Viral Video: ಪ್ರಿಯಕರನ ಜೊತೆ ಮದುವೆ ಮಾಡುವಂತೆ ಪೊಲೀಸ್ ಠಾಣೆಯಲ್ಲಿ ವಧುವಿನ ರಂಪಾಟ!

Newly Married Bride Viral Video: ಜೋರಾಗಿ ಕೂಗಾಡುತ್ತಾ ತನ್ನ ಪ್ರಿಯಕರನ ಜೊತೆಗೆ ಮದುವೆ ಮಾಡಿಸಿ ಎಂದು ರಂಪಾಟ ಮಾಡಿರುವ ಯುವತಿಯನ್ನು ಲೇಡಿ ಕಾನ್ಸ್ಟೇಬಲ್‍ಗಳು ಸಮಾಧಾನಪಡಿಸಿದ್ದಾರೆ.

Written by - Puttaraj K Alur | Last Updated : Apr 3, 2023, 08:25 PM IST
  • ಮದುವೆಯಾದ ಕೆಲವೇ ಕ್ಷಣಗಳಲ್ಲಿ ನವವಿವಾಹಿತೆಯೊಬ್ಬಳು ಹೈಡ್ರಾಮಾ ಸೃಷ್ಟಿಸಿದ್ದಾಳೆ
  • ಪ್ರಿಯಕರನೊಂದಿಗೆ ಮದುವೆ ಮಾಡುವಂತೆ ಪೊಲೀಸ್ ಠಾಣೆಯಲ್ಲಿ ವಧುವಿನ ರಂಪಾಟ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಪ್ರಿಯಕರನ ಜೊತೆ ಮದುವೆ ಮಾಡುವಂತೆ ಪೊಲೀಸ್ ಠಾಣೆಯಲ್ಲಿ ವಧುವಿನ ರಂಪಾಟ! title=
ಪೊಲೀಸ್ ಠಾಣೆಯಲ್ಲಿ ವಧುವಿನ ರಂಪಾಟ!

ನವದೆಹಲಿ: ಮದುವೆಯಾದ ಕೆಲವೇ ಕ್ಷಣಗಳಲ್ಲಿ ನವವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಮದುವೆ ಮಾಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆಗೆ ತೆರೆಳು ಹೈಡ್ರಾಮಾ ಮಾಡಿದ್ದಾಳೆ.

ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಯುವತಿ ಮನೆಯವರ ಒತ್ತಾಯಕ್ಕೆ ಅವರು ತೋರಿಸಿದ ಹುಡುಗನನ್ನು ಮದುವೆಯಾಗಿದ್ದಳು. ಒಲ್ಲದ ಮನಸ್ಸಿನಿಂದ ತಾಳಿ ಕಟ್ಟಿಸಿಕೊಂಡ ಯುವತಿ ಮದುವೆಯಾದ ತಕ್ಷಣವೇ ಪೊಲೀಸ್ ಠಾಣೆಗೆ ಬಂದಿದ್ದಾಳೆ.

ಇದನ್ನೂ ಓದಿ: ಜಾರ್ಖಂಡ್: ಎನ್‌ಕೌಂಟರ್‌ನಲ್ಲಿ 5 ನಕ್ಸಲರ ಹತ್ಯೆ, ಎರಡು ಎಕೆ 47 ವಶಕ್ಕೆ

ಬಂದವಳೇ ನನ್ನ ಲವರ್ ಜೊತೆಗೆ ಮದುವೆ ಮಾಡಿಸಿ ಅಂತಾ ಪೊಲೀಸರಿಗೆ ದುಂಬಾಲು ಬಿದ್ದಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಜೋರಾಗಿ ಕೂಗುತ್ತಾ ರಂಪಾಟ ನಡೆಸಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಜೋರಾಗಿ ಕೂಗಾಡುತ್ತಾ ತನ್ನ ಪ್ರಿಯಕರನ ಜೊತೆಗೆ ಮದುವೆ ಮಾಡಿಸಿ ಎಂದು ರಂಪಾಟ ಮಾಡಿರುವ ಯುವತಿಯನ್ನು ಲೇಡಿ ಕಾನ್ಸ್ಟೇಬಲ್‍ಗಳು ಸಮಾಧಾನಪಡಿಸಿದ್ದಾರೆ. ಯಾರ ಮಾತನ್ನೂ ಕೇಳದ ಯುವತಿ ಜೋರಾಗಿ ಕಿರುಚಾಡಿದ್ದಾಳೆ. Deepika Narayan Bhardwaj ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಾನಹಾನಿ ಪ್ರಕರಣ: ರಾಹುಲ್ ಗಾಂಧಿಗೆ ಜಾಮೀನು ನೀಡಿದ ಸೂರತ್ ಕೋರ್ಟ್

ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅನೇಕರು ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾರೆ. ಕೇವಲ 39 ಸೆಕೆಂಡುಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹವಾ ಸೃಷ್ಟಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News