ಒಂದೇ ವರ್ಷದಲ್ಲಿ ಮೂವರು ದೆಹಲಿಯ ಮಾಜಿ ಮುಖ್ಯಮಂತ್ರಿಗಳ ನಿಧನ

ಮಂಗಳವಾರ ರಾತ್ರಿ ಸುಷ್ಮಾ ಸ್ವರಾಜ್ ಅವರ ನಿಧನದೊಂದಿಗೆ, ರಾಷ್ಟ್ರ ರಾಜಧಾನಿ ದೆಹಲಿ ಮೂರು ಮಾಜಿ ಮುಖ್ಯಮಂತ್ರಿಗಳನ್ನು ಒಂದು ವರ್ಷದೊಳಗೆ ಕಳೆದುಕೊಂಡಿದೆ.

Last Updated : Aug 7, 2019, 02:56 PM IST
ಒಂದೇ ವರ್ಷದಲ್ಲಿ ಮೂವರು ದೆಹಲಿಯ ಮಾಜಿ ಮುಖ್ಯಮಂತ್ರಿಗಳ ನಿಧನ  title=

ನವದೆಹಲಿ: ಮಂಗಳವಾರ ರಾತ್ರಿ ಸುಷ್ಮಾ ಸ್ವರಾಜ್ ಅವರ ನಿಧನದೊಂದಿಗೆ, ರಾಷ್ಟ್ರ ರಾಜಧಾನಿ ದೆಹಲಿ ಮೂರು ಮಾಜಿ ಮುಖ್ಯಮಂತ್ರಿಗಳನ್ನು ಒಂದು ವರ್ಷದೊಳಗೆ ಕಳೆದುಕೊಂಡಿದೆ.

1998 ರಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ಕಳೆದ ತಿಂಗಳು ಜುಲೈ ನಲ್ಲಿ ಸತತ ಮೂರು ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಶೀಲಾ ದೀಕ್ಷಿತ್ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು.

ಸುಷ್ಮಾ ಸ್ವರಾಜ್ ಅವರಿಗೆ 67 ವಯಸ್ಸಾಗಿದ್ದರೆ, ಶೀಲಾ ದೀಕ್ಷಿತ್ ಅವರಿಗೆ 81 ವರ್ಷ ವಯಸ್ಸಾಗಿತ್ತು. ಇನ್ನು 1993-96ರವರೆಗೆ ಮುಖ್ಯಮಂತ್ರಿಯಾಗಿದ್ದ ಮದನ್ ಲಾಲ್ ಖುರಾನಾ ಕೂಡ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಧನರಾದರು. ಆ ಮೂಲಕ ದೆಹಲಿ ಕೇವಲ ಒಂದೇ ವರ್ಷದ ಅವಧಿಯಲ್ಲಿ ತನ್ನ ಮೂವರು ಮಾಜಿ ಸಿಎಂಗಳನ್ನು ಕಳೆದುಕೊಂಡಿದೆ.

Trending News