Viral Video: ಮದುವೆಯ ದಿನ ರೂಮ್‌ ಬಾಗಿಲು ಹಾಕಿ ವಧು ಮಾಡಿದ್ದೇನು ಗೊತ್ತಾ?ದೇವರೇ ಇಂತವರೂ ಇರ್ತಾರಾ?ಈ ವಿಡಿಯೋ ನೋಡಿ.. ನೀವೂ ಶಾಕ್‌ ಆಗ್ತೀರಾ!

Bride Viral Video: ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಮತ್ತು ರೀಲುಗಳಿಗಾಗಿ ವಿಚಿತ್ರವಾದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಯುವಕನೊಬ್ಬ ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಇದೀಗ ಮತ್ತೊಂದು ಶಾಕಿಂಗ್‌ ವಿಡಿಯೋ ಸಖತ್‌ ಸದ್ದು ಮಾಡುತ್ತಿದೆ.. 

Written by - Savita M B | Last Updated : Aug 6, 2024, 02:30 PM IST
  • ಇಂಟರ್‌ನೆಟ್‌ ಜಮಾನದಲ್ಲಿ ವಾವ್‌ ಎನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆ ಇಲ್ಲ
  • ಇನ್ನು ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಮತ್ತು ವೀವ್ಸ್ಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ
Viral Video: ಮದುವೆಯ ದಿನ ರೂಮ್‌ ಬಾಗಿಲು ಹಾಕಿ ವಧು ಮಾಡಿದ್ದೇನು ಗೊತ್ತಾ?ದೇವರೇ ಇಂತವರೂ ಇರ್ತಾರಾ?ಈ ವಿಡಿಯೋ ನೋಡಿ.. ನೀವೂ ಶಾಕ್‌ ಆಗ್ತೀರಾ! title=

bride smokes cigarette: ಇಂಟರ್‌ನೆಟ್‌ ಜಮಾನದಲ್ಲಿ ವಾವ್‌ ಎನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆ ಇಲ್ಲ.. ಇತ್ತೀಚೆಗಷ್ಟೇ ವಧು ರೀಲು ಸಲುವಾಗಿ ಸಿಗರೇಟ್ ಸೇದುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾಳೆ.. ಸ್ಟೈಲ್ ಆಗಿ ಸಿಗರೇಟ್ ಸೇದುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ಮದುವೆ ಸೀರೆಯಲ್ಲಿ ಹಿಂದಿ ಹಾಡಿಗೆ ರೀಲ್ ಮಾಡಿ ಧೂಮಪಾನ ಮಾಡಿದ್ದಾರೆ. ಆಕೆ ನಗುತ್ತಲೇ ಸಿಗರೇಟ್ ಸೇದುವ ರೀತಿ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Seema Meena (@seemameena2835)

ಇದನ್ನೂ ಓದಿ-ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!

ಭಾರತದಲ್ಲಿ ಸಾಮಾನ್ಯವಾಗಿ ಹುಡುಗಿಯರು ಸಿಗರೇಟ್ ನಿಂದ ದೂರವಿರುತ್ತಾರೆ. ಬಹುತೇಕ ಧೂಮಪಾನ ಮತ್ತು ಮದ್ಯಪಾನ ಮಾಡುವುದೇ ಇಲ್ಲ.. ಅದರಲ್ಲೂ ಅತ್ಯಂತ ಮಂಗಳಕರ ವಿವಾಹ ಸಮಾರಂಭದಲ್ಲಿ, ಯಾವುದೇ  ಭಾರತೀಯ ಮಹಿಳೆ ತುಂಬಾ ಸಾಂಪ್ರದಾಯಿಕ ಮತ್ತು ಕ್ರಮಬದ್ಧವಾಗಿ ಇರುತ್ತಾಳೆ.. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ವಧು ಧೂಮಪಾನ ಮಾಡಿದ್ದಕ್ಕೆ ಎಲ್ಲರಿಂದಲೂ ಟೀಕೆ ವ್ಯಕ್ತವಾಗುತ್ತಿದೆ.

ಈ ವೀಡಿಯೊವನ್ನು ಇನ್‌ಸ್ಟಾ ಖಾತೆಯಲ್ಲಿ 'ಸೀಮಾ ಮೀನಾ (@seemameena2835)' ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 4000 ವೀವ್ಸ್‌ ಮತ್ತು ನೂರಾರು ಲೈಕ್‌ಗಳನ್ನು ಪಡೆದುಕೊಂಡಿದೆ.. ವಧು ತನ್ನ ಅತ್ತೆಯ ಮನೆಯಲ್ಲಿ ಸಿಗರೇಟ್ ಸೇದಿದ್ದು, ಕೊಠಡಿಯೊಂದರಲ್ಲಿ ಬಾಗಿಲು ಹಾಕಿಕೊಂಡು ಈ ಕೆಟ್ಟ ಕೆಲಸ ಮಾಡಿದ್ದಾಳೆ. ಪತಿ ಬಾಗಿಲು ಬಡಿದಾಗ, ಅವಳು ತಕ್ಷಣ ಸಿಗರೇಟನ್ನು ಪಕ್ಕಕ್ಕೆ ಇರಿಸಿ ಬಾಗಿಲು ತೆರೆಯಲು ಓಡಿದ್ದಾಳೆ.. ಈ ವಿಡಿಯೋವನ್ನು ಶೇರ್ ಮಾಡಿ ಏನು ಪ್ರಯೋಜನ ಎಂದು ಹಲವು ನೆಟಿಜನ್‌ಗಳು ಆಕೆಗೆ ಛೀಮಾರಿ ಹಾಕುತ್ತಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಮತ್ತು ವೀಕ್ಷಣೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎಂದು ನೆಟ್ಟಿಗರು ಕೋಪಗೊಂಡು ಕಾಮೆಂಟ್‌ ಮಾಡುತ್ತಿದ್ದಾರೆ.. 

ಇದನ್ನೂ ಓದಿ-ಸ್ಟಾರ್‌ ನಟರಿಗಿಂತ ಹೆಚ್ಚು ಆಸ್ತಿ ಗಳಿಸಿರುವ ʻಇವರುʼ ಖ್ಯಾತ ಹಾಸ್ಯನಟನ ಮಗ..!ಯಾರು ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News