ಇದ್ದಕ್ಕಿದ್ದಂತೆಯೇ ಪ್ಯಾನಲ್ ನಿಂದ ಕಳಚಿ ಬಿತ್ತು Xiaomi TVಯ LCD ಸ್ಕ್ರೀನ್..! ವಿಡಿಯೋ ನೋಡಿದ ಕಂಪನಿ ಹೇಳಿದ್ದೇನು ?

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಬಳಕೆದಾರರು Xiaomi ಟಿವಿಯ LCD ಪರದೆಯು ಬೀಳುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಬಳಕೆದಾರರ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.

Written by - Ranjitha R K | Last Updated : Jun 4, 2022, 02:12 PM IST
  • TVಯ LCD ಪರದೆಯು ಕಳಚಿ ಬೀಳುವ ವೀಡಿಯೊ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಶೇರ್
  • ಗ್ರಾಹಕರಿಗೆ ರೀಫಂಡ್ ಮಾಡಿದ ಕಂಪನಿ
ಇದ್ದಕ್ಕಿದ್ದಂತೆಯೇ ಪ್ಯಾನಲ್ ನಿಂದ ಕಳಚಿ ಬಿತ್ತು Xiaomi TVಯ   LCD ಸ್ಕ್ರೀನ್..! ವಿಡಿಯೋ ನೋಡಿದ ಕಂಪನಿ ಹೇಳಿದ್ದೇನು ?  title=
Xiaomi TV (file photo)

ಬೆಂಗಳೂರು : ಸ್ಮಾರ್ಟ್‌ಫೋನ್‌ ಬಿಸಿಯಾಗುವುದು, ಎಲೆಕ್ಟ್ರಿಕ್‌ ಸ್ಕೂಟರ್‌ ಸ್ಫೋಟಗೊಳ್ಳುವುದು, ಎಲೆಕ್ಟ್ರಿಕ್‌ ಸ್ಕೂಟರ್‌ ಕೆಟ್ಟು ಹೋಗುವುದು ಮುಂತಾದ ಘಟನೆಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಸ್ಮಾರ್ಟ್ ಟಿವಿಯ ಸ್ಕ್ರೀನ್ ಪ್ಯಾನಲ್ ನಿಂದ ಬೇರ್ಪಟ್ಟು ಬೀಳುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ?  Xiaomi TVಯ LCD ಪರದೆಯು ಕಳಚಿ ಬೀಳುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಗ್ರಾಹಕರೊಬ್ಬರು ಶೇರ್ ಮಾಡಿದ್ದಾರೆ. ಈ ವಿಡಿಯೋ ಮನೆಯಲ್ಲಿದ್ದ ಸಿಸಿಟಟಿವಿ ಯಲ್ಲಿ ಸೆರೆಯಾಗಿದೆ.  

ವೀಡಿಯೊದಲ್ಲಿ, Xiaomi TV ಯ LCD ಪರದೆಯು ಪ್ಯಾನೆಲ್‌ನಿಂದ ಬೇರ್ಪಟ್ಟು ಕಳಚಿ ಬೀಳುವುದನ್ನು ಕಾಣಬಹುದು. ಹೀಗೆ ಇದ್ದಕ್ಕಿದ್ದಂತೆ ಟಿವಿ ಪರದೆಯು ಬೀಳುವ ವೀಡಿಯೊವನ್ನು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.  ಅಲ್ಲದೆ ಯಾವುದೇ ರೀತಿಯ ಬಾಹ್ಯ ಒತ್ತಡವಿಲ್ಲದಿದ್ದರೂ ಸ್ಮಾರ್ಟ್ ಟಿವಿಯ ಪರದೆ ಕಳಚಿ ಬಿಒದ್ದಿದೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ. 

ಇದನ್ನೂ ಓದಿ : ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್ ಫೋನ್- ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ!

 ಗ್ರಾಹಕರಿಗೆ ರೀಫಂಡ್ ಮಾಡಿದ ಕಂಪನಿ :
ಬಳಕೆದಾರರು ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ  Xiaomi ಬಳಕೆದಾರರ ದೂರಿಗೆ ತ್ವರಿತವಾಗಿ ಸ್ಪಂದಿಸಿದೆ. ಮಾತ್ರವಲ್ಲ ಮುಂದೆ ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದೆ. ಇದಾದ ನಂತರ  ಟಿವಿ ಬಳಕೆದಾರರು ತಮ್ಮ ಪೋಸ್ಟ್ ಅನ್ನು ಅಪ್ಡೇಟ್ ಮಾಡಿದ್ದಾರೆ. ಕಂಪನಿಯೂ ರೀಫಂಡ್ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಬಳಕೆದಾರರ ಮನೆಯಲ್ಲಿದ್ದ ಟಿವಿಯನ್ನು ಮರು ದಿನವೇ ತೆಗೆದುಕೊಂಡು ಹೋಗಿದ್ದಾರೆ.  ಆದರೂ  ಸ್ಮಾರ್ಟ್ ಟಿವಿಯ ಸ್ಕ್ರೀನ್ ಪ್ಯಾನಲ್ ನಿಂದ ಬೇರ್ಪಟ್ಟು ಕೆಳಗೆ ಬಿದ್ದಿರುವುದಕ್ಕೆ ಏನು ಕಾರಣ ಎನ್ನುವುದು ಇನ್ನು ಕೂಡಾ ತಿಳಿದಿಲ್ಲ. 

ವರದಿಯ ಪ್ರಕಾರ, ಇದಕ್ಕೂ ಮೊದಲು ಕೂಡಾ ಕಚೇರಿಯ ರಿಸೆಪ್ಶನ್ ಪ್ರದೇಶದಲ್ಲಿ ಅಳವಡಿಸಲಾದ ಸ್ಮಾರ್ಟ್ ಟಿವಿಯ ಎಲ್‌ಸಿಡಿ ಪರದೆ ಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದು ಕೂಡಾ ಕಚೇರಿಯಲ್ಲಿ ಅಳವ್ದಿಸ್ಲಾಗಿದ್ದ್ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆದರೆ ಆ ಸಂದರ್ಭದಲ್ಲಿ  ಟಿವಿ ತುಂಬಾ ಹಳೆಯದಾಗಿದೆ ಎಂದು ಕಂಪನಿ ತಿಳಿಸಿತ್ತು ಎನ್ನಲಾಗಿದೆ. 

ಇದನ್ನೂ ಓದಿ : Smart 4g Electric Meters: ಬಂದಿದೆ 4G ವಿದ್ಯುತ್ ಬಿಲ್ ಮೀಟರ್ .! ಇದು ಹೇಗೆ ಕೆಲಸ ಮಾಡಲಿದೆ ಗೊತ್ತಾ ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News