Allu Arjun: ಅಲ್ಲು ಅರ್ಜುನ್ ಮೊದಲ Girlfriend ಇವರೇ.. ತೆಲುಗು ಸೂಪರ್ ಸ್ಟಾರ್ ಬಿಚ್ಚಿಟ್ಟ ಸತ್ಯ ವೈರಲ್‌!

Allu Arjun Confession About First Girlfriend: ಅಲ್ಲು ಅರ್ಜುನ್ ದೇಶಾದ್ಯಂತ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಇಂಡಿಯನ್ ಐಡಲ್ ತೆಲುಗು ಸೀಸನ್ 2 ಅಂತಿಮ ಸಂಚಿಕೆಯಲ್ಲಿ ಅಲ್ಲು ಅರ್ಜುನ್‌ ಭಾಗಿಯಾಗಿದ್ದರು. ಈ ವೇಳೆ ಅವರು ತಮ್ಮ ಮೊದಲ ಗರ್ಲ್‌ ಫ್ರೆಂಡ್‌ ಬಗ್ಗೆ ಮಾತನಾಡಿದ್ದಾರೆ. 

Written by - Chetana Devarmani | Last Updated : May 31, 2023, 10:23 PM IST
  • ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್
  • ಅಲ್ಲು ಅರ್ಜುನ್ ಮೊದಲ Girlfriend ಇವರೇ
  • ತೆಲುಗು ಸೂಪರ್ ಸ್ಟಾರ್ ಬಿಚ್ಚಿಟ್ಟ ಸತ್ಯ ವೈರಲ್‌
Allu Arjun: ಅಲ್ಲು ಅರ್ಜುನ್ ಮೊದಲ Girlfriend ಇವರೇ.. ತೆಲುಗು ಸೂಪರ್ ಸ್ಟಾರ್ ಬಿಚ್ಚಿಟ್ಟ ಸತ್ಯ ವೈರಲ್‌!   title=
Allu Arjun

Allu Arjun Confession About First Girlfriend: ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ 2011 ರಲ್ಲಿ ಸ್ನೇಹಾ ರೆಡ್ಡಿ ಅವರನ್ನು ಮದುವೆಯಾದರು. ಮದುವೆಯ ಬಳಿಕ ಇಬ್ಬರು ಮಕ್ಕಳಿದ್ದಾರೆ. ಸ್ನೇಹಾ ಅವರನ್ನು ಮದುವೆಯಾಗುವ ಮೊದಲು ಅಲ್ಲು ಅರ್ಜುನ್‌ ಯಾರೊಂದಿಗಾದರೂ ಡೇಟಿಂಗ್ ಮಾಡಿದ್ದರಾ ಎಂಬ ಕುತೂಹಲ ಅನೇಕರಲ್ಲಿ ಇತ್ತು. ಇಂಡಿಯನ್ ಐಡಲ್ ತೆಲುಗು ಸೀಸನ್ 2 ಅಂತಿಮ ಸಂಚಿಕೆಯಲ್ಲಿ ನಟ ಅಲ್ಲು ಅರ್ಜುನ್‌ ಆಶ್ಚರ್ಯಕರ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಅಂತಿಮ ಸಂಚಿಕೆಯಿಂದ ಹಂಚಿಕೊಂಡ ವಿಡಿಯೋದಲ್ಲಿ, ಅಲ್ಲು ಅರ್ಜುನ್ ತನ್ನ ಮೊದಲ ಗೆಳತಿಯ ಬಗ್ಗೆ ಆಸಕ್ತಿದಾಯಕ ವಿವರವನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ ಕಾರ್ಯಕ್ರಮದ ವಿಡಿಯೋದಲ್ಲಿ, ಅಲ್ಲು ಅರ್ಜುನ್ ನ್ಯೂಜೆರ್ಸಿಯ ಶ್ರುತಿ ನಂದೂರಿ ಎಂಬ ಸ್ಪರ್ಧಿಯ ಅಭಿನಯವನ್ನು ಆನಂದಿಸುತ್ತಿದ್ದಾರೆ. ಪ್ರದರ್ಶನವು ಮುಗಿದ ನಂತರ, ಅಲ್ಲು ಅರ್ಜುನ್ ಅವರು ಅವರ ಅಭಿನಯವನ್ನು ಇಷ್ಟಪಟ್ಟಿರುವ  ಬಗ್ಗೆ ಹೇಳುತ್ತಾರೆ. ಆದರೆ ಅವರ ಹೆಸರು ಕೆಲವು ನೆನಪುಗಳನ್ನು ಮರಳಿ ತಂದಿತು. ಅದರ ಬಗ್ಗೆ ಮಾತನಾಡುವ ಅಲ್ಲು ಅರ್ಜುನ್, ಸ್ಪರ್ಧಿಯ ಹೆಸರು ಮತ್ತು ತನ್ನ ಮೊದಲ ಗರ್ಲ್‌ ಫ್ರೆಂಡ್‌ ಹೆಸರು ಎರಡೂ ಒಂದೇ ಆಗಿದೆ ಎಂದು ಹೇಳುತ್ತಾರೆ. "ನಾನು ನಿಮ್ಮ ಹೆಸರನ್ನು ಇಷ್ಟಪಡುತ್ತೇನೆ. ಏಕೆಂದರೆ ಅದು ನನ್ನ ಮೊದಲ ಗರ್ಲ್‌ ಫ್ರೆಂಡ್‌ ಹೆಸರಾಗಿದೆ" ಎಂದು ಅವರು ಹೇಳಿದರು. 

ಇದನ್ನೂ ಓದಿ: ʼಪೊನ್ನಿಯ ಸೆಲ್ವನ್ʼ ಸುಂದರಿಗೆ 31ರ ಹುಟ್ಟುಹಬ್ಬ..! ಶೋಭಿತಾ ಟಾಪ್‌ ಹಾಟ್‌ ಫೋಟೋಸ್‌ ಇಲ್ಲಿವೆ

ತೆಲುಗು ಇಂಡಿಯನ್ ಐಡಲ್ 2 ರ ಸಂಪೂರ್ಣ ಅಂತಿಮ ಸಂಚಿಕೆಯು ಜೂನ್ 2 ಮತ್ತು ಜೂನ್ 3 ರಂದು ಪ್ರಸಾರವಾಗಲಿದೆ. ಶ್ರುತಿ ಹೊರತುಪಡಿಸಿ, ಅಂತಿಮ ಸ್ಪರ್ಧಿಗಳಲ್ಲಿ ಹೈದರಾಬಾದ್‌ನ ಜಯರಾಮ್ ಮತ್ತು ಸಿದ್ದಿಪೇಟ್‌ನ ಲಾಸ್ಯ ಪ್ರಿಯಾ, ಹೈದರಾಬಾದ್‌ನ ಕಾರ್ತಿಕೇಯ ಮತ್ತು ವಿಶಾಕಪಟ್ಟಣಂನಿಂದ ಸೌಜನ್ಯ ಕೂಡ ಇದ್ದಾರೆ. ರಿಯಾಲಿಟಿ ಶೋಗೆ ಸಂಗೀತ ನಿರ್ದೇಶಕ ಎಸ್‌ಎಸ್ ಥಮ್ನ್, ಗಾಯಕರಾದ ಕಾರ್ತಿಕ್, ಗೀತಾ ಮಾಧುರಿ ಮತ್ತು ಹೇಮಚಂದ್ರ ತೀರ್ಪುಗಾರರಾಗಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by ahavideoin (@ahavideoin)

 

ಅಲ್ಲು ಅರ್ಜುನ್ ಪುಷ್ಪ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಬಹು ನಿರೀಕ್ಷಿತ ಸೀಕ್ವೆಲ್‌ಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಮತ್ತು ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಮತ್ತೆ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಕೂಡ ನಟಿಸುತ್ತಿದ್ದು, ಸಾಯಿ ಪಲ್ಲವಿ ಕೂಡ ಇರಲಿದ್ದಾರೆ ಎಂಬ ವದಂತಿ ಹಬ್ಬಿದೆ. ಚಿತ್ರವು ಈ ವರ್ಷ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಈ ಚಿತ್ರವು 2024 ರ ಬಿಡುಗಡೆ ಆಗಬಹುದು ಎಂದು ವರದಿಯಾಗಿದೆ. 

ಇದನ್ನೂ ಓದಿ: Ranveer Singh Hollywood: ಹಾಲಿವುಡ್‌ಗೆ ರಣವೀರ್‌ ಸಿಂಗ್‌ ಎಂಟ್ರಿ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News