The Rarest Blood Group: ಇದು ಅಪರೂಪದ ರಕ್ತದ ಗುಂಪು.. ಇಡೀ ಜಗತ್ತಲ್ಲಿ 9 ಜನ ಮಾತ್ರ ದಾನ ಮಾಡಬಹುದು!

The Rarest Blood Group: ಇಲ್ಲಿಯವರೆಗೆ ನೀವು ಪ್ರಪಂಚದಾದ್ಯಂತ A+, A-, B+, B-, O+, O-, AB+, AB- ರಕ್ತದ ಗುಂಪಿನ ಜನರ ಬಗ್ಗೆ ಮಾತ್ರ ಕೇಳಿರಬೇಕು. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಇಡೀ ಭೂಮಿಯ ಮೇಲೆ ಕೇವಲ 45 ಜನರು ಮಾತ್ರ ಹೊಂದಿರುವ ಅಂತಹ ರಕ್ತದ ಗುಂಪಿನ ಬಗ್ಗೆ ಮತ್ತು ಅವರಲ್ಲಿ 9 ಜನರು ಮಾತ್ರ ತಮ್ಮ ರಕ್ತವನ್ನು ದಾನ ಮಾಡಬಹುದು.   

Written by - Chetana Devarmani | Last Updated : Apr 28, 2023, 07:19 PM IST
  • A+, A-, B+, B-, O+, O-, AB+, AB- ರಕ್ತದ ಗುಂಪನ್ನು ಕೇಳಿರಬೇಕು
  • ಇಂದು ನಾವು ಗೋಲ್ಡನ್ ರಕ್ತದ ಗುಂಪಿನ ಬಗ್ಗೆ ಮಾತನಾಡುತ್ತಿದ್ದೇವೆ
  • ಇಡೀ ಜಗತ್ತಲ್ಲಿ 9 ಜನ ಮಾತ್ರ ದಾನ ಮಾಡಬಹುದು!
The Rarest Blood Group: ಇದು ಅಪರೂಪದ ರಕ್ತದ ಗುಂಪು.. ಇಡೀ ಜಗತ್ತಲ್ಲಿ 9 ಜನ ಮಾತ್ರ ದಾನ ಮಾಡಬಹುದು! title=

The Rarest Blood Group: ಇಂದು ನಾವು ಗೋಲ್ಡನ್ ರಕ್ತದ ಗುಂಪಿನ ಬಗ್ಗೆ ಮಾತನಾಡುತ್ತಿದ್ದೇವೆ. ಅದು ಇಡೀ ವಿಶ್ವದಲ್ಲೇ ಅಪರೂಪದ ರಕ್ತದ ಗುಂಪಾಗಿದೆ. ಯಾರಿಗಾದರೂ ನೀಡಬಹುದಾದ ಅಂತಹ ರಕ್ತದ ಗುಂಪಿನ ರಕ್ತ ಇದು. ವಾಸ್ತವವಾಗಿ, ಈ ರಕ್ತದ ಗುಂಪಿನ ರಕ್ತವು ಇತರ ಯಾವುದೇ ರಕ್ತದೊಂದಿಗೆ ಸುಲಭವಾಗಿ ಹೊಂದಾಣಿಕೆಯಾಗುತ್ತದೆ.

ಇದನ್ನೂ ಓದಿ: Freddie Mercury: 18 ಲಕ್ಷಕ್ಕೆ ಹರಾಜಾಯ್ತು ಈ ಖ್ಯಾತ ಗಾಯಕನ ಚಡ್ಡಿ.!

ಈ ರಕ್ತದ ಗುಂಪನ್ನು 1960 ರಲ್ಲಿ ಕಂಡುಹಿಡಿಯಲಾಯಿತು. ಇದರ ನಿಜವಾದ ಹೆಸರು Rhnull. ಈ ರಕ್ತವನ್ನು ಅದರ ವಿಶೇಷತೆಗಳಿಂದಾಗಿ ಗೋಲ್ಡನ್ ಬ್ಲಡ್ ಎಂದು ಹೆಸರಿಸಲಾಗಿದೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ ಇದನ್ನು ಯಾವುದೇ ರಕ್ತದ ಗುಂಪಿನ ವ್ಯಕ್ತಿಗೆ ನೀಡಬಹುದು. ಈ ರಕ್ತವು Rh ಅಂಶವು ಶೂನ್ಯವಾಗಿರುವ ಜನರ ದೇಹದಲ್ಲಿ ಮಾತ್ರ ಕಂಡುಬರುತ್ತದೆ.

ಈ Rh ಅಂಶ ಯಾವುದು?

ವಾಸ್ತವವಾಗಿ, Rh ಅಂಶವು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಕಂಡುಬರುವ ವಿಶೇಷ ರೀತಿಯ ಪ್ರೋಟೀನ್ ಆಗಿದೆ. ಈ ಪ್ರೊಟೀನ್ RBC ಯಲ್ಲಿ ಇದ್ದರೆ ಆಗ ರಕ್ತವು Rh+ ಧನಾತ್ಮಕವಾಗಿರುತ್ತದೆ. ಮತ್ತೊಂದೆಡೆ, ಈ ಪ್ರೋಟೀನ್ ಇಲ್ಲದಿದ್ದರೆ ರಕ್ತವು Rh-ಋಣಾತ್ಮಕವಾಗಿರುತ್ತದೆ. ಆದರೆ ಚಿನ್ನದ ರಕ್ತ ಹೊಂದಿರುವ ಜನರಲ್ಲಿ, Rh ಅಂಶವು ಧನಾತ್ಮಕ ಅಥವಾ ಋಣಾತ್ಮಕವಾಗಿರುವುದಿಲ್ಲ, ಅದು ಯಾವಾಗಲೂ ಶೂನ್ಯವಾಗಿರುತ್ತದೆ ಮತ್ತು ಅದು ವಿಶೇಷವಾಗಿದೆ.

ಇದನ್ನೂ ಓದಿ:  ಮಕ್ಕಳ ಜೀವಕ್ಕೆ ಕುತ್ತು ತರಬಹುದು ಬೌರ್ನ್‌ವಿಟಾ! ಕಂಪನಿಗೆ NCPCR ನೋಟಿಸ್

ಈ ದೇಶಗಳ ಜನರು ಈ ರಕ್ತವನ್ನು ಹೊಂದಿದ್ದಾರೆ:

ಬಿಗ್‌ಥಿಂಕ್‌ನ ಸಂಶೋಧನಾ ವರದಿಯ ಪ್ರಕಾರ, 2018 ರಲ್ಲಿ, ಈ ರಕ್ತವನ್ನು ಪ್ರಪಂಚದಾದ್ಯಂತ ಹುಡುಕಿದಾಗ, ಈ ವಿಶೇಷ ರಕ್ತವನ್ನು ಹೊಂದಿರುವವರು ಕೇವಲ 45 ಜನರಿದ್ದಾರೆ ಎಂದು ಕಂಡುಬಂದಿದೆ. ಈ ಜನರು ಜಪಾನ್, ಕೊಲಂಬಿಯಾ, ಬ್ರೆಜಿಲ್, ಅಮೆರಿಕ ಮತ್ತು ಐರ್ಲೆಂಡ್‌ನಂತಹ ದೇಶಗಳಿಂದ ಬಂದವರು. ಒಂದೆಡೆ ಈ ಜನರ ದೇಹದಲ್ಲಿ ಕಂಡುಬರುವ ಈ ರಕ್ತವು ಅವರನ್ನು ಅಪರೂಪವಾಗಿಸುತ್ತದೆ, ಮತ್ತೊಂದೆಡೆ ಅವರ ದೊಡ್ಡ ಸಮಸ್ಯೆ ಎಂದರೆ ಈ ಜನರಿಗೆ ರಕ್ತದ ಅಗತ್ಯವಿದ್ದರೆ ಅವರಿಗೆ ಬೇರೆ ಯಾವುದೇ ರಕ್ತವನ್ನು ಹಾಕಲು ಸಾಧ್ಯವಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News