Samsung Offer: 21,400 ರೂಪಾಯಿ ರಿಯಾಯಿತಿ ದರದಲ್ಲಿ ಸಿಗುತ್ತಿದೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ .!

Smartphone Deal:ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿಯು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಇದೀಗ  ಈ ಸ್ಮಾರ್ಟ್‌ಫೋನ್‌ ಮೇಲೆ  ನಿರೀಕ್ಷೆಗೂ ಮೀರಿದ ರಿಯಾಯಿತಿ ಸಿಗುತ್ತಿದೆ.  

Written by - Ranjitha R K | Last Updated : Jan 4, 2023, 03:44 PM IST
  • ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿಗೆ ಉತ್ತಮ ಪ್ರತಿಕ್ರಿಯೆ
  • ಈ ಸ್ಮಾರ್ಟ್‌ಫೋನ್‌ ಮೇಲೆ ನಿರೀಕ್ಷೆಗೂ ಮೀರಿದ ರಿಯಾಯಿತಿ
  • 21,400 ರೂ ರಿಯಾಯಿತಿ ದರದಲ್ಲಿ ಫೋನ್ ಲಭ್ಯ
Samsung Offer: 21,400 ರೂಪಾಯಿ ರಿಯಾಯಿತಿ ದರದಲ್ಲಿ ಸಿಗುತ್ತಿದೆ  ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌  .!  title=

Smartphone Deal : ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿಯು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಈ ಸರಣಿಯ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ  ಈ ಸ್ಮಾರ್ಟ್‌ಫೋನ್‌ ಮೇಲೆ  ನಿರೀಕ್ಷೆಗೂ ಮೀರಿದ ರಿಯಾಯಿತಿ ಸಿಗುತ್ತಿದೆ.  ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಈ ಸ್ಮಾರ್ಟ್‌ಫೋನ್‌  ಗಳನ್ನು 
ಮಾರಾಟ ಮಾಡಲಾಗುತ್ತಿದೆ. 

ಸ್ಮಾರ್ಟ್‌ಫೋನ್‌ ಮೇಲೆ  ಎಷ್ಟು ರಿಯಾಯಿತಿ : 
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 22 ಪ್ಲಸ್ 5 ಜಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಮೇಲೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ನ ಮೂಲ ಬೆಲೆ  1,019,99  ರೂಪಾಯಿ. ಆದರೆ,  ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ 31% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.  31% ರಿಯಾಯಿತಿಯ ನಂತರ, ಗ್ರಾಹಕರು ಈ ಸ್ಮಾರ್ಟ್‌ಫೋನ್ ಅನ್ನು ಕೇವಲ  69999 ರೂಪಾಯಿಗೆ  ಖರೀದಿಸಬಹುದು.  ಇಷ್ಟಲ್ಲದೆ   ಫ್ಲಿಪ್‌ಕಾರ್ಟ್‌ನಲ್ಲಿ ಮತ್ತೊಂದು  ಉತ್ತಮ ಆಫರ್ ನೀಡಲಾಗುತ್ತಿದೆ. 

ಇದನ್ನೂ ಓದಿ : ಮೇಕ್ ಇನ್ ಇಂಡಿಯಾ : ಭಾರತ ರಕ್ಷಣಾ ವಲಯದಲ್ಲಿ ಹೀಗೊಂದು ಕ್ರಾಂತಿಕಾರಿ ಬದಲಾವಣೆ

ವಿನಿಮಯ ಬೋನಸ್  ಮೂಲಕ ಇನ್ನಷ್ಟು ಅಗ್ಗ : 
69999 ಮೌಲ್ಯದ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ 21,400 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ ಇದು ವಿನಿಮಯ ಬೋನಸ್ ಆಗಿರಲಿದೆ. ನಿಮ್ಮಲ್ಲಿ ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್‌ಫೋನ್ ಇದ್ದರೆ ಮಾತ್ರ ನೀವು ಈ ಎಕ್ಸ್‌ಚೇಂಜ್ ಬೋನಸ್‌ನ ಲಾಭವನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ, ಗ್ರಾಹಕರು ಗರಿಷ್ಠ 21,400 ರೂ. ರಿಯಾಯಿತಿಯನ್ನು ಪಡೆಯಬಹುದು.

ಇದನ್ನೂ ಓದಿ : ಅತಿ ಹೆಚ್ಚು ಮಾರಾಟವಾಗುತ್ತಿರುವುದು ಈ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳೇ !

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News