ಸ್ಟ್ರಾಂಗ್ ಬ್ಯಾಟರಿ ಮತ್ತು ಸ್ಟ್ರಾಂಗ್ ಕ್ಯಾಮೆರಾದೊಂದಿಗೆ ಬರುತ್ತಿದೆ Samsung 5G ಫೋನ್, ಬೆಲೆ ಮತ್ತು ಫೀಚರ್‌ಗಳೇನಿರಲಿದೆ ತಿಳಿಯಿರಿ

Galaxy F42 5G ಯ ​​6GB RAM + 128GB ಸ್ಟೋರೇಜ್ ಬೆಲೆ  20,999 ರೂ. ಆಗಿರುತ್ತದೆ. ಇನ್ನು 8GB RAM + 128GB ಸ್ಟೋರೇಜ್ ರೂಪಾಂತರವು . 22,999 ರೂ. ಗೆ ಲಭ್ಯವಿರುತ್ತದೆ. 

Written by - Ranjitha R K | Last Updated : Sep 28, 2021, 05:03 PM IST
  • ನಾಳೆ ಗ್ಯಾಲಕ್ಸಿ ಎಫ್ 42 5 ಜಿ ಅನ್ನು ಬಿಡುಗಡೆ
  • ಗ್ಯಾಲಕ್ಸಿ F42 5G ಯ ​​6GB RAM + 128GB ಸ್ಟೋರೇಜ್ ಬೆಲೆ 20,999 ರೂ
  • ಗ್ಯಾಲಕ್ಸಿ ಎಫ್ 42 5 ಜಿ 6.6 ಇಂಚಿನ ಡಿಸ್ ಪ್ಲೇಯನ್ನು ಹೊಂದಿರುತ್ತದೆ.
ಸ್ಟ್ರಾಂಗ್ ಬ್ಯಾಟರಿ ಮತ್ತು ಸ್ಟ್ರಾಂಗ್ ಕ್ಯಾಮೆರಾದೊಂದಿಗೆ ಬರುತ್ತಿದೆ Samsung  5G ಫೋನ್, ಬೆಲೆ ಮತ್ತು ಫೀಚರ್‌ಗಳೇನಿರಲಿದೆ ತಿಳಿಯಿರಿ title=
ನಾಳೆ ಗ್ಯಾಲಕ್ಸಿ ಎಫ್ 42 5 ಜಿ ಅನ್ನು ಬಿಡುಗಡೆ (photo zee news)

ನವದೆಹಲಿ : ಸ್ಯಾಮ್‌ಸಂಗ್ Galaxy F42 5G ಅನ್ನು ನಾಳೆ ಅಂದರೆ ಸೆಪ್ಟೆಂಬರ್ 29 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ, ದೇಶದಲ್ಲಿ ಸ್ಮಾರ್ಟ್‌ಫೋನ್‌ನ ಬೆಲೆ ಸೋರಿಕೆಯಾಗಿದೆ.  91Mobilesನ ರಿಟೈಲ್ ಸೊರ್ಸ್ ಪ್ರಕಾರ,  Galaxy  F42 5G 6GB + 128G ಮತ್ತು 8GB + 128GB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. ಎರಡೂ ರೂಪಾಂತರಗಳ ಬೆಲೆ ಉಳಿದ 5G ಸ್ಮಾರ್ಟ್ ಫೋನ್ ಗಳಿಗಿಂತ ಕಡಿಮೆ ಎಂದು ಹೇಳಲಾಗಿದೆ.  

Galaxy F42 5G ಬೆಲೆ :
Galaxy F42 5G ಯ ​​6GB RAM + 128GB ಸ್ಟೋರೇಜ್ ಬೆಲೆ  20,999 ರೂ. ಆಗಿರುತ್ತದೆ. ಇನ್ನು 8GB RAM + 128GB ಸ್ಟೋರೇಜ್ ರೂಪಾಂತರವು . 22,999 ರೂ. ಗೆ ಲಭ್ಯವಿರುತ್ತದೆ. ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ (Online) ಫೋನ್‌ಗಳ ಬೆಲೆ  ದುಬಾರಿಯಾಗಿರುತ್ತದೆ. ಗ್ಯಾಲಕ್ಸಿ ಎಫ್ 42 5 ಜಿ ಕಡಿಮೆ ಬೆಲೆಗೆ ಲಭ್ಯವಿರಲಿದೆ ಎನ್ನಲಾಗಿದೆ. ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿದ್ದು,  ಹ್ಯಾಂಡ್‌ಸೆಟ್‌ನ ನಿಖರವಾದ ಬೆಲೆಯನ್ನು ತಿಳಿದುಕೊಳ್ಳಲು ನಾವು ಹೆಚ್ಚು ಕಾಯಬೇಕಾಗಿಲ್ಲ.

ಇದನ್ನೂ ಓದಿ:  Online Game ಆಡುವವರೇ ಎಚ್ಚರ..! ನೀವು ಗೇಮ್ ನಲ್ಲಿ ಮುಳುಗಿರುವಾಗ ಹ್ಯಾಕರ್ ಗಳು ಖಾಲಿ ಮಾಡಿಬಿಡಬಹುದು ನಿಮ್ಮ ಖಾತೆ

ಈ ಸ್ಪೆಸಿಫಿಕೇಶನ್  ಗ್ಯಾಲಕ್ಸಿ ಎಫ್ 42 5 ಜಿ ನಲ್ಲಿರಬಹುದು : 
ಭಾರತಕ್ಕಾಗಿ ಮುಂಬರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung glaxy) ಎಫ್ 42 5 ಜಿ, ಮರು ಬ್ರಾಂಡ್ ಮಾಡಿದ Galaxy Wide 5ಎಂದು ನಿರೀಕ್ಷಿಸಲಾಗಿದೆ. ಇದು 6.6-ಇಂಚಿನ FHD + LCD ಪ್ಯಾನೆಲ್ ಅನ್ನು 90Hz ರಿಫ್ರೆಶ್ ರೇಟ್ , ಮೀಡಿಯಾ ಟೆಕ್ ಡೈಮೆನ್ಷನ್ 700 ಚಿಪ್‌ಸೆಟ್, 64MP (ವೈಡ್) + 5MP (ಅಲ್ಟ್ರಾ-ವೈಡ್) + 2MP (ಡೆಪ್ತ್) ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 8MP ಫ್ರಂಟ್ ಫೇಸಿಂಗ್ ಕ್ಯಾಮೆರಾ, A ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಆಂಡ್ರಾಯ್ಡ್ 11, 5,000mAh ಬ್ಯಾಟರಿ ಮತ್ತು 15W ಫಾಸ್ಟ್ ಚಾರ್ಜಿಂಗ್ ಆಧಾರಿತ ಒನ್ UI ಕೋರ್ 3.x ನಂತಹ ವೈಶಿಷ್ಟ್ಯಗಳೊಂದಿಗೆ ಬರಬಹುದು. 

ಇದನ್ನೂ ಓದಿ:  ಐಫೋನ್ 12 ಮೇಲೆ ಇದುವರೆಗಿನ ಅತಿ ದೊಡ್ಡ ರಿಯಾಯಿತಿ, ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News