Viral Video: ಬಣ್ಣ ಬದಲಿಸುವ ಮೀನು, ಕಣ್ಮುಚ್ಚಿ ತೆರೆಯುವುದರಲ್ಲೇ ಕಲರ್‌ ಚೇಂಜ್..‌ ವಿಡಿಯೋ ನೋಡಿ ನೆಟ್ಟಿಜನ್‌ ಶಾಕ್!

Colour Changing Fish: ಪ್ರತಿ ಸೆಕೆಂಡಿಗೆ ಮೀನು ತನ್ನ ಬಣ್ಣವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಈ ವೈರಲ್‌ ವಿಡಿಯೋದಲ್ಲಿ ನೀವು ನೋಡಬಹುದು. ಇದನ್ನು ನೋಡಿದ ಜನರು ಕೂಡ ಆಶ್ಚರ್ಯಚಕಿತರಾದರು.

Written by - Chetana Devarmani | Last Updated : Feb 7, 2024, 08:31 AM IST
  • ಪ್ರತಿ ಸೆಕೆಂಡಿಗೆ ಬಣ್ಣ ಬದಲಿಸುವ ಮೀನು
  • ಕಣ್ಮುಚ್ಚಿ ತೆರೆಯುವುದರಲ್ಲೇ ಕಲರ್‌ ಚೇಂಜ್
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
Viral Video: ಬಣ್ಣ ಬದಲಿಸುವ ಮೀನು, ಕಣ್ಮುಚ್ಚಿ ತೆರೆಯುವುದರಲ್ಲೇ ಕಲರ್‌ ಚೇಂಜ್..‌ ವಿಡಿಯೋ ನೋಡಿ ನೆಟ್ಟಿಜನ್‌ ಶಾಕ್! title=

Colour Changing Fish Viral Video: ಪ್ರಕೃತಿಯು ಎಲ್ಲಾ ಜೀವಿಗಳಿಗೆ ವಿವಿಧ ರೂಪಗಳನ್ನು ನೀಡಿದೆ ಮತ್ತು ವಿಭಿನ್ನ ಸಾಮರ್ಥ್ಯಗಳನ್ನು ಸಹ ನೀಡಿದೆ. ಅದ್ಭುತ ಸಾಮರ್ಥ್ಯಗಳನ್ನು ಹೊಂದಿರುವ ಜೀವಿ ನಮ್ಮ ಮುಂದೆ ಬಂದಾಗ ಅದನ್ನು ನೋಡಿ ಅಚ್ಚರಿ ಪಡುತ್ತೇವೆ. ಸದ್ಯ ಇಂತಹದ್ದೇ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದು ಮೀನಿನ ವಿಡಿಯೋವಾಗಿದ್ದು, ಪ್ರತಿ ಸೆಕೆಂಡಿಗೆ ತನ್ನ ಬಣ್ಣವನ್ನು ಈ ಮೀನು ಬದಲಿಸುತ್ತದೆ. ಇಲ್ಲಿಯವರೆಗೆ ನಾವು ಊಸರವಳ್ಳಿ ಮಾತ್ರ ಬಣ್ಣ ಬದಲಿಸುತ್ತೆ ಎಂದು ಕೇಳಿದ್ದೇವೆ. ಆದರೆ ಈ ವಿಶಿಷ್ಟ ಮೀನು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅವರ ಈ ವಿಡಿಯೋವನ್ನು ಜನ ಮತ್ತೆ ಮತ್ತೆ ನೋಡುತ್ತಿದ್ದಾರೆ.

ಇದನ್ನೂ ಓದಿ: ಧೋನಿಯ ವಿಶೇಷ ಫಿಟ್ನೆಸ್ ಬ್ಯಾಂಡ್.. ಅದ್ಭುತ ವೈಶಿಷ್ಟ್ಯ ಇರುವ ಇದರ ಬೆಲೆ ಎಷ್ಟು ಗೊತ್ತೇ!? 

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ನೀರು ತುಂಬಿದ ಬಾಕ್ಸ್‌ನಲ್ಲಿ ಮೀನು ಇರುವುದನ್ನು ನೀವು ನೋಡಬಹುದು. ಇತರ ಮೀನುಗಳಂತೆ ನೀರಿನಲ್ಲಿ ಈಜುವುದನ್ನು ಕಾಣಬಹುದು. 

 

 

ವಿಶೇಷವೆಂದರೆ ಈ ಮೀನು ಪ್ರತಿ ಸೆಕೆಂಡಿಗೂ ತನ್ನ ಬಣ್ಣ ಬದಲಿಸಿಕೊಳ್ಳುತ್ತಿದೆ. ಆರಂಭದಲ್ಲಿ ಮೀನಿನ ಬಣ್ಣ ಆಕಾಶ ನೀಲಿಯಂತಿರುವುದನ್ನು ನೀವು ನೋಡುತ್ತೀರಿ. ಆದರೆ ಮುಂದಿ ಒಂದೇ ಸೆಕೆಂಡಿನಲ್ಲಿ ಅದು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಮತ್ತೊಮ್ಮೆ ನೀಲಿ ಬಣ್ಣಕ್ಕೆ ಬದಲಾಗುತ್ತದೆ. 

ಈ ಮೀನನ್ನು ಟೈಲ್‌ ಫಿಶ್‌ ಅಥವಾ ಮಿನುಗುವ ಮೀನು ಎಂದು ಕರೆಯಲಾಗುತ್ತದೆ. ವಿಡಿಯೋ ನೋಡಿದ ನಂತರ ನೆಟ್ಟಿಗರು ಸಹ ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: Viral Video: ಮಧ್ಯರಾತ್ರಿ ನಡುಬೀದಿಯಲ್ಲಿ ಪುಟಾಣಿ ಕಂದಮ್ಮಗಳನ್ನು ಬಿಟ್ಟು ಓಡಿದ ಮಹಿಳೆ.. ವಿಡಿಯೋ ವೈರಲ್‌ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.  

Trending News