WATCH : ಲೆಹೆಂಗಾ ತೊಟ್ಟು ಬುಲೆಟ್‌ ಮೇಲೆ ಸ್ಟಂಟ್.. ನಿಬ್ಬೆರಗಾಗಿಸುವ ವಿಡಿಯೋ ವೈರಲ್‌

Bullet Stunt Video: ಈ ಇಬ್ಬರು ಮಹಿಳೆಯರು ಲೆಹೆಂಗಾ ತೊಟ್ಟು ರಸ್ತೆಯ ಮೇಲೆ ಬುಲೆಟ್‌ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ತಕ್ಷಣ ಸಂಚಲನ ಮೂಡಿಸಿದೆ. ಜನರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಅನೇಕರು ಶೇರ್‌ ಮಾಡುತ್ತಿದ್ದಾರೆ. 

Written by - Chetana Devarmani | Last Updated : Nov 26, 2022, 03:30 PM IST
  • ಲೆಹೆಂಗಾ ತೊಟ್ಟು ಬುಲೆಟ್‌ ಮೇಲೆ ಸ್ಟಂಟ್
  • ನೋಡುಗರನ್ನು ನಿಬ್ಬೆರಗಾಗಿಸುವ ವಿಡಿಯೋ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
WATCH : ಲೆಹೆಂಗಾ ತೊಟ್ಟು ಬುಲೆಟ್‌ ಮೇಲೆ ಸ್ಟಂಟ್.. ನಿಬ್ಬೆರಗಾಗಿಸುವ ವಿಡಿಯೋ ವೈರಲ್‌ title=
ಲೆಹೆಂಗಾ ತೊಟ್ಟು ಬುಲೆಟ್‌ ಮೇಲೆ ಸ್ಟಂಟ್

Desi Woman Riding Bullet: ಬೈಕ್‌ ಮೇಲೆ ಸ್ಟಂಟ್‌ ಮಾಡುವ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತವೆ. ಆದರೆ ಇತ್ತೀಚೆಗೆ ವೈರಲ್‌ ಆದ ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ ಮಹಿಳೆಯೊಬ್ಬರು ಲೆಹೆಂಗಾ ತೊಟ್ಟು ಬುಲೆಟ್ ಬೈಕ್‌ ಅನ್ನು ರಸ್ತೆಯಲ್ಲಿ ಓಡಿಸುತ್ತಿರುವ ದೃಶ್ಯ ವೈರಲ್‌ ಆಗಿದೆ. ಆ ಮಹಿಳೆಯ ಹಿಂದೆ ಇನ್ನೊಬ್ಬ ಮಹಿಳೆ ಕೂಡ ಕುಳಿತಿದ್ದಾರೆ. ಈ ಬುಲೆಟ್‌ ಸಾಗುವ ವೇಗ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ : Amazing offer! ₹14,999 ಬೆಲೆಯ ಸ್ಮಾರ್ಟ್‌ಫೋನ್‌ ಕೇವಲ ₹549 ಗೆ ಲಭ್ಯ

ಈ ವಿಡಿಯೋವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ಲೆಹೆಂಗಾ ಧರಿಸಿದ ದೇಸಿ ಶೈಲಿಯ ಮಹಿಳೆ ಈ ಬುಲೆಟ್ ಓಡಿಸುತ್ತಿರುವುದು ಕಂಡು ಬಂದಿದೆ. ಈ ಮಹಿಳೆಯ ಹಣೆಯ ಮೇಲೆ ಸಿಂಧೂರವಿದೆ. ತಲೆಯ ಮೇಲೆ ಓಡನಿ ಹೊದ್ದಿದ್ದಾರೆ. ಉತ್ಸಾಹಭರಿತ ನಗುವಿನೊಂದಿಗೆ ಫುಲ್‌ ಜೋಶ್‌ನಿಂದ ಈ ಬುಲೆಟ್‌ ಬೈಕ್‌ ಓಡಿಸುವ ದೃಶ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. ಹಿಂದೆ ಕುಳಿತ ಮಹಿಳೆ ಕೂಡ ಹೀಗೆಯೇ ಕಾಣುತ್ತಿದ್ದಾರೆ. ಅವರು ಕೂಡ ತುಂಬಾ ಸಂತೋಷವಾಗಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by sonaomi gurjar (@sona_omi)

 

ಈ ವಿಡಿಯೋದ ವಿಶೇಷವೆಂದರೆ ಮಹಿಳೆ ಈ ಬುಲೆಟ್ ಓಡಿಸುವ ರೀತಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅವರ ಆತ್ಮವಿಶ್ವಾಸ ಅಗಾಧವಾಗಿದೆ. ಈ ಶೈಲಿಯಲ್ಲಿ ಬುಲೆಟ್ ಓಡಿಸುತ್ತಿರುವುದನ್ನು ಕಂಡು ನೋಡುಗರು ಬೆಚ್ಚಿಬಿದ್ದರು. ಮಹಿಳೆಯ ಆತ್ಮವಿಶ್ವಾಸ ಹಾಗೂ ಬುಲೆಟ್‌ ವೇಗ ಕಂಡು ನೋಡುಗರು ಅಚ್ಚರಿಗೊಂಡಿದ್ದಾರೆ. 

ಇದನ್ನೂ ಓದಿ :  Video Viral : ಆಂಜನೇಯ ಸ್ತೋತ್ರ ಹೇಳುವ ಈ ಪುಟ್ಟ ಹುಡುಗಿ.. ಕೇಳಿದವರು ಭಕ್ತಿ ಪರವಶರಾಗೋದು ಗ್ಯಾರೆಂಟಿ!

ಅದೇ ಸಮಯದಲ್ಲಿ ಈ ಬುಲೆಟ್ ಚಾಲನೆಯ ವಿಡಿಯೋವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ನೋಡಿದರೆ ಈ ಮಹಿಳೆ ಬುಲೆಟ್ ಓಡಿಸುತ್ತಿದ್ದ ಸಮಯದಲ್ಲೇ ಈ ವಿಡಿಯೋ ಮಾಡಲಾಗಿದ್ದು, ವಿಡಿಯೋ ಮಾಡುತ್ತಿರುವ ವ್ಯಕ್ತಿ ಕೂಡ ಬೈಕ್ ನಲ್ಲಿ ಹೋಗುತ್ತಿದ್ದಂತೆ ತೋರುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಜನ ಅದನ್ನು ಶೇರ್ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News