ದೈತ್ಯ ಹೆಬ್ಬಾವಿನ ವಿಡಿಯೋ ವೈರಲ್ : ಸೋಷಿಯಲ್ ಮೀಡಿಯಾ ಪ್ರಪಂಚವು ಆಶ್ಚರ್ಯಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಬಹುದಾದ ಕೆಲವು ವಿಷಯಗಳನ್ನು ನೋಡುತ್ತೇವೆ ಮತ್ತು ಕೆಲವು ನಮ್ಮ ತರ್ಕಕ್ಕು ನಿಲುಕದಂತೆ ಇರುತ್ತವೆ. ಅದರಂತೆ ಇಂಟರ್ ನೆಟ್ ನಲ್ಲಿ ನೋಡುವ ವಿಡಿಯೋಗಳಲ್ಲಿರುವ ಹಲವು ಸಂಗತಿಗಳು ಕೆಲವೊಮ್ಮೆ ನಗು ತರಿಸುತ್ತವೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಆಘಾತವನ್ನುಂಟು ಮಾಡುತ್ತವೆ ಮತ್ತು ಕೆಲವೊಮ್ಮೆ ದುಃಖವನ್ನುಂಟು ಮಾಡುತ್ತವೆ. ವಿಶೇಷವಾಗಿ ಪ್ರಾಣಿಗಳ ವಿಡಿಯೋಗಳು ಅಂತರ್ಜಾಲದಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಈಗಂತೂ ಕುತೂಹಲಕಾರಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ, ಪ್ರಾಣಿಗಳ ವಿಭಿನ್ನ ವಿಡಿಯೋಗಳನ್ನು ಪ್ರತಿದಿನ ಹಂಚಿಕೊಳ್ಳಲಾಗುತ್ತದೆ. ಆದರೆ, ಈಗ ಹೊರಬಿದ್ದಿರುವ ವಿಡಿಯೋ ಸಂಪೂರ್ಣ ಭಿನ್ನವಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಈ ವಿಡಿಯೋ ಹೆಬ್ಬಾವಿಗೆ ಸಂಬಂಧಿಸಿದೆ, ಇದರಲ್ಲಿ ದೈತ್ಯ ಹೆಬ್ಬಾವು ಸಂಪೂರ್ಣ ಕಾರನ್ನು ತನ್ನ ಹಿಡಿತದಲ್ಲಿ ತೆಗದುಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಪ್ರಯತ್ನಿಸುತ್ತದೆ. ಹೆಬ್ಬಾವಿನಿಂದ ಮನುಷ್ಯನನ್ನು ರಕ್ಷಿಸಲು ಇಬ್ಬರು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ : Diabetes Control Tips: ಈ ಎಲೆಯ ಪುಡಿಯನ್ನು 1 ಚಮಚ ತಿನ್ನಿ, ಶುಗರ್ ಕ್ಷಣಾರ್ಧದಲ್ಲಿ ಕಂಟ್ರೋಲ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕಾಡಿನಲ್ಲಿ ಕಾರೊಂದು ನಿಂತಿದ್ದು, ದೈತ್ಯ ಹೆಬ್ಬಾವು ಅದಕ್ಕೆ ಸುತ್ತಿಕೊಂಡಿರುವುದನ್ನು ಕಾಣಬಹುದು. ಆಗ ದೈತ್ಯ ಹೆಬ್ಬಾವು ಅಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ನಿಧಾನವಾಗಿ ನುಂಗಲು ಪ್ರಯತ್ನಿಸುತ್ತದೆ. ಮತ್ತೊಂದೆಡೆ, ಅವನನ್ನು ಉಳಿಸಲು ಇಬ್ಬರು ಹೋರಾಡುತ್ತಿರುವುದನ್ನು ನಾವು ನೋಡಬಹುದು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ.
ಏತನ್ಮಧ್ಯೆ, ವಿಡಿಯೋದಲ್ಲಿರುವ ಈ ಹೆಬ್ಬಾವು ನಕಲಿ ಎಂದು ವಿಡಿಯೋ ತಯಾರಕರು ಹೇಳಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಖಚಿತಪಡಿಸುವುದಿಲ್ಲ. ಈ ದೃಶ್ಯಗಳನ್ನು Instagram ಖಾತೆ earth.brains ಗೆ ಅಪ್‌ಲೋಡ್ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ನಾನಾ ಟೀಕೆಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ : ಮನೆಯ ಛಾವಣಿಯಲ್ಲಿ ಕುಳಿತು ಜಾಲಿಯಾಗಿ ಗಾಳಿಪಟ ಹಾರಿಸುತ್ತಿರೋ ಕೋತಿ: ವಿಡಿಯೋ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.