Viral Video : ಓದೋ ವಯಸ್ಸಲ್ಲಿ ತರಗತಿಯಲ್ಲಿ ಈ ವಿದ್ಯಾರ್ಥಿಗಳು ಮಾಡ್ತಿರೋ ಕೆಲಸ ನೋಡಿ.!

Boy Proposed girl in classroom : ಯಾವಾಗಲೂ ವಿದ್ಯಾರ್ಥಿಗಳ ವಿಡಿಯೋಗಳು ಬಹುಬೇಗ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇಲ್ಲಿ ಒಬ್ಬ ಹುಡುಗ ಒಂದು ಹುಡುಗಿ ಪ್ರಪೋಸ್‌ ಮಾಡುತ್ತಿದ್ದಾನೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.   

Written by - Chetana Devarmani | Last Updated : Apr 5, 2023, 09:01 PM IST
  • ಓದೋ ವಯಸ್ಸಲ್ಲಿ ಈ ವಿದ್ಯಾರ್ಥಿಗಳು ಮಾಡೋದೇನು ನೋಡಿ
  • ವಿದ್ಯಾರ್ಥಿಗಳ ವಿಡಿಯೋಗಳು ಬಹುಬೇಗ ವೈರಲ್ ಆಗುತ್ತವೆ
  • ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ
Viral Video : ಓದೋ ವಯಸ್ಸಲ್ಲಿ ತರಗತಿಯಲ್ಲಿ ಈ ವಿದ್ಯಾರ್ಥಿಗಳು ಮಾಡ್ತಿರೋ ಕೆಲಸ ನೋಡಿ.! title=
Boy Proposed girl in classroom

Viral Video : ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಾಲಕ್ಕೆ ನಾನಾ ರೀತಿಯ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳನ್ನು ನೋಡಿದ ನೆಟಿಜನ್‌ಗಳು ತಮ್ಮ ಒತ್ತಡವನ್ನು ಮರೆತು ನಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ವಿಡಿಯೋಗಳು, ಪ್ರೇಮಿಗಳ ವಿಡಿಯೋಗಳು, ಪ್ರಾಣಿಗಳ ವಿಡಿಯೋಗಳು ಇಂಟರ್ನೆಡ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳ ವಿಡಿಯೋಗಳು ಯಾವಾಗಲೂ ಬಹುಬೇಗ ವೈರಲ್ ಆಗುತ್ತವೆ. ಏಕೆಂದರೆ ವಿದ್ಯಾರ್ಥಿಗಳ ವಿಡಿಯೋಗಳು ಯಾವಾಗಲೂ ಮೀಸಲಾದ ಅಭಿಮಾನಿಗಳನ್ನು ಹೊಂದಿರುತ್ತವೆ. ಇಂತಹ ವಿಡಿಯೋಗಳು ನೆಟಿಜನ್‌ಗಳಲ್ಲಿ ಬಹಳ ಜನಪ್ರಿಯವಾಗಿವೆ. ಅದಕ್ಕೆ ತಕ್ಕಂತೆ ಈಗ ಬಂದಿರುವ ವಿಡಿಯೋ ಇವೆಲ್ಲಕ್ಕಿಂತ ಭಿನ್ನವಾಗಿದೆ. ಈ ವಿಡಿಯೋ ಶಾಲಾ ವಿದ್ಯಾರ್ಥಿಗಳ ಪ್ರೇಮಕಥೆಗೆ ಸಂಬಂಧಿಸಿದಂತಿದೆ. 

ಇದನ್ನೂ ಓದಿ : ಮೆಟ್ರೋದಲ್ಲಿ ಎಲ್ಲರೆದುರೇ ಲಿಪ್‌ ಲಾಕ್‌.. ಪಬ್ಲಿಕ್‌ನಲ್ಲಿ ಪ್ರೇಮಿಗಳ ರೊಮ್ಯಾನ್ಸ್ ವಿಡಿಯೋ ವೈರಲ್‌!

ಈ ವಿಡಿಯೋ ನೋಡಿದರೆ ನೀವೂ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ. ವಿಡಿಯೋವನ್ನು ನೋಡುತ್ತಿರುವಾಗ ನಾವು ತರಗತಿಯಲ್ಲಿ ಕೈಯಲ್ಲಿ ಬ್ಯಾಗ್‌ನೊಂದಿಗೆ ನಿಂತಿರುವ ಹುಡುಗಿಯನ್ನು ನೋಡಬಹುದು. ಆಗ ಅಲ್ಲಿನ ವಿದ್ಯಾರ್ಥಿಯೊಬ್ಬ ಹುಡುಗಿಗೆ ಪ್ರಪೋಸ್ ಮಾಡಲು ಯತ್ನಿಸಿದ್ದಾನೆ. ಈ ದೃಶ್ಯವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

 

 

ಈ ವಿಡಿಯೋವನ್ನು ಕೊನೆಯವರೆಗೂ ನೋಡಿ ಮತ್ತು ವಿದ್ಯಾರ್ಥಿಯು ತಾನು ಪ್ರೀತಿಸುವ ಹುಡುಗಿಗೆ ಪ್ರಪೋಸ್ ಮಾಡಲು ಹೇಗೆ ಹಿಂದೇಟು ಹಾಕುತ್ತಾನೆ ಎಂಬುದನ್ನು ನೀವು ನೋಡುತ್ತೀರಿ. ಪ್ರಪೋಸ್ ಮಾಡುವ ಮೊದಲು ವಿದ್ಯಾರ್ಥಿಯು ಹುಡುಗಿಗೆ ಗುಲಾಬಿಯನ್ನು ನೀಡಲು ಬಯಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ವಿದ್ಯಾರ್ಥಿ ಹೂವನ್ನು ನೀಡಿದ ತಕ್ಷಣ ವಿದ್ಯಾರ್ಥಿನಿಗೆ ಭಯಂಕರ ಕೋಪ ಬಂದು ಗುಲಾಬಿಯನ್ನು ಎಸೆದು ಬಿಡುತ್ತಾಳೆ. ನಂತರ ಏನಾಗುತ್ತದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ : ಕಾಲೇಜಿಗೆ ಹೋಗಿ ಓದಿ ಉದ್ಧಾರಾಗಿ ಅಂದ್ರೆ.. ಗ್ರೌಂಡ್‌ನಲ್ಲಿ ಸ್ಕೂಟರ್‌ ಮೇಲೆ ಈ ಯುವಕ - ಯುವತಿ ಮಾಡೋದೇನು ನೋಡಿ!

ಈಗ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಘರ್ಕೆಕಲೇಶ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ವಿಡಿಯೋಗೆ ನೆಟಿಜನ್‌ಗಳು ಹಲವಾರು ನೆಗೆಟಿವ್ ಕಾಮೆಂಟ್‌ಗಳನ್ನು ಎಸೆಯುತ್ತಿದ್ದಾರೆ. ಅಲ್ಲದೇ ಈ ವೀಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News