Viral Video: ಪ್ಯಾಂಟ್ ಕಳಚಿಬಿದ್ರೂ ಕ್ಯಾರೇ ಎನ್ನದ ಹುಡುಗಿ, ವಿದ್ಯಾರ್ಥಿನಿಯರ ಡಿಶುಂ ಡಿಶುಂ ಸಖತ್‌ ವೈರಲ್!

Viral Video: ಆರಂಭದಲ್ಲಿ ಈ ಜಗಳ ಹೇಗೆ ಶುರುವಾಯ್ತು ಅನ್ನೋದು ಗೊತ್ತಾಗಿಲ್ಲ. ಈ ಜಗಳದ ವೇಳೆ ಹೊಡೆಸಿಕೊಳ್ಳುತ್ತಿದ್ದ ಹುಡುಗಿ, ತನಗೆ ಹೊಡೆಯುತ್ತಿದ್ದ ಹುಡುಗಿಯ ಪ್ಯಾಂಟ್ ಹಿಡಿದು ಎಳೆದಿದ್ದಾಳೆ. ಆಕೆಯ ಪ್ಯಾಂಟ್ ಕೆಳಗೆ ಬಿದ್ದರೂ ಸಹ ಆ ಹುಡುಗಿಗೆ ಪ್ರಜ್ಞೆ ಇರಲಿಲ್ಲ. ​

Written by - Puttaraj K Alur | Last Updated : Oct 2, 2024, 06:56 PM IST
  • ನಡು ಬೀದಿಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಹುಡುಗಿಯರು
  • ಪ್ಯಾಂಟ್ ಕಳಚಿಬಿದ್ರೂ ಕ್ಯಾರೇ ಎನ್ನದ ಹುಡುಗಿಯಿಂದ ಹಲ್ಲೆ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್
Viral Video: ಪ್ಯಾಂಟ್ ಕಳಚಿಬಿದ್ರೂ ಕ್ಯಾರೇ ಎನ್ನದ ಹುಡುಗಿ, ವಿದ್ಯಾರ್ಥಿನಿಯರ ಡಿಶುಂ ಡಿಶುಂ ಸಖತ್‌ ವೈರಲ್! title=
ಹೊಡೆದಾಡಿಕೊಂಡ ಹುಡುಗಿಯರು!

Viral Video: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಜಗಳಗಳ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಗಂಡ-ಹೆಂಡತಿ ಜಗಳ, ಲವರ್‌ಗಳ ಜಗಳ, ಮಹಿಳೆಯರ ಜಗಳ ಹಾಗೂ ಹುಡುಗಿಯರ ಕಿತ್ತಾಟದ ಹಲವಾರು ವಿಡಿಯೋಗಳು ಆಗಾಗ ಸಖತ್‌ ಸೌಂಡ್‌ ಮಾಡುತ್ತಿರುತ್ತವೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ವಿದ್ಯಾರ್ಥಿನಿಯರ ಡಿಶುಂ ಡಿಶುಂ ನೋಡಿದ ಅನೇಕರು ಹೌಹಾರಿದ್ದಾರೆ. ಆ ರೀತಿ ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿದ್ದಾರೆ. 

ಹೌದು, ಪ್ಯಾಂಟ್ ಕಳಚಿಬಿದ್ರೂ ಕ್ಯಾರೇ ಎನ್ನದ ಹುಡುಗಿ, ತನ್ನ ವಿರೋಧಿಗೆ ಒಂದೇಟು ಹಾಕಿದ ನಂತರವೇ ಪ್ಯಾಂಟ್ ಏರಿಸಿಕೊಂಡಿದ್ದನ್ನು ನೋಡಿ ನೆಟಿಜನ್ಸ್‌ ದಂಗುಬಡಿದು ಹೋಗಿದ್ದಾರೆ. ಜಗಳ ಮಾಡ್ಲಿ ಆದ್ರೆ ಈ ರೀತಿ ಮಾಡ್ತಾರಾ ಅಂತಾ ಅನೇಕರು ಪ್ರಶ್ನಿಸಿದ್ದಾರೆ. @a_bhaktOff ಎಂಬ ಟ್ವಿಟರ್‌ ಖಾತೆಯಲ್ಲಿ ಹುಡುಗಿಯರ ನಡುವಿನ ಫೈಟ್‌ನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಾಗಾಲ್ಯಾಂಡ್‌ನ ಹುಡುಗಿಯರು ನಡು ಬೀದಿಯಲ್ಲೇ ಅಟ್ಟಾಡಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ಒಬ್ಬ ಹುಡುಗಿ ಮೂರ್ಛೆ ಹೋಗಿದ್ದಳು. ಆಕೆಯನ್ನು ರಕ್ಷಿಸಲು ನಿಂತಿದ್ದವರೆಲ್ಲರೂ ಓಡಿ ಬಂದಿದ್ದಾರೆ. ಎಲ್ಲರೂ ಒಂದೇ ರೀತಿ ಡ್ರೆಸ್ ಹಾಕಿದ್ದು, ಯಾವುದೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿರಬಹುದು ಎಂದು ಹೇಳಲಾಗಿದೆ. 

ಇದನ್ನೂ ಓದಿ: ತಿರುಪತಿ ಲಡ್ಡು ಪ್ರಕರಣ: ಅಕ್ಟೋಬರ್ 3 ರವರೆಗೆ ಎಸ್‌ಐಟಿ ವಿಚಾರಣೆಗೆ ತಡೆ

ಆರಂಭದಲ್ಲಿ ಈ ಜಗಳ ಹೇಗೆ ಶುರುವಾಯ್ತು ಅನ್ನೋದು ಗೊತ್ತಾಗಿಲ್ಲ. ಈ ಜಗಳದ ವೇಳೆ ಹೊಡೆಸಿಕೊಳ್ಳುತ್ತಿದ್ದ ಹುಡುಗಿ, ತನಗೆ ಹೊಡೆಯುತ್ತಿದ್ದ ಹುಡುಗಿಯ ಪ್ಯಾಂಟ್ ಹಿಡಿದು ಎಳೆದಿದ್ದಾಳೆ. ಆಕೆಯ ಪ್ಯಾಂಟ್ ಕೆಳಗೆ ಬಿದ್ದರೂ ಸಹ ಆ ಹುಡುಗಿಗೆ ಪ್ರಜ್ಞೆ ಇರಲಿಲ್ಲ. ಹೊಡೆಯೋದನ್ನು ನಿಲ್ಲಿಸಿದ ಆಕೆ, ನಾಲ್ಕೇಟು ಹಾಕಿದ ಮೇಲೆಯೇ ಪ್ಯಾಂಟ್‌ಅನ್ನ ಮೇಲೆ ಏರಿಸಿಕೊಂಡಿದ್ದಾಳೆ. ನಂತರ ಆಕೆಯನ್ನು ಕೆಳಗೆ ಬೀಳಿಸಿ ಮತ್ತೆ ರಪರಪ ಅಂತ ಹೊಡೆದಿದ್ದಾಳೆ. ಈ ವೇಳೆ ಕೆಳಗೆ ಬೀಳುವ ಹುಡುಗಿ ಮೂರ್ಛೆ ಹೋಗ್ತಾಳೆ.

ಇದೇ ವೇಳೆ ಮತ್ತೆ ಕೆಲವು ಹುಡುಗಿಯರು ಸಹ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಹುಡುಗಿಯರ ಫೈಟ್‌ ನೋಡುತ್ತಿದ್ದ ಅನೇಕರು ವಿಡಿಯೋ ಸೆರೆ ಹಿಡಿಯುತ್ತಾ ಮಜಾ ತೆಗೆದುಕೊಳ್ಳುತ್ತಿದ್ದರು. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹುಡುಗಿಯರು ಈ ರೀತಿಯೂ ಹೊಡೆದಾಡಿಕೊಳ್ತಾರಾ ಅಂತಾ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಹೆಲಿಕ್ಯಾಪ್ಟರ್ ನೀರಿನಲ್ಲಿ ಪತನ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News