Wedding Viral Video : ಮದುವೆ ಮನೆಯಲ್ಲಿ ಆಟ, ತಮಾಷೆಗಳು ಸಾಮಾನ್ಯ. ಮದುವೆ ಮನೆಯಲ್ಲಿ ತಮಾಷೆ ಆಟ ಇಲ್ಲದಿದ್ದರೆ ಸಂಭ್ರಮವೂ ಇರುವುದಿಲ್ಲ. ಆದರೆ ಒಮ್ಮೊಮ್ಮೆ ತಮಾಷೆ ವಿಪರೀತಕ್ಕೆ ಹೋಗುವುದೂ ಇದೆ. ಇದೀಗ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿವೆ. ಇಲ್ಲೊಂದು ಮದುವೆಯಲ್ಲಿ ನಡೆದ ಘಟನೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಮದುವೆ ಎಂದರೆ ಅಲ್ಲಿ ವಧುವಿನ ಸಹೋದರಿಯರ ಕಾರುಬಾರು ಸ್ವಲ್ಪ ಹೆಚ್ಚೇ ಇರುತ್ತದೆ. ಭರ್ಜರಿಯಾಗಿ ಸಿಂಗರಿಸಿಕೊಂಡ ವಧುವಿನ ಸಹೋದರಿಯರು ತುಂಬಿದ ಮದುವೆ ಮನೆಯಲ್ಲಿ ಎಲ್ಲೆಂದರಲ್ಲಿ ಸದ್ದು ಮಾಡುತ್ತಿರುತ್ತಾರೆ. ಸಂಬಂಧಗಳಲ್ಲಿಯೂ ಹಾಗೆಯೇ, ಭಾವ ಮತ್ತು ನಾದಿನಿ ಎಂದರೆ ಅಲ್ಲಿ ಒಂದು ರೀತಿಯ ಸಲುಗೆ ಇರುತ್ತದೆ. ಸಮಯ ಸಿಕ್ಕಾಗಲೆಲ್ಲಾ ಭಾವನ ಕಾಲೆಳೆಯುವ ಅವಕಾಶವನ್ನು ನಾದಿನಿಯೂ ಬಿಡುವುದಿಲ್ಲ. ಭಾವನೂ ಬಿಡುವುದಿಲ್ಲ.
ಇದನ್ನೂ ಓದಿ : Viral Video: ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ! ಪಕ್ಕದಲ್ಲಿದ್ದ ಹುಡುಗಿ ಮಾಡಿದ್ದೇನು ನೋಡಿ
ಹಾಗಾಗಿ ಮದುವೆ ಮನೆಯಲ್ಲಿ ಇವರಿಬ್ಬರ ನಡುವೆ ಕೂಡಾ ಕೆಲವು ತಮಾಷೆಯ ಸನ್ನಿವೇಶಗಳು ನಡೆಯುತ್ತವೆ. ಇನ್ನು ಊರಿಗೊಂದು ನೀತಿ, ಜಾತಿಗೊಂದು ನಿಯಮ ಎನ್ನುವ ಹಾಗೆ ಮದುವೆಯ ಶಾಸ್ತ್ರ ಸಂಪ್ರದಾಯಗಳು ಕೂಡಾ ಊರಿನಿಂದ ಊರಿಗೆ ಬದಲಾಗುತ್ತಿರುತ್ತದೆ. ಇಲ್ಲಿ ಮದುವೆ ದಿನ ವರನಿಗೆ ನಾದಿನಿ ಸಿಹಿ ತಿನ್ನಿಸುವುದು ಸಂಪ್ರದಾಯ. ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ವರನಿಗೆ ಸಿಹಿ ನೀಡಬೇಕು ನಿಜ. ಆದರೆ ಆ ಸಿಹಿಯನ್ನು ವರ ತಿನ್ನದಂತೆ ಕೂಡಾ ತಡೆಯಬೇಕು.
ಶಾಸ್ತ್ರದ ಪ್ರಕಾರ ವರನ ನಾದಿನಿ ಇಲ್ಲಿ ರಸಗುಲ್ಲಾವನ್ನು ಹಿಡಿದುಕೊಂಡು ವೇದಿಕೆಗೆ ಬರುತ್ತಾಳೆ. ಕೈಯ್ಯಲ್ಲಿ ರಸಗುಲ್ಲಾ ಹಿಡಿದುಕೊಂಡು ವರನಿಗೆ ತಿನ್ನಿಸಲು ಹೋಗುತ್ತಾಳೆ. ಆದರೆ ನಾದಿನಿ ಆಟ ತಿಳಿದಿದ್ದ ವರ ಏನೂ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತುಕೊಳ್ಳುತ್ತಾನೆ. ಅಷ್ಟರಲ್ಲಿ ವರನ ಸ್ನೇಹಿತರು ರಸಗುಲ್ಲಾ ತಿನ್ನುವಂತೆ ವರನನ್ನು ಒತ್ತಾಯಿಸುತ್ತಾರೆ. ಇನ್ನೇನು ವರ ರಸಗುಲ್ಲಾವನ್ನು ಬಾಯಿಗೆ ಹಾಕಬೇಕು ಎನ್ನುವಷ್ಟರಲ್ಲಿ ನಾದಿನಿ ಅದನ್ನು ಕಸಿದು ತಿಂದು ಬಿಡುತ್ತಾಳೆ. ವರ ನಕ್ಕು ಸುಮ್ಮನಾಗಿ ಬಿಡುತ್ತಾನೆ.
ಇದನ್ನೂ ಓದಿ : Shocking Video: ಈ ಹುಚ್ಚಾಟಿ ಪ್ರೇಮಿಯ ಹುಚ್ಚಾಟ ನೋಡಿ ತಲೆ ಒಂದು ಕ್ಷಣ ದಿಮ್ಮೆನ್ನುವುದು ಗ್ಯಾರಂಟಿ.. ವಿಡಿಯೋ ನೋಡಿ
ಇನ್‌ಸ್ಟಾಗ್ರಾಮ್‌ನಲ್ಲಿ ashiq.billota ಹೆಸರಿನ ಪುಟದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ನೆಟಿಜನ್‌ಗಳು ಕೂಡ ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.