Video : ನಾಲ್ಕನೇ ಮಹಡಿಯಲ್ಲಿ ಸಿಲುಕಿಹಾಕಿಕೊಂಡಿದ್ದ ಬೆಕ್ಕನ್ನು ಹರಸಾಹಸಪಟ್ಟು ರಕ್ಷಿಸಿದ ಮಹಿಳೆ

ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್‌ಮೆಂಟೊಂದರ ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ  ಪರ್ಶಿಯನ್  ಬೆಕ್ಕು ಸಿಲುಕಿ ಹಾಕಿಕೊಂಡಿತ್ತು. ಈ ಬೆಕ್ಕು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಹೊರಬರಲಾಗದೇ ಸಿಲುಕಿ ಒದ್ದಾಡುತ್ತಿತ್ತು. 

Written by - Ranjitha R K | Last Updated : Jun 14, 2022, 01:43 PM IST
  • ಹರಸಾಹಸಪಟ್ಟು ಬೆಕ್ಕಿನ ರಕ್ಷಣೆ
  • ಬೆಕ್ಕು ರಕ್ಷಣೆ ಮಾಡಿ ಮತ್ತೊಮ್ಮೆ ಸುದ್ದಿಯಾದ ರಜನಿ ಶೆಟ್ಟಿ
  • ರೋಚಕವಾಗಿ ಚೆಕ್ಕು ಕಾರ್ಯಾಚರಣೆಯ ವಿಡಿಯೋ
Video : ನಾಲ್ಕನೇ ಮಹಡಿಯಲ್ಲಿ ಸಿಲುಕಿಹಾಕಿಕೊಂಡಿದ್ದ ಬೆಕ್ಕನ್ನು ಹರಸಾಹಸಪಟ್ಟು ರಕ್ಷಿಸಿದ ಮಹಿಳೆ  title=
cat rescue

ಮಂಗಳೂರು : ಆಪತ್ತಿನಲ್ಲಿರುವ ಮೂಕ ಪ್ರಾಣಿಗಳ ಪಾಲಿಗೆ ತಾಯಿಯಾಗಿರುವ ಮಂಗಳೂರಿನ ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.  ನಾಲ್ಕನೇ ಮಹಡಿಯಲ್ಲಿ ಸಿಲುಕಿಹಾಕಿಕೊಂಡಿದ್ದ ಪರ್ಶಿಯನ್ ಬೆಕ್ಕೊಂದನ್ನು ಹರಸಾಹಸಪಟ್ಟು ರಕ್ಷಿಸಿದ್ದಾರೆ. ರಜನಿ ಶೆಟ್ಟಿಯವರು ಬೆಕ್ಕನ್ನು ರಕ್ಷಿಸುವ ದೃಶ್ಯ ರೋಚಕವಾಗಿದೆ. 

ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್‌ಮೆಂಟೊಂದರ ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ  ಪರ್ಶಿಯನ್  ಬೆಕ್ಕು ಸಿಲುಕಿ ಹಾಕಿಕೊಂಡಿತ್ತು. ಈ ಬೆಕ್ಕು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಹೊರಬರಲಾಗದೇ ಸಿಲುಕಿ ಒದ್ದಾಡುತ್ತಿತ್ತು. 

ಇದನ್ನೂ ಓದಿ : Impact Of Social Media: ಫೇಸ್ಬುಕ್ ಸ್ನೇಹಿತರಿಂದ ಶಾಲೆಗೆ ಬಂತು 22 ಸಾವಿರ ಮೌಲ್ಯದ ಚಾಕೊಲೇಟ್, ಆರ್ಥಿಕ ಸಹಾಯ

ಈ ಅಪಾರ್ಟ್‌ಮೆಂಟ್‌ ನಲ್ಲಿ ವಾಸಿಸುತ್ತಿರುವ ಕುಟುಂಬವೊಂದು  ಪರ್ಶಿಯನ್ ತಳಿಯ ಬೆಕ್ಕೊಂದನ್ನು ಸಾಕಿತ್ತು. ಆದರೆ ಮನೆಯವರು ನಿತ್ಯವೂ ಮನೆ ಬಾಗಿಲು ಹಾಕಿ ಕೆಲಸಕ್ಕೆ ಹೋಗುವಂತೆ ಶನಿವಾರವೂ ಹೋಗಿದ್ದಾರೆ‌. ಆದರೆ ಅದೇನಾಯ್ತೋ ಗೊತ್ತಿಲ್ಲ ಬೆಕ್ಕು ಹೊರ ಬಂದು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಸಿಕ್ಕಿಹಾಕಿಕೊಂಡಿತ್ತು. ರಾತ್ರಿ ಮನೆಯವರು ಬಂದಾಗಲೇ ಬೆಕ್ಕು ಮನೆಯಲ್ಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ತಮ್ಮ ನೆಚ್ಚಿನ ಬೇಕ್ಕಿಗಾಗಿ ಮನೆಯೆಲ್ಲಾ ಹುಡುಕಾಡುವ ವೇಳೆ ಅದು ಬಾಲ್ಕನಿಯಲ್ಲಿ ಸಿಲುಕಿ ಹಾಕಿಕೊಂಡಿರುವುದು ಗೊತ್ತಾಗಿದೆ.

ತಕ್ಷಣ ಮನೆಯವರು ರಜನಿ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ಮರುದಿನ ಬೆಳಗ್ಗೆ  ರಜನಿ ಶೆಟ್ಟಿ ಸ್ಥಳಕ್ಕೆ ಬಂದಿದ್ದಾರೆ. ಆದರೆ ಬಾಲ್ಕನಿಯಲ್ಲಿ ಸಿಲುಕಿಕೊಂಡ ಬೆಕ್ಕನ್ನು ರಕ್ಷಿಸುವುದು ಸುಲಭದ ಮಾತಾಗಿರಲಿಲ್ಲ. ರಜನಿ ಶೆಟ್ಟಿಯವರು ಸೊಂಟಕ್ಕೆ ಹಗ್ಗ ಕಟ್ಟಿ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಗ್ಯಾಲರಿಗೆ ಇಳಿದು ಹರಸಾಹಸಪಟ್ಟು ಬೆಕ್ಕನ್ನು ರಕ್ಷಿಸಿದ್ದಾರೆ. ಒಂದರ್ಥದಲ್ಲಿ ರಜನಿ ಶೆಟ್ಟಿಯವರು ತಮ್ಮ ಪ್ರಾಣ ಪಣಕ್ಕಿಟ್ಟು ಈ ಬೆಕ್ಕನ್ನು ರಕ್ಷಿಸಿದ್ದಾರೆ ಎಂದರೂ ತಪ್ಪಲ್ಲ. 

 

ಇದನ್ನೂ ಓದಿ : ದಿ ಪಾರ್ಕ್ ಹೊಟೇಲ್‌ನಲ್ಲಿ ಆ ರಾತ್ರಿ ನಡೆದಿದ್ದು ರೇವ್ ಪಾರ್ಟಿನಾ! FIR ನಲ್ಲಿ ಏನಿದೆ?

ರಜನಿ ಶೆಟ್ಟಿಯವರು ಈ ಹಿಂದೆಯೂ ಬಾವಿಗೆ ಬಿದ್ದಿರುವ, ನಾಯಿ , ಬೆಕ್ಕು ಸೇರಿದಂತೆ ಇನ್ನಿತರ ಮೂಕ ಪ್ರಾಣಿಗಳನ್ನು ರಕ್ಷಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News