Viral Video: ಹಾವಿಗೆ ಕಿಸ್‌ ಕೊಡಲು ಹೋದ ಯುವತಿ.. ಗಬಕ್ಕನೇ ತುಟಿಗೇ ಬಾಯಿ ಹಾಕಿ ಕಚ್ಚಿದ ವಿಷಸರ್ಪ!

Snake Bite Viral Video: ಹೆಬ್ಬಾವು ತನ್ನನ್ನು ಚುಂಬಿಸಿದ ಮಹಿಳೆಯನ್ನು ಕಚ್ಚುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪ್ರಾಣಿಗಳು ಮತ್ತು ಸರೀಸೃಪಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕೆಂದು ಇದು ಸೂಚಿಸುತ್ತದೆ.

Written by - Chetana Devarmani | Last Updated : Jun 1, 2023, 10:26 AM IST
  • ಹಾವಿಗೆ ಕಿಸ್‌ ಕೊಡಲು ಹೋದ ಯುವತಿ
  • ಯುವತಿಯ ಮೂಗು ಮತ್ತು ಬಾಯಿಗೆ ಕಚ್ಚಿದ ಉರಗ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video: ಹಾವಿಗೆ ಕಿಸ್‌ ಕೊಡಲು ಹೋದ ಯುವತಿ.. ಗಬಕ್ಕನೇ ತುಟಿಗೇ ಬಾಯಿ ಹಾಕಿ ಕಚ್ಚಿದ ವಿಷಸರ್ಪ!  title=
Snake Bite

Snake Bite Viral Video: ಅಂತರ್ಜಾಲದಲ್ಲಿ ಸಾಕಷ್ಟು ಹಾವಿನ ವಿಡಿಯೋಗಳಿವೆ. ಕೆಲವು ವಿಡಿಯೋಗಳನ್ನು ನೋಡಿದಾಗ ಭಯ ಹುಟ್ಟುವಂತಿವೆ. ಹಾವುಗಳು ಹೇಳಿ ಕೇಳಿ ವಿಷಜಂತುಗಳು. ಅವುಗಳ ಜೊತೆಗೆ ಹುಡುಗಾಟ ಆಡೋದು ಜೀವಕ್ಕೆ ಕುತ್ತು ತರಬಹುದು. ಇದನ್ನು ತಿಳಿದೂ ಅನೇಕ ಜನರು ಪ್ರಾಣಭಯ ಬಿಟ್ಟು ವಿಷಸರ್ಪದ ಜೊತೆ ಸರಸವಾಡಲು ಹೋಗುತ್ತಾರೆ. ಆಗ ನಡೆಯುವ ಉರಗ ದಾಳಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಬಾರಿ ವೈರಲ್‌ ಆಗುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಹರಿದಾಡುತ್ತಿದೆ.

ಪಾರ್ಕ್ ಗೆ ತೆರಳುವ ಹುಡುಗಿಯರು ಅಲ್ಲಿನ ಸಿಬ್ಬಂದಿ ಸಾಕಿರುವ ಹಾವನ್ನು ನೋಡಿ ಖುಷಿ ಪಡುತ್ತಾರೆ. ಅವರ ಕೈಯಲ್ಲಿದ್ದ ಅಪಾಯಕಾರಿ ಹಾವನ್ನು ಕಂಡು ಅದು ಕಚ್ಚುವುದಿಲ್ಲ ಎಂಬ ಮನಸ್ಥಿತಿಗೆ ಹೋಗುತ್ತಾರೆ. ಹಾವನ್ನು ಕಂಡು ಆಕರ್ಷಿತಳಾದ ಯುವತಿ ಒಬ್ಬಳು ಅದನ್ನು ಚುಂಬಿಸಲು ಹೋಗುತ್ತಾಳೆ. ಇಬ್ಬರು ಸಿಬ್ಬಂದಿ ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಆದರೆ ಹಾವು ತಡ ಮಾಡದೆ ಯುವತಿಯ ಮೂಗು ಮತ್ತು ಬಾಯಿಗೆ ಕಚ್ಚಿದೆ. ಈ ಯುವತಿ ಇದನ್ನು ಸ್ವಲ್ಪವೂ ನಿರೀಕ್ಷಿಸಿರಲಿಲ್ಲ ಎಂದೆನಿಸುತ್ತದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಮೊದಲ Girlfriend ಇವರೇ.. ತೆಲುಗು ಸೂಪರ್ ಸ್ಟಾರ್ ಬಿಚ್ಚಿಟ್ಟ ಸತ್ಯ ವೈರಲ್‌!

ಹಾವು ಕಚ್ಚಲು ಆರಂಭಿಸುತ್ತಿದ್ದಂತೆ ಯುವತಿ ಕಿರುಚಲು ಆರಂಭಿಸಿದ್ದಾಳೆ. ಆ ವೇಳೆ ಪಕ್ಕದಲ್ಲಿದ್ದ ಮಹಿಳೆಯೂ ಸ್ನೇಹಿತೆಯನ್ನು ರಕ್ಷಿಸುವಂತೆ ಕೂಗಿದ್ದಾಳೆ. ಇದನ್ನು ಕಂಡ ಹಾವನ್ನು ಹಿಡಿದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಹಾವಿನ ದಾಳಿಗೆ ಒಳಗಾದ ಮಹಿಳೆಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಈ ವಿಡಿಯೋ ಈಗ ವೈರಲ್ ಆಗಿದೆ. 

 

 

ಹಾವು ಯಾವಾಗಲೂ ಆತ್ಮರಕ್ಷಣೆಯ ಪ್ರಜ್ಞೆಯನ್ನು ಹೊಂದಿರುತ್ತದೆ. ಹಾವಿಗೆ ಯಾರಾದರೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನಿಸಿದರೆ ಅದು ಅರೆ ಕ್ಷಣವೂ ಕಾಯದೇ ಅವರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಮನುಷ್ಯ ಅಥವಾ ಪ್ರಾಣಿ ಯಾರನ್ನೂ ಬಿಡುವುದಿಲ್ಲ. ಈ ವಿಡಿಯೋವನ್ನು ನೋಡುವ ಮೂಲಕ ನೀವು ಅದನ್ನು ಅರ್ಥಮಾಡಿಕೊಳ್ಳುವಿರಿ. ಆದ್ದರಿಂದ ಹಾವು ಸೇರಿದಂತೆ ಸರೀಸೃಪಗಳು ಮತ್ತು ಪ್ರಾಣಿಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಿ. ಈ ವಿಡಿಯೋವನ್ನು ಟ್ವಿಟ್ಟರ್ ಪೇಜ್ ccvidiots ನಲ್ಲಿ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ 2.1 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಹಾವನ್ನು ಚುಂಬಿಸುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎಂದು ಅನೇಕರು ತಮ್ಮ ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಟರ್ಕಿಯಲ್ಲಿ ಸಮಂತಾ ಜೊತೆ ವಿಜಯ್ ದೇವರಕೊಂಡ.. ಬಿಯರ್ ಕುಡಿದು ಚಿಲ್‌ ಮಾಡಿದ ಫೋಟೋ ವೈರಲ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News