Viral Video: ಶಬ್ಬಾಷ್..‌ ಧೈರ್ಯ ಅಂದ್ರೆ ಇದು.. ಅಸಭ್ಯವಾಗಿ ವರ್ತಿಸಿದ ಬಸ್‌ ಕಂಡಕ್ಟರ್‌ಗೆ ಬರೋಬ್ಬರಿ ಚಳಿ ಬಿಡಿಸಿದ ಯುವತಿ! ವಿಡಿಯೋ ವೈರಲ್

Girl Beats Bus Conductor: ಸಾರ್ವಜನಿಕ ಸ್ಥಳಗಳಲ್ಲಿ ಈವ್-ಟೀಸಿಂಗ್ ಘಟನೆಗಳು ಸಾಮಾನ್ಯವಾಗಿ ಗಂಭೀರ ಕಳವಳವನ್ನು ಉಂಟುಮಾಡುತ್ತವೆ. ಕೆಲವು ದಿನಗಳ ಹಿಂದೆ ಇವೆಲ್ಲ ಕಾಮನ್‌ ಎಂದು ಮೌನವಾಗಿರುತ್ತಿದ್ದರು. ಆದರೆ, ಇತ್ತೀಚೆಗೆ ಪೊಲೀಸರು ನೀಡಿದ ಜಾಗೃತಿಯಿಂದಾಗಿ ಅನೇಕ ಸಂತ್ರಸ್ತರು ಈಗ ಬಲಶಾಲಿಯಾಗುತ್ತಿದ್ದಾರೆ.  

Written by - Savita M B | Last Updated : Oct 11, 2024, 08:45 PM IST
  • ಸಾರ್ವಜನಿಕ ಸ್ಥಳಗಳಲ್ಲಿ ಈವ್-ಟೀಸಿಂಗ್ ಘಟನೆಗಳು ಸಾಮಾನ್ಯವಾಗಿ ಗಂಭೀರ ಕಳವಳವನ್ನು ಉಂಟುಮಾಡುತ್ತವೆ
  • ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Viral Video: ಶಬ್ಬಾಷ್..‌ ಧೈರ್ಯ ಅಂದ್ರೆ ಇದು.. ಅಸಭ್ಯವಾಗಿ ವರ್ತಿಸಿದ ಬಸ್‌ ಕಂಡಕ್ಟರ್‌ಗೆ ಬರೋಬ್ಬರಿ ಚಳಿ ಬಿಡಿಸಿದ ಯುವತಿ! ವಿಡಿಯೋ ವೈರಲ್ title=

Viral Video: ಸಾರ್ವಜನಿಕ ಸ್ಥಳಗಳಲ್ಲಿ ಈವ್-ಟೀಸಿಂಗ್ ಘಟನೆಗಳು ಸಾಮಾನ್ಯವಾಗಿ ಗಂಭೀರ ಕಳವಳವನ್ನು ಉಂಟುಮಾಡುತ್ತವೆ. ಹಿಂದಿನ ಕೆಲವು ವರ್ಷಗಳ ಬಗ್ಗೆ ಗಮನಿಸಿದರೇ ಇಂತಹ ಕೃತ್ಯಕ್ಕೆ ಒಳಗಾದರೂ ಕೆಲವರು ಮೌನವಾಗಿರುತ್ತಿದ್ದರು. ಆದರೆ, ಪೊಲೀಸರು ನೀಡಿದ ಜಾಗೃತಿಯಿಂದಾಗಿ ಅನೇಕ ಸಂತ್ರಸ್ತರು ಈಗ ಬಲಶಾಲಿಯಾಗುತ್ತಿದ್ದಾರೆ. ಇಂತಹ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಾಲಾ ವಿದ್ಯಾರ್ಥಿಯೊಬ್ಬಳು ಬಸ್ ಕಂಡಕ್ಟರ್‌ನ ಅಸಭ್ಯ ವರ್ತನೆಗೆ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ-ಕನ್ನಡದ ಕ್ರಾಂತಿಕಾರಿ ಸಿನಿಮಾ ಸ್ವರಾಜ್ಯ 1942' ಚಿತ್ರದ ಟೀಸರ್ ಬಿಡುಗಡೆ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಸ್ ಕಂಡಕ್ಟರ್ ಶಾಲಾ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದನ್ನು ಸಹಿಸದ ಯುವತಿ ಆಗಲೇ ಬಸ್ ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹುಡುಗಿಯ ಧೈರ್ಯವನ್ನು ಎಲ್ಲರೂ ಮೆಚ್ಚಿ.. ಹುಡುಗಿಯರು ಹೀಗೇ ಇರಬೇಕು, ಈವ್ ಟೀಸಿಂಗ್ ಮಾಡಿದರೆ ಕಪಾಳಮೋಕ್ಷ ಮಾಡಬೇಕು ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ತಕ್ಕ ಪಾಠ ನೀಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ-ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ !ಎಲಿಮಿನೇಶನ್ ನಲ್ಲಿ ಬಿಗ್ ಟ್ವಿಸ್ಟ್ !ಎರಡನೇ ವಾರವೇ ಯಾರೂ ಊಹಿಸದ ನಿರ್ಧಾರ ತೆಗೆದುಕೊಂಡ Biggboss

ಇನ್ನು ಸದ್ಯ ಪೊಲೀಸರು ಚಿಕ್ಕಂದಿನಿಂದಲೇ ಮಹಿಳೆಯರಿಗೆ ಈವ್ ಟೀಸಿಂಗ್ ಬಗ್ಗೆ ಶಿಕ್ಷಣ ನೀಡುತ್ತಿದ್ದಾರೆ. ಇದರಿಂದಾಗಿ ಹೆಣ್ಣು ಮಕ್ಕಳು ಧೈರ್ಯಶಾಲಿಯಾಗುತ್ತಿದ್ದಾರೆ... ಮಹಿಳೆಯರು ಸಮಸ್ಯೆಗಳಿಗೆ ಹೆದರದೆ ಮುನ್ನಡೆಯುತ್ತಿದ್ದಾರೆ. ಅವರು ತಮ್ಮ ಪರವಾಗಿ ತಾವೇ ನಿಲ್ಲಬೇಕು ಯಾರೂ ಅವರಿಗಾಗಿ ಬರುವುದಿಲ್ಲ ಎಂದು ಅರಿತಿದ್ದಾರೆ... ಕಿರುಕುಳದ ಸಂದರ್ಭದಲ್ಲಿ ಮೌನವಾಗಿ ಉಳಿಯುವ ಬದಲು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News