ್ರೇನ್: 
ಮಾರುತಿ ಸುಜುಕಿ ಎರ್ಟಿಗಾ  1.5-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮಾರುತಿ ಸುಜುಕಿಯ ಬ್ರೆಝಾದಲ್ಲಿಯೂ ಬರುತ್ತದೆ. ಇದು 103 ಪಿ‌ಎಸ್ ಪವರ್ ಮತ್ತು 136.8 Nm ಟಾರ್ಕ್ ಉತ್ಪಾದನೆಯನ್ನು ನೀಡುತ್ತದೆ. ಇದು ಅತ್ಯಂತ ವಿಶ್ವಾಸಾರ್ಹ ಎಂಜಿನ್ ಮತ್ತು ಅದ್ಭುತ ಇಂಧನ ದಕ್ಷತೆಯನ್ನು ಹೊಂದಿದೆ. 

ಅತ್ಯುತ್ತಮ ಮೈಲೇಜ್: 
ಮಾರುತಿ ಸುಜುಕಿ ಎರ್ಟಿಗಾ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ. ಆದಾಗ್ಯೂ, ಇದರ ಸಿ‌ಎನ್‌ಜಿ ರೂಪಾಂತರವು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. ಗಮನಾರ್ಹವಾಗಿ, ಸಿಎನ್‌ಜಿಯಲ್ಲಿ ಎರ್ಟಿಗಾ ಮೈಲೇಜ್ ಪ್ರತಿ ಕೆಜಿಗೆ 26.11 ಕಿಮೀ (ಸಿಎನ್‌ಜಿ) ಆಗಿದೆ. ಸಿ‌ಎಮ್‌ಜಿಯಲ್ಲಿ ಇದರ ಉತ್ಪಾದನೆಯು 88 PS ಪವರ್ ಮತ್ತು 121.5 Nm ಟಾರ್ಕ್ ಆಗಿದೆ. 

ಇದನ್ನೂ ಓದಿ-  Komaki ಫೆಸ್ಟೀವ್ ಧಮಾಕ! ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸಿಗಲಿದೆ ವಿಶೇಷ ಕೊಡುಗೆ

ಮಾರುತಿ ಎರ್ಟಿಗಾ ವೈಶಿಷ್ಟ್ಯಗಳು: 
ಎರ್ಟಿಗಾ ಆಂತರಿಕ, ಬಾಹ್ಯ, ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆ, ಆಡಿಯೋ ಮತ್ತು ಮನರಂಜನೆ ಸೇರಿದಂತೆ ಕೆಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News