WhatsApp: ಈ ಕೆಟ್ಟ ಚಟದಿಂದ ವಾಟ್ಸಾಪ್ ಜನರನ್ನು 'ಅನಾರೋಗ್ಯ'ಕ್ಕೆ ತಳ್ಳುತ್ತಿದೆ!

WhatsApp: ಜನರು ದಿನವಿಡೀ ಆನ್‌ಲೈನ್‌ನಲ್ಲಿ ಇರುವುದನ್ನು ವಾಟ್ಸಾಪ್ ಅಭ್ಯಾಸ ಮಾಡಿದೆ. ಹಲವು ಬಾರಿ ತಮ್ಮ ಸಂದೇಶಕ್ಕೆ ತಕ್ಷಣ ಪ್ರತ್ಯುತ್ತರ ಬಾರದೆ ಜನ ಕಂಗಾಲಾಗುತ್ತಾರೆ. ದಿನದ 24 ಗಂಟೆಯೂ ಆನ್‌ಲೈನ್‌ನಲ್ಲಿರುವವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Written by - Yashaswini V | Last Updated : Feb 11, 2022, 02:13 PM IST
  • ಜನರು ದಿನವಿಡೀ ಆನ್‌ಲೈನ್‌ನಲ್ಲಿ ಇರುವುದನ್ನು ವಾಟ್ಸಾಪ್ ಅಭ್ಯಾಸ ಮಾಡಿದೆ
  • ತಮ್ಮ ಸಂದೇಶಕ್ಕೆ ತಕ್ಷಣ ಪ್ರತ್ಯುತ್ತರ ಬಾರದೆ ಜನ ಕಂಗಾಲಾಗುತ್ತಾರೆ
  • ಕಿರಿಕಿರಿ ಅಥವಾ ಆತಂಕದ ಭಾವನೆಯು ನಿರಂತರವಾಗಿ ಆನ್‌ಲೈನ್‌ನಲ್ಲಿರುವ ಅಡ್ಡಪರಿಣಾಮಗಳಾಗಿವೆ
WhatsApp: ಈ ಕೆಟ್ಟ ಚಟದಿಂದ ವಾಟ್ಸಾಪ್ ಜನರನ್ನು 'ಅನಾರೋಗ್ಯ'ಕ್ಕೆ ತಳ್ಳುತ್ತಿದೆ! title=
Social Media

WhatsApp: ಸಾಮಾಜಿಕ ಮಾಧ್ಯಮಗಳು, ತ್ವರಿತ ಸಂದೇಶ ಅಪ್ಲಿಕೇಶನ್ ಗಳು ನಮ್ಮ ಜೀವನವನ್ನು ಸುಲಭಗೊಳಿಸಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಾಣ್ಯಕ್ಕೆ ಎರಡು ಮುಖ ಇರುವಂತೆ ಇದರಲ್ಲಿ ಅನುಕೂಲಗಳ ಜೊತೆಗೆ ಅನಾನುಕೂಲವೂ ಇದೆ. ವಾಸ್ತವವಾಗಿ, WhatsApp ಮತ್ತು Telegram ನಂತಹ ಅಪ್ಲಿಕೇಶನ್‌ಗಳು ಜನರು ದಿನವಿಡೀ ಆನ್‌ಲೈನ್‌ನಲ್ಲಿ ಇರುವುದನ್ನು ಅಭ್ಯಾಸ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ 24 ಗಂಟೆ ಆನ್‌ಲೈನ್‌ನಲ್ಲಿರುವವರು, ಇತರ ಜನರು ತಮ್ಮಂತೆ 24 ಗಂಟೆಯೂ ಆನ್‌ಲೈನ್‌ನಲ್ಲಿ ಇರುತ್ತಾರೆ ಎಂದು ನಿರೀಕ್ಷಿಸುತ್ತಿದ್ದಾರೆ. ಇದರ ಪರಿಣಾಮ ಮೆಸೇಜ್ ಗೆ ತಕ್ಷಣ ಉತ್ತರ ಸಿಗದಿದ್ದಾಗ ಜನ ಪರದಾಡುವಂತಾಗಿದೆ. 

ಕೋವಿಡ್ (Covid-19) ಮಹಾಮಾರಿ ನಂತರ ಈ ಅಭ್ಯಾಸ ಮತ್ತಷ್ಟು ಹೆಚ್ಚಿದೆ. ತಜ್ಞರ ಪ್ರಕಾರ, ತಕ್ಷಣದ ಉತ್ತರಗಳನ್ನು ಹುಡುಕುವ ಅಭ್ಯಾಸವು ಜನರಲ್ಲಿ ಹೆಚ್ಚಾಗಿದೆ. ಸಂದೇಶಕ್ಕೆ ತ್ವರಿತ ಪ್ರತ್ಯುತ್ತರವನ್ನು ಪಡೆಯದಿರುವ ಬಗ್ಗೆ ಕಿರಿಕಿರಿಗೊಳ್ಳುವುದು ಅಥವಾ ಚಿಂತೆ ಮಾಡುವುದು ನಿರಂತರವಾಗಿ ಆನ್‌ಲೈನ್‌ನಲ್ಲಿರುವ ಅಡ್ಡಪರಿಣಾಮಗಳಾಗಿವೆ.

ಇದನ್ನೂ ಓದಿ- Airtel Down: ದೇಶಾದ್ಯಂತ Airtel ಸೇವೆ ಸ್ಥಗಿತ! ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್ ಚಲ್

ತಕ್ಷಣ ಉತ್ತರ ಸಿಗುವ ಭರವಸೆ:
ಹೆಚ್ಚಿನ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ (Smartphones) ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಾಮಾಜಿಕ ಮಾಧ್ಯಮ ಲ್ಯಾಬ್‌ನ ನಿರ್ದೇಶಕ ಪ್ರೊಫೆಸರ್ ಜೆಫ್ ಹ್ಯಾನ್‌ಕಾಕ್ ಹೇಳುತ್ತಾರೆ. ಅವರು ಸಂದೇಶಗಳಿಗೆ ತಕ್ಷಣ ಪ್ರತ್ಯುತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್‌ಗಳು ತ್ವರಿತ ಪ್ರತ್ಯುತ್ತರಗಳನ್ನು ಪಡೆಯುವ ನಿರೀಕ್ಷೆಯನ್ನು ಹೆಚ್ಚಿಸುತ್ತಿವೆ ಎಂದಿದ್ದಾರೆ.

ಇತರ ವ್ಯಕ್ತಿಯೂ ಆನ್‌ಲೈನ್‌ನಲ್ಲಿರುತ್ತಾರೆ ಎಂದು ಯೋಚಿಸುವುದು:
24 ಗಂಟೆಗಳ ಕಾಲ ಆನ್‌ಲೈನ್‌ನಲ್ಲಿರುವವರು ತಮ್ಮಂತೆ ಇನ್ನೊಬ್ಬರು ಆನ್‌ಲೈನ್‌ನಲ್ಲಿರುತ್ತಾರೆ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ ಮತ್ತು ಅವರ ಸಂದೇಶವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ. ಆದರೆ ಇದಲ್ಲದೆ ತಮ್ಮ ಜೀವನದಲ್ಲಿ ಇನ್ನೂ ಅನೇಕ ವಿಷಯಗಳಿವೆ ಎಂಬುದನ್ನು ಅವರು ಮರೆತುಬಿಡುತ್ತಾರೆ. 

ಇದನ್ನೂ ಓದಿ- ವಿಶ್ವದ ಮೊದಲ ಹಾರುವ ಬೈಕ್‌.. ಬೆಲೆ ಮತ್ತು ವೇಗ ತಿಳಿಯಿರಿ, ಈಗಲೇ ಬುಕ್ ಮಾಡಿ

ಪ್ರೊಫೆಸರ್ ಜೆಫ್ ಹ್ಯಾನ್‌ಕಾಕ್ ಅವರ ಪ್ರಕಾರ, ಸ್ಮಾರ್ಟ್‌ಫೋನ್‌ಗಳ ಮೂಲಕ ನಾವು ಪರಸ್ಪರ ಭಾವನಾತ್ಮಕವಾಗಿ ಜೋಡಿಸಲ್ಪಟ್ಟಿದ್ದೇವೆ. ಬೇರೆ  ದೇಶದಲ್ಲಿರುವ ವ್ಯಕ್ತಿಗೆ ಯಾರಾದರೂ ಸಂದೇಶವನ್ನು ಕಳುಹಿಸಿ ಮತ್ತು ಅವರಿಂದ ತಕ್ಷಣ ಯಾವುದೇ ಪ್ರತಿಕ್ರಿಯೆಯಿಲ್ಲದಿದ್ದರೆ, ಮುಂದೆ ಇರುವ ವ್ಯಕ್ತಿಯು ತನ್ನಷ್ಟಕ್ಕೆ ತಾನೇ ಬರೀ ಕೆಟ್ಟದ್ದನ್ನು ಯೋಚಿಸಲು ಆರಂಭಿಸುತ್ತಾನೆ. ತನ್ನ ದೇಶದಲ್ಲಿ ಮುಂಜಾನೆಯಾಗಿದ್ದಾಗ ಅಲ್ಲಿ ರಾತ್ರಿಯಾಗಿರಬಹುದು ಎನ್ನುವುದನ್ನು ಸಹ ಹಲವು ಸಂದರ್ಭಗಳಲ್ಲಿ ಅವರು ಗಮನಿಸುವುದಿಲ್ಲ. ಅಷ್ಟೇ ಅಲ್ಲ, ತಮ್ಮ ಸಂಗಾತಿಗೇ ಆಗಲಿ, ಸ್ನೇಹಿತರಿಗಾಗಲಿ ಅಥವಾ ಕುಟುಂಬದ ಸದಸ್ಯರಿಗೇ ಆಗಲಿ ಸಂದೇಶ ಕಳುಹಿಸಿ ಉತ್ತರ ತಕ್ಷಣವೇ ಬರದಿದ್ದರೆ, ಪ್ರೀತಿ ಕಡಿಮೆಯಾಗಿದೆ ಎಂದು ಅವರು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಇದರಿಂದ ಸಂಬಂಧದಲ್ಲಿ ಕಹಿಯೂ ಹೆಚ್ಚಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News