Viral Video: ಪ್ಲೀಸ್‌ ನನ್ನ ಪ್ರೀತಿಸು! ನಡುಬೀದಿಯಲ್ಲಿ ಯುವತಿ ಕಾಲು ಹಿಡಿದು ಬೇಡಿದ ಹುಡುಗ

Viral Video: ಯುವಕರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಕೆಲವರು ಪ್ರೇಮ ಪತ್ರಗಳನ್ನು ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇನ್ನು ಕೆಲವರು ನೇರವಾಗಿ ಹೋಗಿ ತಮ್ಮ ಮನದ ಮಾತನ್ನು ಹೇಳುತ್ತಾರೆ. 

Written by - Chetana Devarmani | Last Updated : Dec 8, 2022, 06:53 PM IST
  • ನಡುಬೀದಿಯಲ್ಲಿ ಯುವತಿ ಕಾಲು ಹಿಡಿದು ಬೇಡಿದ ಹುಡುಗ
  • ಹುಡುಗ ತನ್ನ ಪ್ರೇಮ ನಿವೇದನೆ ಮಾಡಿದ ರೀತಿ ನೋಡಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video: ಪ್ಲೀಸ್‌ ನನ್ನ ಪ್ರೀತಿಸು! ನಡುಬೀದಿಯಲ್ಲಿ ಯುವತಿ ಕಾಲು ಹಿಡಿದು ಬೇಡಿದ ಹುಡುಗ  title=
ಯುವತಿ ಕಾಲು ಹಿಡಿದ ಹುಡುಗ 

Viral Video: ಪ್ರೇಮ.. ಈ ಎರಡಕ್ಷರದ ಪದದ ಅರ್ಥವನ್ನು ವಿವರಿಸುವುದು ಅಸಾಧ್ಯವೆಂದೇ ಹೇಳಬಹುದು. ನೀವು ಅದನ್ನು ಅನುಭವಿಸಬೇಕೇ ಹೊರತು ಪ್ರೀತಿಯನ್ನು ಪದಗಳಾಗಿ ಅನುವಾದಿಸಲು ಸಾಧ್ಯವಿಲ್ಲ. ಯುವಕರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಕೆಲವರು ಪ್ರೇಮ ಪತ್ರಗಳನ್ನು ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇನ್ನು ಕೆಲವರು ನೇರವಾಗಿ ಹೋಗಿ ತಮ್ಮ ಮನದ ಮಾತನ್ನು ಹೇಳುತ್ತಾರೆ. ಕೆಲವೊಮ್ಮೆ ಎಷ್ಟು ಸಲ ಪ್ರೀತಿ ಹೇಳಿದರೂ ಗಮನ ಕೊಡದೆ ಹೋಗುವ ಹುಡುಗಿಯರು ಇದ್ದಾರೆ. ಇಲ್ಲೊಬ್ಬ ಹುಡುಗ ತನ್ನ ಪ್ರೇಮ ನಿವೇದನೆ ಮಾಡಿದ ರೀತಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೂವರು ಕಾಲೇಜು ಹುಡುಗಿಯರು ರಸ್ತೆಯುದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದಾರೆ. ಇಬ್ಬರು ಹುಡುಗರು ಅವರನ್ನು ಹಿಂಬಾಲಿಸುತ್ತಾರೆ. ಹಳದಿ ಚೂಡಿದಾರ್ ತೊಟ್ಟಿದ್ದ ಹುಡುಗಿಗೆ ಹುಡುಗನೊಬ್ಬ ಪ್ರೇಮ ಪತ್ರ ನೀಡುತ್ತಾನೆ. ಹುಡುಗಿ ಪತ್ರವನ್ನು ಓದುತ್ತಿರುವಾಗ, ಹುಡುಗ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳುತ್ತಾನೆ. ಆದರೆ ಆಕೆ ಅದಕ್ಕೆ ಲಕ್ಷ್ಯಗೊಡದೆ ಮುನ್ನಡೆಯುತ್ತಾಳೆ.

 

 
 
 
 

 
 
 
 
 
 
 
 
 
 
 

A post shared by Psycho Bihari (@bihari.broo)

 

ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಪಡೆಯಬೇಕೆಂದುಕೊಂಡ ಹುಡುಗ ಇದ್ದಕ್ಕಿದ್ದಂತೆ ಹುಡುಗಿಯ ಕಾಲುಗಳನ್ನು ಹಿಡಿಯುತ್ತಾನೆ. ತಕ್ಷಣ ಹುಡುಗಿ ನಗಲು ಆರಂಭಿಸುತ್ತಾಳೆ. ಆದರೆ ಅವನು ಅವಳ ಕಾಲುಗಳನ್ನು ಬಿಡಲಿಲ್ಲ. ಮತ್ತೊಬ್ಬ ಹುಡುಗ ಕೂಡ ಇನ್ನೊಬ್ಬ ಹುಡುಗಿಯ ಕಾಲುಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಮಲಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು 'bihari.broo' ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯು ಹಂಚಿಕೊಂಡಿದೆ. 

ಇದನ್ನೂ ಓದಿ : Video: ಹೌದೋ ಹುಲಿಯಾ! ಕಿಕ್ಕಿರಿದ ಬಸ್‌ ಅನ್ನು ಈ ಹುಡುಗಿ ಹತ್ತಿದ ರೀತಿ ಕಂಡು ಬೆಚ್ಚಿಬಿದ್ದ ಜನ!

ಈ ವಿಡಿಯೋವನ್ನು ಇದುವರೆಗೆ 2 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅನೇಕರು ಲೈಕ್ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ. ಹುಡುಗರು ಮಾಡಿರುವ ಈ ಕೆಲಸಕ್ಕೆ ಹಲವರು ಅಪಹಾಸ್ಯ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಘಟನೆ ನಿಜವಾಗಿಯೂ ನಡೆದಿದೆಯೇ ಅಥವಾ ಇದೊಂದು ಪ್ರ್ಯಾಂಕ್‌ ಮಾಡಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News