ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್‌ ಮಾಡುವಂತಿಲ್ಲ: ಅಪ್ಪಿತಪ್ಪಿ ಮಾಡಿದ್ರೆ ಜೀವಾವಧಿ ಶಿಕ್ಷೆ ಗ್ಯಾರಂಟಿ! ರಾಜ್ಯ ಸರ್ಕಾರದಿಂದ ಬಂತು ಕಠಿಣ ರೂಲ್ಸ್‌

 new social media policy: ಯುಪಿಯಲ್ಲಿ ಜಾರಿಗೊಳಿಸಲಾದ ಹೊಸ ಸಾಮಾಜಿಕ ಮಾಧ್ಯಮ ಆಕ್ಷೇಪಾರ್ಹ ನೀತಿಯ ಉದ್ದೇಶವು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ದ್ವೇಷ ಮತ್ತು ನಕಲಿ ಸುದ್ದಿಗಳನ್ನು ನಿಲ್ಲಿಸುವುದಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.  

Written by - Bhavishya Shetty | Last Updated : Sep 1, 2024, 07:59 PM IST
    • ರಾಜ್ಯದಲ್ಲಿ ಹೊಸ ಸಾಮಾಜಿಕ ಮಾಧ್ಯಮ ನೀತಿಯನ್ನು ಬಿಡುಗಡೆ ಮಾಡಿದೆ.
    • ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಆಕ್ಷೇಪಾರ್ಹ ಪೋಸ್ಟ್‌ ಶೇರ್‌ ಮಾಡುವಂತಿಲ್ಲ.
    • ಈ ನೀತಿಯಡಿಯಲ್ಲಿ ಮೂರು ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆಗೆ ಗುರಿಯಾಗಬೇಕಾದೀತು.
ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್‌ ಮಾಡುವಂತಿಲ್ಲ: ಅಪ್ಪಿತಪ್ಪಿ ಮಾಡಿದ್ರೆ ಜೀವಾವಧಿ ಶಿಕ್ಷೆ ಗ್ಯಾರಂಟಿ! ರಾಜ್ಯ ಸರ್ಕಾರದಿಂದ ಬಂತು ಕಠಿಣ ರೂಲ್ಸ್‌  title=
File Photo

ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹೊಸ ಸಾಮಾಜಿಕ ಮಾಧ್ಯಮ ನೀತಿಯನ್ನು ಬಿಡುಗಡೆ ಮಾಡಿದೆ. ಅದರ ಅಡಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಆಕ್ಷೇಪಾರ್ಹ ಪೋಸ್ಟ್‌ ಶೇರ್‌ ಮಾಡುವಂತಿಲ್ಲ. ಒಂದು ವೇಳೆ ಪೋಸ್ಟ್‌ ಮಾಡಿದರೆ, ಈ ನೀತಿಯಡಿಯಲ್ಲಿ ಮೂರು ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆಗೆ ಗುರಿಯಾಗಬೇಕಾದೀತು.

ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 10 ವಿಕೆಟ್‌ ಕಿತ್ತು ಕಮಾಲ್: ಮಾಂತ್ರಿಕ ಆಟಕ್ಕೆ ಬೆಚ್ಚಿತು ಕ್ರಿಕೆಟ್‌ ಲೋಕ

ಆಕ್ಷೇಪಾರ್ಹ ಪೋಸ್ಟ್ ನೀತಿ:
ಯುಪಿಯಲ್ಲಿ ಜಾರಿಗೊಳಿಸಲಾದ ಹೊಸ ಸಾಮಾಜಿಕ ಮಾಧ್ಯಮ ಆಕ್ಷೇಪಾರ್ಹ ನೀತಿಯ ಉದ್ದೇಶವು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ದ್ವೇಷ ಮತ್ತು ನಕಲಿ ಸುದ್ದಿಗಳನ್ನು ನಿಲ್ಲಿಸುವುದಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.

ಸಾಮಾಜಿಕ ಮಾಧ್ಯಮ ನೀತಿ:
ಹೆಚ್ಚುವರಿಯಾಗಿ, ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಗಳಿಸುವವರಿಗೆ ಸರ್ಕಾರ ಹೊಸ ನೀತಿಯನ್ನು ಸಹ ತಂದಿದೆ. ಸರ್ಕಾರದ ಕೆಲಸವನ್ನು ಪ್ರಚಾರ ಮಾಡುವವರಿಗೆ ಈಗ ಅವರ ಫಾಲೋವರ್ಸ್ʼಗಳೆಷ್ಟಿದ್ದಾರೆ ಎಂಬುದರ ಪ್ರಕಾರ ವೇತನ ನೀಡಲಾಗುತ್ತದೆ. ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಭಾವಿಗಳು, ಖಾತೆದಾರರು ಮತ್ತು ಆಪರೇಟರ್‌ಗಳಿಗೆ ತಿಂಗಳಿಗೆ ಕ್ರಮವಾಗಿ ರೂ 5 ಲಕ್ಷ, ರೂ 4 ಲಕ್ಷ, ರೂ 3 ಲಕ್ಷ ಮತ್ತು ರೂ 2 ಲಕ್ಷ ಪಾವತಿಸಲಾಗುತ್ತದೆ.

ಇದನ್ನೂ ಓದಿ: ಮಲಗುವಾಗ ದಿಂಬಿನ ಬಳಿ ಈ ವಸ್ತು ಇಟ್ಟರೆ ಬೆಳಗಾಗುವಷ್ಟರಲ್ಲಿ ನಾರ್ಮಲ್‌ ಆಗುತ್ತೆ ಬ್ಲಡ್‌ ಶುಗರ್‌! ಮಧುಮೇಹಿಗಳಿಗೆ ಇದರ ಪರಿಮಳವೇ ಅಮೃತವಿದ್ದಂತೆ...

ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರ ಪ್ರಕಾರ, “ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯುಟ್ಯೂಬ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಯುಪಿ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಕುರಿತು ಕಂಟೆಂಟ್/ಟ್ವೀಟ್/ವೀಡಿಯೋ/ಪೋಸ್ಟ್/ರೀಲ್‌ಗಳನ್ನು ತಯಾರಿಸಲು ಮತ್ತು ಪ್ರದರ್ಶಿಸಲು ಜಾಹೀರಾತು ನೀಡಲು ಏಜೆನ್ಸಿಗಳು/ಸಂಸ್ಥೆಗಳನ್ನು ಪಟ್ಟಿ ಮಾಡಲು ಸರ್ಕಾರ ನಿರ್ಧರಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News