Matrimonial Ad: ವಧು - ವರರನ್ನು ಹುಡುಕಲು ಅನೇಕ ರೀತಿಯ ಸೈಟ್‌ಗಳು ಲಭ್ಯವಿದೆ. ಭಾರತದಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಗಳನ್ನು ಹುಡುಗ - ಹುಡುಗಿ ಹುಡುಕಲು ಹೆಚ್ಚಾಗಿ ಬಳಸಲಾಗುತ್ತದೆ. ಹಲವರು ತಮ್ಮ ಲೈಫ್ ಪಾರ್ಟನರ್ ಅನ್ನು ಈ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕವೇ ಹುಡುಕಿಕೊಂಡಿದ್ದಾರೆ. ವರ ಅಥವಾ ವಧು ಬೇಕಿರುವವರು ಈ ಸೈಟ್‌ಗಳಲ್ಲಿ ತಮಗೆ ಬೇಕಾದ ಗುಣಗಳು, ವಿದ್ಯಾರ್ಹತೆ, ಉದ್ಯೋಗ ಇತ್ಯಾದಿ ವಿವರಗಳನ್ನು ಹೇಳಿರುತ್ತಾರೆ. ಈ ದಿನಗಳಲ್ಲಿ ಮ್ಯಾಟ್ರಿಮೋನಿಯಲ್ ಜಾಹೀರಾತುಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಅಂತಹದೊಂದು ಜಾಹೀರಾತು ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : Garuda Purana: ಈ 4 ಗುಣಗಳಿರುವ ಪತ್ನಿಯನ್ನು ಪಡೆದ ಗಂಡನೇ ಅದೃಷ್ಟವಂತ
Future of IT does not look so sound. pic.twitter.com/YwCsiMbGq2
— Samir Arora (@Iamsamirarora) September 16, 2022
ಹೌದು, ಇಲ್ಲೊಂದು ಯುವತಿ ತಾನು ಮದುವೆಯಾಗಲು ವರ ಬೇಕು ಎಂದು ಜಾಹೀರಾತು ನೀಡಿದ್ದಾಳೆ. ಆದರೆ ಅವಳ ವಿಚಿತ್ರ ಕಂಡಿಷನ್ ಒಂದರಿಂದ ಈ ಜಾಹೀರಾತು ಎಲ್ಲೆಡೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಉದ್ಯೋಗಿಯಾಗಿರಬೇಕು, ಕನಿಷ್ಠ ಡಿಗ್ರಿ ಆಗಿರಬೇಕು, ಮನೆತನೆಕ್ಕೆ ಹೊಂದಿಕೊಳ್ಳಬೇಕು ಹೀಗೆ ಹಲವು ಬೇಡಿಕೆಗಳನ್ನು ಇಡುತ್ತಾರೆ. ಆದರೆ ಇತ್ತೀಚೆಗೆ ಇಲ್ಲೊಂದು ಜಾಹೀರಾತಿನಲ್ಲಿ 'ಸಾಫ್ಟ್‌ವೇರ್ ಎಂಜಿನಿಯರ್‌ಗಳು ದಯಮಾಡಿ ಕರೆ ಮಾಡಬೇಡಿ' ಎಂದು ಬರೆದಿರುವುದು ಆಶ್ಚರ್ಯ ತಂದಿದೆ.
IAS/IPS, ವ್ಯಾಪಾರ, ಕೈಗಾರಿಕಾ ಅಥವಾ ವೈದ್ಯರ ಹಿನ್ನೆಲೆಯಿಂದ ಬಂದ ತನ್ನದೇ ಜಾತಿಯ ಯಾವುದೇ ವರ ಕಾಲ್ ಮಾಡಿ. ಆದರೆ ಸಾಫ್ಟ್‌ವೇರ್ ಇಂಜಿನಿಯರ್ ದಯಮಾಡಿ ಕಾಲ್ ಮಾಡಲೇ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಜಾಹೀರಾತು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : 19ರ ಬಾಲಕಿ ಮೇಲೆ Zomato ಡೆಲಿವರಿ ಬಾಯ್ ದೌರ್ಜನ್ಯ: ಕಿರಾತಕನ ಗತಿ ಮುಂದೇನಾಯ್ತು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.