ಕೇವಲ 443 ರೂಪಾಯಿ ಖರ್ಚು ಮಾಡಿ ಜೀವನ ಪೂರ್ತಿ ಉಚಿತ ವಿದ್ಯುತ್ ಬಳಸಿ

Electricity Bill Check : ಇದೀಗ ಮಾರುಕಟ್ಟೆಗೆ ಬಂದಿರುವ ಸೋಲಾರ್ ಲೈಟ್ ಅನ್ನು ಚಳಿಗಾಲದಲ್ಲಿ ಬಳಸಿದರೆ, ವಿದ್ಯುತ್ ಬಿಲ್ ಸಂಪೂರ್ಣವಾಗಿ ಶೂನ್ಯವಾಗಬಹುದು.   ಸೌರಶಕ್ತಿಯನ್ನು ಸರ್ಕಾರ ಕೂಡಾ ಪ್ರೋತ್ಸಾಹಿಸುತ್ತಿದೆ.  

Written by - Ranjitha R K | Last Updated : Jan 6, 2023, 03:19 PM IST
  • ವಿದ್ಯುತ್ ಬಿಲ್ ಸಂಪೂರ್ಣ ಜೀರೋ ಆಗುವುದು
  • ಸೌರಶಕ್ತಿಯನ್ನು ಸರ್ಕಾರ ಕೂಡಾ ಪ್ರೋತ್ಸಾಹಿಸುತ್ತಿದೆ.
  • ಮಾರುಕಟ್ಟೆಗೆ ಬಂದಿದೆ ಸೂಪರ್ ಸೋಲಾರ್ ಲೈಟ್
ಕೇವಲ 443 ರೂಪಾಯಿ ಖರ್ಚು ಮಾಡಿ ಜೀವನ ಪೂರ್ತಿ ಉಚಿತ ವಿದ್ಯುತ್ ಬಳಸಿ  title=

Electricity Bill Check : ವಿದ್ಯುತ್ ಬಿಲ್‌ ಜಾಸ್ತಿ ಬರುತ್ತಿದೆ ಎನ್ನುವ ಚಿಂತೆ ನಿಮ್ಮನ್ನೂ ಕಾಡುತ್ತಿದೆಯೇ ? ಹಾಗಿದ್ದರೆ ಆ ಚಿಂತೆಗೆ ಪರಿಹಾರ ಇಲ್ಲಿದೆ. ಈ ಒಂದು ಸಾಧನವನ್ನು ಮನೆಗೆ ತರುವ ಮೂಲಕ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು  ಸರಿಯಾಗಿ ಬಳಸಿಕೊಂಡರೆ ಸಂಪೂರ್ಣ ಬಿಲ್ ಮನ್ನಾ ಆದರೂ  ಆಶ್ಚರ್ಯವಿಲ್ಲ. ವಿಶೇಷವೆಂದರೆ ಈ ಸಾಧನವನ್ನು ಕೇಂದ್ರ ಸರ್ಕಾರ ಕೂಡಾ ಪ್ರಚಾರ ಮಾಡುತ್ತಿದೆ. 

ವಿದ್ಯುತ್ ಬಿಲ್ ಅನ್ನು ಶೂನ್ಯ ಮಾಡುವುದು ಹೇಗೆ ? : 
ಈ ಸಮಯದಲ್ಲಿ ಸೌರಶಕ್ತಿಯನ್ನು ಸರ್ಕಾರ ಕೂಡಾ ಪ್ರೋತ್ಸಾಹಿಸುತ್ತಿದೆ. ಇದರೊಂದಿಗೆ ಸೌರಶಕ್ತಿಯ ಮೂಲಕ ನಡೆಯುವ ಉತ್ಪನ್ನಗಳ ಮೇಲೆ ಕೂಡಾ ಸಬ್ಸಿಡಿ ನೀಡುತ್ತಿದೆ. ಇದೀಗ ಮಾರುಕಟ್ಟೆಗೆ ಬಂದಿರುವ ಸೋಲಾರ್ ಲೈಟ್ ಅನ್ನು ಚಳಿಗಾಲದಲ್ಲಿ ಬಳಸಿದರೆ, ವಿದ್ಯುತ್ ಬಿಲ್ ಸಂಪೂರ್ಣವಾಗಿ ಶೂನ್ಯವಾಗಬಹುದು. 

ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಗೀಸರ್ ಬಕೆಟ್

ಇದರ ಬೆಲೆ ಕೇವಲ 443 ರೂ :
ಈ ಸೋಲಾರ್ ಲೈಟ್ ನ ಸಹಾಯದಿಂದ ಮನೆಯ ಹಲವು ಪ್ರದೇಶಗಳಲ್ಲಿ  ಬೆಳಕು ಹರಿಸಬಹುದು. ಮನೆಯ ಛಾವಣಿ, ಉದ್ಯಾನ, ಬಾಲ್ಕನಿ ಸೇರಿದಂತೆ ಹಲವೆಡೆ ವಿದ್ಯುತ್ ಇಲ್ಲದೇ ದೀಪಗಳನ್ನು ಉರಿಸಬಹುದು. ಈ ಸೋಲಾರ್ ಲೈಟ್‌ನ ಹೆಸರು Hardoll LED ವಾಟರ್‌ಪ್ರೂಫ್ ಫೆನ್ಸ್ ಸೋಲಾರ್ ಲೈಟ್ ಲ್ಯಾಂಪ್ . ಇದನ್ನೂ ಅಮೆಜಾನ್‌ ಮೂಲಕ ಕೇವಲ 443ರೂಪಾಯಿ  ಗೆ 
ಖರೀದಿಸಬಹುದು. 

ಈ ಲೈಟಿನ ವಿಶೇಷತೆ  :
ಕತ್ತಲಾಗುತ್ತಿದ್ದಂತೆಯೇ ಈ ಲೈಟ್ ತನ್ನಷ್ಟಕ್ಕೆ ಉರಿಯಲು ಆರಂಭಿಸುತ್ತದೆ. ಸೂರ್ಯನ ಬೆಳಕು ಬೀಳುತ್ತಿದ್ದಂತೆಯೇ ಆಫ್ ಆಗುತ್ತದೆ. ಅದನ್ನು ಮನೆಗಳಲ್ಲಿ ಸುಲಭವಾಗಿ ಅಳವಡಿಸಬಹುದಾಗಿದೆ. 6 ಗಂಟೆಗಳ ಕಾಲ್ ಚಾರ್ಜ್ ಮಾಡಿದರೆ  18 ಗಂಟೆಗಳ ಕಾಲ  ಬಳಸಬಹುದು. 

ಇದನ್ನೂ ಓದಿ : Redmi Note 12: ಕೇವಲ 19 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ

ಸೋಲಾರ್ ಪ್ಯಾನೆಲ್ ಅಳವಡಿಕೆಯಿಂದ  ಉಚಿತ ವಿದ್ಯುತ್  : 
ಇದರೊಂದಿಗೆ ಮನೆಗೆ ದೊಡ್ಡ ಸೋಲಾರ್ ಪ್ಯಾನೆಲ್ ಅಳವಡಿಸಿದರೆ ಬೆಳಕಿನ ಹೊರತಾಗಿ ಎಸಿ, ಫ್ರಿಡ್ಜ್, ಕೂಲರ್, ಟಿವಿ, ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ಚಲಾಯಿಸಬಹುದು. ಹೀಗೆ ಮಾಡುವುದರಿಂದ ವಿದ್ಯುತ್ ಬಿಲ್‌ ಗಾಗಿ ಒಂದು ರೂಪಾಯಿ ಕೂಡಾ ಖರ್ಚು ಮಾಡಬೇಕಾಗಿಲ್ಲ. ಮನೆಯಲ್ಲಿ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರದ ಅಧಿಕೃತ ವೆಬ್‌ಸೈಟ್ www.solarrooftop.gov.in ನಲ್ಲಿ ಆನ್‌ಲೈನ್‌  ಮೂಲಕ ಅರ್ಜಿ ಸಲ್ಲಿಸಬಹುದು .

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News