Girl Fighting Video:ಚುಡಾಯಿಸಲು ಬಂದ 6 ಮಂದಿ ಹುಡುಗರಿಗೆ ಒದ್ದು ಬುದ್ದಿ ಕಲಿಸಿದ ಯುವತಿ

Girl Fighting Video:  ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧೈರ್ಯಶಾಲಿ ಹೆಣ್ಣು ಮಗಳೊಬ್ಬಳು, ತನಗೆ ಕಿರುಕುಳ ನೀಡಲು ಬಂದ 6 ಹುಡುಗರನ್ನು ಮನ ಬಂದಂತೆ ಥಳಿಸುತ್ತಿರುವುದನ್ನು ತೋರಿಸಲಾಗಿದೆ. 

Written by - Ranjitha R K | Last Updated : Jun 15, 2022, 11:50 AM IST
  • ಯುವತಿಯನ್ನು ಚುಡಾಯಿಸಲು ಬಂದ ಹುಡುಗರು
  • ಪಡ್ಡೆ ಹುಡುಗರಿಗೆ ಒದ್ದು ಬುದ್ದಿ ಕಲಿಸಿದ ಯುವತಿ
  • ವೈರಲ್ ಆಗುತ್ತಿದೆ ಯುವತಿಯ ವಿಡಿಯೋ
 Girl Fighting Video:ಚುಡಾಯಿಸಲು ಬಂದ 6 ಮಂದಿ ಹುಡುಗರಿಗೆ ಒದ್ದು ಬುದ್ದಿ ಕಲಿಸಿದ ಯುವತಿ  title=
Girl Fighting Video (photo twitter)

ಬೆಂಗಳೂರು : ಪ್ರಪಂಚದಾದ್ಯಂತ ಪ್ರತಿದಿನ ಲಕ್ಷಾಂತರ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಬಲಿಯಾಗುತ್ತಿರುವುದನ್ನು ಕೇಳುತ್ತಲೇ ಇರುತ್ತೇವೆ. ಇಂಥಹ ಯಾವುದೇ ಘಟನೆ ನಡೆದಾಗಲೂ, ಸ್ವಲ್ಪ ಸಮಯದವರೆಗೆ ಈ ಬಗ್ಗೆ ಚರ್ಚೆ ಕೇಳಿ ಬರುತ್ತದೆ. ನಂತರ ಏನೂ ಆಗಿಯೇ ಇಲ್ಲ ಎನ್ನುವಂತೆ ಎಲ್ಲರೂ ತಮ್ಮ ಪಾಡಿಗೆ ಇರುತ್ತಾರೆ. ಕಾನೂನು ಕಟ್ಟಳೆಗಳು ಏನೇ ಇದ್ದರೂ ಘಟನೆ ನಡೆಯುವಾಗ ಮಾತ್ರ ಅಲ್ಲಿ ಯಾರೂ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಆತ್ಮ ರಕ್ಷಣೆ ಸ್ಕಿಲ್ ಗಳನ್ನು ಕಲಿಯುವಂತೆ ಸೂಚಿಸಲಾಗುತ್ತದೆ.    

ಇನ್ನು ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಇಂಥಹ ಸಂದರ್ಭ ಎದುರಾದಾಗ ತಮ್ಮದೇ ಆದ ರೀತಿಯಲ್ಲಿ ಅದರಿಂದ ಹೊರಬರುವ ದಾರಿಯನ್ನು ಕೂಡಾ ಕಂಡು ಕೊಳ್ಳುತ್ತಾರೆ.  ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವು ಹುಡುಗರು ನಾಲ್ಕು ಕಡೆಗಳಿಂದಲೂ  ಹುಡುಗಿಯನ್ನು ಸುತ್ತುವರೆದಿರುವುದನ್ನು ಕಾಣಬಹುದು. ಮಾರ್ಗ ಮಧ್ಯೆಯೇ ಆ ಹೆಣ್ಣು ಮಗಳನ್ನು ಚುಡಾಯಿಸಲು ಆರಂಭಿಸುತ್ತಾರೆ. ಆದರೆ ಹುಡುಗಿ ಮಾತ್ರ ತನ್ನನ್ನು ಸುತ್ತುವರೆದಿರುವ  ಹುಡುಗರಿಗೆ ತಕ್ಕ ಪಾಠ ಕಲಿಸುತ್ತಾಳೆ. 

ಇದನ್ನೂ ಓದಿ : Video : ನಾಲ್ಕನೇ ಮಹಡಿಯಲ್ಲಿ ಸಿಲುಕಿಹಾಕಿಕೊಂಡಿದ್ದ ಬೆಕ್ಕನ್ನು ಹರಸಾಹಸಪಟ್ಟು ರಕ್ಷಿಸಿದ ಮಹಿಳೆ

ನಿರ್ಜನ ರಸ್ತೆಯಲ್ಲಿ ಹುಡುಗಿಯನ್ನು ಸುತ್ತುವರೆದ ಪುಂಡರು : 
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧೈರ್ಯಶಾಲಿ ಹೆಣ್ಣು ಮಗಳೊಬ್ಬಳು, ತನಗೆ ಕಿರುಕುಳ ನೀಡಲು ಬಂದ 6 ಹುಡುಗರನ್ನು ಮನ ಬಂದಂತೆ ಥಳಿಸುತ್ತಿರುವುದನ್ನು ತೋರಿಸಲಾಗಿದೆ.  ಫ್ಲೈಯಿಂಗ್ ಕಿಕ್ ಗಳ ಮೂಲಕ  ಕೆಲವು ಮಾರ್ಷಲ್ ಆರ್ಟ್ಸ್  ಮೂವ್ ಗಳೊಂದಿಗೆ ಆ ಪಡ್ಡೆ ಹುಡುಗರ ಬೆವರಿಳಿಸಿ ಬಿಡುತ್ತಾಳೆ.

 

25 ಸೆಕೆಂಡುಗಳ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ 'ದಿ ಫಿಗೆನ್' ಖಾತೆಯಲ್ಲಿ ಶೇರ್ ಮಾಡಲಾಗಿದೆ.  ಇದು ಸಿಸಿಟಿವಿ ದೃಶ್ಯಾವಳಿ ಎಂದು ವೀಡಿಯೋ ನೋಡುವಾಗ ಗೊತ್ತಾಗುತ್ತದೆ. ವೀಡಿಯೋ ನೋಡಿದವರು ತಮ್ಮದೇ ಆದ ರೀತಿಯಲ್ಲಿ ಯುವತಿಗೆ ಶಬ್ಬಾಸ್ ಎನ್ನುತ್ತಿದ್ದಾರೆ. ಆಕೆಯ ಶೌರ್ಯಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ.  

ಇದನ್ನೂ ಓದಿ : Viral Video: ಲಾರಿ ಚಾಲಕನಿಗೆ ಬೂಟು ಕಾಲಿಂದ ಒದ್ದ ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News