Viral video : ಮಂಟಪದಲ್ಲಿ ನಡೆಯುತ್ತಿತ್ತು ಮದುವೆ ಶಾಸ್ತ್ರ, ಇದರ ಮಧ್ಯೆಯೇ ಹೊಡೆದಾಡಿಕೊಂಡ ಮನೆ ಮಂದಿ

ಎಲ್ಲಾ ಮದುವೆಯ ರೀತಿಯಲ್ಲಿಯೇ ವಿವಾಹ ಶಾಸ್ತ್ರಗಳು ನಡೆಯುತ್ತಿತ್ತು. ಮದುವೆಯ ಪ್ರಮುಖ ಭಾಗವಾದ ಹಾರ ಬದಲಾವಣೆ ಕೂಡಾ ನೆರವೇರಿದೆ. ಆದರೆ ಇದ್ದಕ್ಕಿದ್ದಂತೆ ಮದುವೆ ಮನೆಯಲ್ಲಿ ಗಲಾಟೆ ಎದ್ದಿದೆ. 

Written by - Ranjitha R K | Last Updated : Dec 13, 2022, 04:59 PM IST
  • ಎಲ್ಲಾ ಮದುವೆಯ ರೀತಿಯಲ್ಲಿಯೇ ವಿವಾಹ ಶಾಸ್ತ್ರಗಳು ನಡೆಯುತ್ತಿತ್ತು.
  • ಮದುವೆಯ ಪ್ರಮುಖ ಭಾಗವಾದ ಹಾರ ಬದಲಾವಣೆ ಕೂಡಾ ನೆರವೇರಿದೆ.
  • ಇದ್ದಕ್ಕಿದ್ದಂತೆ ಮದುವೆ ಮನೆಯಲ್ಲಿ ಗಲಾಟೆ ಎದ್ದಿದೆ.
Viral video : ಮಂಟಪದಲ್ಲಿ ನಡೆಯುತ್ತಿತ್ತು ಮದುವೆ ಶಾಸ್ತ್ರ, ಇದರ ಮಧ್ಯೆಯೇ ಹೊಡೆದಾಡಿಕೊಂಡ ಮನೆ ಮಂದಿ   title=

Wedding Viral Video : ಮನೆಯಲ್ಲಿ ಮದುವೆ ನಿಶ್ಚಯವಾಯಿತು ಎಂದರೆ ಅದರ ತಯಾರಿ ಬಹಳಷ್ಟು ದಿನಗಳಿಂದ ನಡೆಯುತ್ತಿರುತ್ತದೆ. ಶಾಸ್ತ್ರ ಸಂಪ್ರದಾಯ, ಅತಿಥಿ ಸತ್ಕಾರ, ಊಟ ಉಪಚಾರ ಹೀಗೆ ಯಾವುದರಲ್ಲಿಯೂ ಕೊರತೆಯಾಗಬಾರದು ಎಂದು ವಿಶೇಷ ಕಾಳಜಿ ವಹಿಸಲಾಗುತ್ತದೆ. ಮಗನ ಅಥವಾ ಮಗಳ ಮದುವೆ ಮಾಡಿಸುವುದೆಂದರೆ ಹೆತ್ತವರು ತಾವು ಸಂಪಾದಿಸಿದ್ದನ್ನೆಲ್ಲಾ ಹಿಂದೆ  ಮುಂದೆ ನೋಡದೆ ಖರ್ಚು ಮಾಡಿ ಬಿಡುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಮಕ್ಕಳ ಮಾಡುವೆ ಇನ್ನುಳಿದವರಿಗಿಂತ  ಅದ್ದೂರಿಯಾಗಿ ನಡೆಯಬೇಕು ಎನ್ನುವ ಆಸೆ ಇರುತ್ತದೆ.  ಮದುವೆ ಎನ್ನುವುದು ಒಬ್ಬರ ಜೀವನದಲ್ಲಿ ಒಂದು ಬಾರಿ ಘಟಿಸುವಂಥಹ ಸುಂದರ ಕ್ಷಣ. ಹೀಗಾಗಿ ಈ ಕ್ಷಣದಲ್ಲಿ  ನಡೆಯುವ ಅನಾಹುತಗಳು ಜೀವಮಾನವಿಡೀ ನೆನಪಿನಲ್ಲಿ ಉಳಿದು ಬಿಡುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ನಡೆಯಬಾರದ್ದು  ನಡೆದೇ ಹೋಗುತ್ತದೆ. 

ಈ ಮದುವೆಯಲ್ಲಿ ಆದದ್ದು ಕೂಡಾ ಅದೇ. ಇಲ್ಲಿ ಎಲ್ಲಾ ಮದುವೆಯ ರೀತಿಯಲ್ಲಿಯೇ ವಿವಾಹ ಶಾಸ್ತ್ರಗಳು ನಡೆಯುತ್ತಿತ್ತು. ಮದುವೆಯ ಪ್ರಮುಖ ಭಾಗವಾದ ಹಾರ ಬದಲಾವಣೆ ಕೂಡಾ ನೆರವೇರಿದೆ. ಇನ್ನೇನು ವಧು ವರನಿಗೆ ಆರತಿ ಬೆಳಗುತ್ತಿದ್ದಾಳೆ. ಇವೆಲ್ಲವನ್ನೂ ನಾವು ವಿಡಿಯೋದಲ್ಲಿ ಕಾಣಬಹುದು. ಮದುವೆ ಮಂಟಪದಲ್ಲಿ ಮದುವೆ  ಶಾಸ್ತ್ರಗಳು ನಡೆಯುತ್ತಿವೆ. ಆದರೆ ಇದ್ದಕ್ಕಿದ್ದಂತೆ ಮದುವೆ ಮನೆಯಲ್ಲಿ ಗಲಾಟೆ ಎದ್ದಿದೆ. 

ಇದನ್ನೂ ಓದಿ : Viral Video: 52 ವರ್ಷದ ಆಂಟಿಯನ್ನು ಮದುವೆಯಾದ 21 ರ ಯುವಕ! ಬಲು ರೋಚಕ ಈ ಲವ್‌ ಸ್ಟೋರಿ

ಗಲಾಟೆ ಎಂದರೆ ಸುಮ್ಮನೆ ಬಾಯಿಯಲ್ಲಿ ಬೈದಾಡಿಕೊಂಡ ಗಲಾಟೆ ಅಲ್ಲ. ನೆಂಟರಿಷ್ಟರು ಹೊಡೆದಾಡಿಕೊಂಡಿದ್ದಾರೆ. ಮೊದಲು ಒಂದಿಬ್ಬರ ಮಧ್ಯೆ ಶುರುವಾದ ಜಗಳ, ಕ್ರಮೇಣ ಇಡೀ ಮದುವೆ ಮನೆಗೆ ಹರಡಿಕೊಂಡು ಬಿಟ್ಟಿದೆ. ಕೈಗೆ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ಎತ್ತಿಕೊಂಡು ಹೊಡೆದಾಡಿದ್ದಾರೆ. ಕುರ್ಚಿ ಟೇಬಲ್ ಗಳನ್ನೂ ಬಿಟ್ಟಿಲ್ಲ. ಈ ಗಲಾಟೆ ನೋಡಿ ಬೆದರಿದ ವರ ಒಂದು ಕ್ಷಣ ಮಂಟಪದಿಂದ ಇಳಿಯಲು ಸಿದ್ದನಾಗಿರುವುದನ್ನು ಕೂಡ ವಿಡಿಯೋ ದಲ್ಲಿ ಕಾಣಬಹುದು. ಆದರೆ ವಧು ಆತನನ್ನು ಕೈ ಹಿಡಿದು ತಡೆಯುತ್ತಾಳೆ.  ಎರಡು ಜೀವಗಳ ಹೊಸ ಜೀವನದ ಆರಂಭಕ್ಕೆ ಸಾಕ್ಷಿಯಾಗಲು ಬಂದ  ಕುಟುಂಬದವರು ಬೇರೆ ರೀತಿಯ ಘಟನೆ ಸೃಷ್ಟಿ ಮಾಡಿದ್ದು ಮಾತ್ರ ವಿಪರ್ಯಾಸ. 

 

 
 
 
 

 
 
 
 
 
 
 
 
 
 
 

A post shared by Rk Raj (@rajuraj2794)

ಇದನ್ನೂ ಓದಿ : Viral Video: 52 ವರ್ಷದ ಆಂಟಿಯನ್ನು ಮದುವೆಯಾದ 21 ರ ಯುವಕ! ಬಲು ರೋಚಕ ಈ ಲವ್‌ ಸ್ಟೋರಿ
 
ಕೆಲವು ಸೆಕೆಂಡುಗಳ ಈ ವೀಡಿಯೊ ತ್ವರಿತವಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಇದನ್ನು rajuraj2794 ಹೆಸರಿನ ಖಾತೆಯಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಸುಮಾರು 80 ಸಾವಿರ ಜನರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಈ ವೀಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News