ಬಿಲದಲ್ಲಿ ಅವಿತಿದ್ದ ಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ ..! ಇಲ್ಲಿದೆ ಭಯಾನಕ ವಿಡಿಯೋ

ಸಾಮಾನ್ಯವಾಗಿ ಹಾವು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕಪ್ಪೆ, ಸಣ್ಣ ಸಣ್ಣ ಪ್ರಾಣಿಗಳು, ಮೊಟ್ಟೆ, , ಇವುಗಳನ್ನು ತಿನ್ನುವುದರ ವಿಡಿಯೋವನ್ನು ನೋಡಿರುತ್ತೇವೆ. ಆದರೆ ಇಲ್ಲಿರುವ ವಿಡಿಯೋ ಮಾತ್ರ ನೋಡಲು ಭಯಾನಕವಾಗಿದೆ.  

Written by - Ranjitha R K | Last Updated : May 19, 2022, 01:11 PM IST
  • ಜೀವಂತ ಹಾವನ್ನು ನುಂಗಿ ಮುಗಿಸಿದ ಕಾಳಿಂಗ
  • ನಾಗರ ಹಾವಿನ ಬೇಟೆಗೆ ಬಿಲ ಹೊಕ್ಕ ಕಾಳಿಂಗ
  • ಈ ವೀಡಿಯೊ ಸಾಮಾಜಿಕ ಮಾದ್ಗ್ಯಮದಲ್ಲಿ ಭಾರೀ ಸದ್ದು ಮಾಡಿದೆ.
ಬಿಲದಲ್ಲಿ ಅವಿತಿದ್ದ ಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ ..! ಇಲ್ಲಿದೆ ಭಯಾನಕ ವಿಡಿಯೋ  title=
Snake Viral News (Photo instagram)

ಬೆಂಗಳೂರು : ಈ ಪ್ರಕೃತಿಯೇ ಹಾಗೆ.. ಇದೊಂದು ರೀತಿ ಸರ್ಕಲ್ ಇದ್ದ ಹಾಗೆ. ಒಬ್ಬರ ಉಳಿವಿಗೆ ಇನ್ನೊಬ್ಬರನ್ನು ಅವಲಂಬಿಸಲೇ ಬೇಕು. ಪ್ರಾಣಿಗಳು ಕೂಡಾ ಹಾಗೆ. ಸಣ್ಣ ಸಣ್ಣ ಪ್ರಾಣಿಗಳು ಯಾವಾಗಲೂ ದೊಡ್ಡ ಪ್ರಾಣಿಗಳಿಗೆ ಆಹಾರವಾಗಿ ಬಿಡುತ್ತದೆ. ಕೀಟ ಹುಳ ಹುಪ್ಪಟೆಗಳನ್ನು ಹಕ್ಕಿಗಳು ತಿನ್ನುತ್ತವೆ. ಇನ್ನು ಕೆಲವೊಂದು ಸಣ್ಣ ಸಣ್ಣ ಕೀಟಗಳನ್ನು ಹಾವು ಕೂಡಾ ತಿನ್ನುವುದನ್ನು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಹಾವು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕಪ್ಪೆ, ಸಣ್ಣ ಸಣ್ಣ ಪ್ರಾಣಿಗಳು, ಮೊಟ್ಟೆ, , ಇವುಗಳನ್ನು ತಿನ್ನುವುದರ ವಿಡಿಯೋವನ್ನು ನೋಡಿರುತ್ತೇವೆ. ಆದರೆ ಇಲ್ಲಿರುವ ವಿಡಿಯೋ ಮಾತ್ರ ನೋಡಲು ಭಯಾನಕವಾಗಿದೆ. ಇಲ್ಲಿ ಹಾವೊಂದನ್ನು ಕಾಳಿಂಗ ಸಪ್ರ್ಪ ನುಂಗುವುದನ್ನು ಕಾಣಬಹುದು. ದೈತ್ಯಾಕಾರದ ಕಾಳಿಂಗಸರ್ಪ ಬಿಲದಲ್ಲಿ ಅವಿತಿದ್ದ ನಾಗರಹಾವನ್ನು ಹೊರಗೆಳೆದು ನುಂಗಿ ಬಿಡುತ್ತದೆ. 

ನಾಗರ ಹಾವಿನ ಬೇಟೆಗೆ ಬಿಲ ಹೊಕ್ಕ ಕಾಳಿಂಗ : 
ದೈತ್ಯ ಕಾಳಿಂಗ ಸರ್ಪವನ್ನು ಇಲ್ಲಿ ಕಾಣಬಹುದು. ಆಹಾರಕ್ಕಾಗಿ ಅತ್ತಿಂದಿತ್ತ ತಿರುಗಾಡುತ್ತಿದ್ದ ಕಾಳಿಂಗಕ್ಕೆ ಬಿಲದಲ್ಲಿ ಹಾವು ಅವಿತಿರುವುದು ಗಮನಕ್ಕೆ ಬರುತ್ತದೆ. ಕೂಡಲೇ ಅದು ಬಿಲಕ್ಕೆ ಹೊಕ್ಕಿ, ಬಿಲದಲ್ಲಿ ಕುಳಿತಿದ್ದ ಹಾವನ್ನು ಹೊರಗೆಳೆಯುತ್ತದೆ. ನಾಗರಹಾವಿನ ಹೆಡೆಯನ್ನು ಹಿಡಿದು  ಆ ಕಾಳಿಂಗ ಅದನ್ನು ಸರ ಸರನೆ ಹೊರಗೆಳೆಯುತ್ತದೆ. ನೋಡ ನೋಡುತ್ತಿದ್ದಂತೆಯೇ ಪೂರ್ತಿ ಹಾವನ್ನು ನುಂಗಿಯೇ ಬಿಡುತ್ತದೆ  ಆ ದೈತ್ಯ ಸರ್ಪ.. 

ಇದನ್ನೂ ಓದಿ : Shocking Video: ಎಂಟನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ!

ವೀಡಿಯೊವನ್ನು ಇಲ್ಲಿ ವೀಕ್ಷಿಸಿ :

 

ಈ ವೀಡಿಯೊ ಸಾಮಾಜಿಕ ಮಾದ್ಗ್ಯಮದಲ್ಲಿ ಭಾರೀ ಸದ್ದು ಮಾಡಿದೆ. ದೈತ್ಯ ಹಾವು ನಾಗರಹಾವನ್ನು ಜೀವಂತವಾಗಿ ನುಂಗುವ ದೃಶ್ಯವನ್ನು ಇಲ್ಲಿ ಕಾಣಬಹುದು.  ಈ ವಿಡಿಯೋವನ್ನು ಸ್ನೇಕ್._.ವರ್ಲ್ಡ್ ಹೆಸರಿನ ಪುಟದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.  ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಜನರು ಅದನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video Today: ಹಾವಿನ ಜೊತೆ ಸುಂದರಿಯ ಚೆಲ್ಲಾಟ, ನಂತರ ನಡೆದಿದ್ದು ಯುವತಿ ಲೈಫಲ್ಲಿ ಮರೆಯಲ್ಲ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News