Viral Video: ಶೂನಲ್ಲಿ ಅಡಗಿ ಕುಳಿತ್ತಿದ್ದ ಬುಸ್ ಬುಸ್ ನಾಗಪ್ಪ..!

ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಮೋಹನ್ ಮರಿ ನಾಗರವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.

Written by - Puttaraj K Alur | Last Updated : Jun 27, 2022, 02:30 PM IST
  • ಶೂ ಧರಿಸುವ ಮುನ್ನ ಒಂದ್ಸಾರಿ ಈ ವಿಡಿಯೋ ನೋಡಿ
  • ಶೂನಲ್ಲಿ ಅವಿತು ಕುಳಿತುಕೊಂಡಿದ್ದ ಮರಿ ನಾಗರಹಾವು
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ವಿಡಿಯೋ
Viral Video: ಶೂನಲ್ಲಿ ಅಡಗಿ ಕುಳಿತ್ತಿದ್ದ ಬುಸ್ ಬುಸ್ ನಾಗಪ್ಪ..!  title=
ಶೂನಲ್ಲಿ ಕುಳಿತ್ತಿದ್ದ ವಿಷಸರ್ಪ…!

ಬೆಂಗಳೂರು: ಹಾವು ನೋಡಿದ್ರೆ ಸಾಕು ಮಾರುದ್ದ ಓಡುವ ಜನರಿದ್ದಾರೆ. ಹಾವು ಕಂಡರೆ ಎಂಥವರಿಗೂ ಮೈಯಲ್ಲಿ ನಡುಕ ಉಂಟಾಗುತ್ತದೆ. ಎಲ್ಲಾದರೂ ದಾರಿಯಲ್ಲಿ ಹಾವು ಕಂಡರೆ ಸಾಕು ತಿರುಗಿ ನೋಡದೆ ಓಡುತ್ತೇವೆ. ಹಾವಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಇದೇ ಭಯ ಇರುತ್ತದೆ. ಅಂತದ್ರಲ್ಲಿ ಮನೆ ಎದುರು ಹಾವು ಪ್ರತ್ಯಕ್ಷವಾದರೆ ಮಾಲೀಕರಿಗೆ ಏನಾಗಬೇಡಿ ಹೇಳಿ!

ಹೌದು, ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ದಿನೇ ದಿನೇ ವಿಷ ಸರ್ಪಗಳ ಹಾವಳಿ ಹಚ್ಚಾಗ್ತಿದೆ. ಎಚ್‍ಬಿಆರ್ ಲೇಔಟ್‍ನ ಮನೆಯಲ್ಲಿ ನಾಗರ ಹಾವಿನ ಮರಿಯೊಂದು ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಶೂ ಒಳಗೆ ಅವಿತು ಕುಳಿತಿದ್ದ ಮರಿ ನಾಗರವನ್ನು ಕಂಡ ಮನೆಮಂದಿ ಶಾಕ್ ಆಗಿದ್ದಾರೆ.

ಇದನ್ನೂ ಓದಿ: Rare Lizard: ಈ ಹಲ್ಲಿಯ ಬೆಲೆ ಕೇಳಿ ನೀವೂ ದಂಗಾಗುವಿರಿ, ಒಂದು ಹಲ್ಲಿಯ ಬೆಲೆಯಲ್ಲಿ ಬಿಎಂಡಬ್ಲ್ಯೂ ಕಾರ್ ಖರೀದಿಸಬಹುದಂತೆ

ಇಂದು ಬೆಳಗ್ಗೆ ಶೂ ಧರಿಸಲು ಹೋದಾಗ ಬುಸುಗುಡುತ್ತಿರುವ ಮರಿ ನಾಗರ ಹಾವು ಕಂಡುಬಂದಿದೆ. ಸರ್ಪವನ್ನು ಕಂಡಕೂಡಲೇ ಶೂನಲ್ಲಿ ಹಾಕುತ್ತಿದ್ದ ಕಾಲನ್ನು ಹಿಂತೆಗೆದುಕೊಂಡ ಯುವಕನಿಗೆ ಹೋದ ಜೀವವೇ ಮರಳಿಬಂದಂತಾಗಿದೆ. ಶೂನಲ್ಲಿ ಅವಿತುಕೊಂಡು ಕುಳಿತಿದ್ದ ನಾಗರ ಹಾವು ಬುಸ್ ಬುಸ್ ಎಂದು ಸದ್ದು ಮಾಡುತ್ತಿತ್ತು.

ಶೂನಲ್ಲಿ ಹಾವು ಇರುವುದು ಗೊತ್ತಾದ ಕೂಡಲೇ ಯುವಕ ಜೋರಾಗಿ ಕೂಗಿ ಮನೆ ಸದಸ್ಯರನ್ನು ಕರೆದಿದ್ದಾನೆ. ಭಯಗೊಂಡಿದ್ದ ಯುವಕ ತನ್ನ ಶೂನಲ್ಲಿ ಹಾವು ಇದೆ ಅಂತಾ ಹೇಳಿದ್ದಾನೆ. ಕೂಡಲೇ ಬಿಬಿಎಂಪಿ ಅರಣ್ಯ ಸಿಬ್ಬಂದಿಗೆ ಮನೆ ಮಾಲೀಕರ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಮೋಹನ್ ಮರಿ ನಾಗರವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.

ಇದನ್ನೂ ಓದಿ: ಈ ನದಿಯಲ್ಲಿ ಹೇರಳವಾಗಿ ಸಿಗುತ್ತೆ ಚಿನ್ನ: ಗೋಲ್ಡನ್‌ ನದಿಯಿಂದ ಜೀವನ ಸಾಗಿಸುತ್ತಾರೆ ಇಲ್ಲಿನ ಜನ

ಶೂ ಧರಿಸುವ ಮುನ್ನ ಎಚ್ಚರಿಕೆಯಿಂದ ಪರಿಶೀಲಿಸುವಂತೆ ಉರಗತಜ್ಞ ಮೋಹನ್ ಜನರಿಗೆ ಸಲಹೆ ನೀಡಿದ್ದಾರೆ. ಕೆಲವು ಸಲ ಬೆಚ್ಚಗಿನ ಸ್ಥಳಗಳನ್ನು ಹುಡುಕಿಕೊಂಡು ಬರುವ ವಿಷ ಸರ್ಪಗಳು ಶೂನಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಪ್ರಾಣಕ್ಕೆ ಸಂಚಕಾರವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಒಂದು ಸರಿ ಶೂ ಪರಿಶೀಲಿಸಿ ಧರಿಸುವುದು ಸೂಕ್ತವೆಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News