Viral Video: ರಭಸವಾಗಿ ಬರುತ್ತಿದ್ದ ಲಾರಿಗೆ ಗುದ್ದಿದ ಘೇಂಡಾಮೃಗ... ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ

Rhino Hits Truck Video: ಈ ಘಟನೆಯ ವಿಡಿಯೋವನ್ನು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮಾ ಅವರು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.  

Written by - Nitin Tabib | Last Updated : Oct 9, 2022, 04:52 PM IST
  • ಹತ್ತು ಸೆಕೆಂಡುಗಳ ಕ್ಲಿಪ್‌ನಲ್ಲಿ, ಘೇಂಡಾಮೃಗವು ಕಾಡು ಪ್ರದೇಶದಿಂದ ಹೊರಬಂದು
  • ರಸ್ತೆಯ ಮೇಲೆ ವೇಗವಾಗಿ ಬರುವ ಲಾರಿವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ನೀವು ನೋಡಬಹುದಾಗಿದೆ.
  • ಡಿಕ್ಕಿ ಹೊಡೆದ ನಂತರ, ಘೇಂಡಾಮೃಗವು ಕೆಳಕ್ಕೆ ಬೀಳುತ್ತದೆ.
Viral Video: ರಭಸವಾಗಿ ಬರುತ್ತಿದ್ದ ಲಾರಿಗೆ ಗುದ್ದಿದ ಘೇಂಡಾಮೃಗ... ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ title=
Rhino Hitting Truck Video

Trending Video: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಧುಬ್ರಿ ಜಿಲ್ಲೆಯ ಹಲ್ದಿಬರಿಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್‌ಗೆ ಘೇಂಡಾಮೃಗವೊಂದು ಡಿಕ್ಕಿ ಹೊಡೆಯುವ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋವನ್ನು ಹಂಚಿಕೊಂಡ ಮುಖ್ಯಮಂತ್ರಿಗಳು "ಘೇಂಡಾಮೃಗಗಳು ನಮ್ಮ ವಿಶೇಷ ಸ್ನೇಹಿತರು; ಅವುಗಳ ಜಾಗದಲ್ಲಿ ನಾವು ಯಾವುದೇ  ಉಲ್ಲಂಘನೆಯನ್ನು ಅನುಮತಿಸುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. "ಹಲ್ದಿಬರಿಯಲ್ಲಿ ನಡೆದ ಈ ದುರದೃಷ್ಟಕರ ಘಟನೆಯಲ್ಲಿ ಘೇಂಡಾಮೃಗ ಬದುಕುಳಿದಿದೆ; ವಾಹನವನ್ನು ತಡೆಹಿಡಿಯಲಾಗಿದೆ ಮತ್ತು ದಂಡ ವಿಧಿಸಲಾಗಿದೆ. ಈ ಮಧ್ಯೆ ಕಾಜಿರಂಗದಲ್ಲಿ ಪ್ರಾಣಿಗಳನ್ನು ಉಳಿಸುವ ನಮ್ಮ ಸಂಕಲ್ಪದಲ್ಲಿ ನಾವು ವಿಶೇಷ 32-ಕಿಮೀ ಎಲಿವೇಟೆಡ್ ಕಾರಿಡಾರ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.

ಹತ್ತು ಸೆಕೆಂಡುಗಳ ಕ್ಲಿಪ್‌ನಲ್ಲಿ, ಘೇಂಡಾಮೃಗವು ಕಾಡು ಪ್ರದೇಶದಿಂದ ಹೊರಬಂದು ರಸ್ತೆಯ ಮೇಲೆ ವೇಗವಾಗಿ ಬರುವ ಲಾರಿವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ನೀವು ನೋಡಬಹುದಾಗಿದೆ. ಡಿಕ್ಕಿ ಹೊಡೆದ ನಂತರ, ಘೇಂಡಾಮೃಗವು ಕೆಳಕ್ಕೆ ಬೀಳುತ್ತದೆ. ನಂತರ ಎದ್ದು ಓಡುವಷ್ಟರಲ್ಲಿ ಮತ್ತೆ ಬೀಳುತ್ತದೆ ಹಾಗೂ ಪುನಃ ಎದ್ದು ಕಾಡಿನೊಳಗೆ ಓಡಿಹೋಗುತ್ತದೆ.

ಶ್ರೀ ಸರ್ಮಾ ಅವರ ಈ ವಿಡಿಯೋ ಟ್ವೀಟ್ ಗೆ ಟ್ವಿಟರ್‌ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ನೋಡಿ- ದೀಪಾವಳಿಗೆ ಬಂಪರ್ ಆಫರ್: ಈ ರಾಜ್ಯದಲ್ಲಿ ದಿನದ 24 ಗಂಟೆ ತೆರೆದಿರಲಿವೆ ರೆಸ್ಟೋರೆಂಟ್ ಗಳು

ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ "ಚಾಲಕನು ಅಲ್ಲಿ ಏನು ಮಾಡಬೇಕಾಗಿತ್ತು? ಇಂತಹ ಸಣ್ಣ ಸೂಚನೆಯಲ್ಲಿ ಅವನು ತನ್ನ ವಾಹನವನ್ನು ಚೆನ್ನಾಗಿ ತಿರುಗಿಸಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ಮುಂದುವರೆದು ಬರೆದುಕೊಂಡಿರುವ ಮೊತ್ತೊರ್ವ ಟ್ವಿಟ್ಟರ್ಥಿ, "32 ಕಿಮೀ ಕಾರಿಡಾರ್, ನಿರ್ಮಾಣದ ಸಮಯದಲ್ಲಿ, ನಿಜವಾಗಿಯೂ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಮತ್ತು ಮರಗಳ ನಾಶಕ್ಕೆ ಕಾರಣವಾಗಬಹುದು ಎಂದು ಯಾರೂ ಊಹಿಸಲಿಲ್ಲ, ಇದಕ್ಕೆ ಬದಲಾಗಿ ನುಮಲಿಗಢ ಬಳಿ ಇರುವ ಬ್ರಹ್ಮಪುತ್ರ ನದಿಗೆ ನಿರ್ಮಿಸಲಾಗಿರುವ ಸೇತುವೆ ಪೂರ್ಣಗೊಂಡರೆ, ಎಲ್ಲಾ ಭಾರೀ ವಾಹನಗಳನ್ನು ಉತ್ತರ ದಂಡೆಯ ಮೂಲಕ ಚಲಿಸುವಂತೆ ಮಾಡಬೇಕು. ಸದ್ಯಕ್ಕೆ, ಕಟ್ಟುನಿಟ್ಟಾಗಿ ವೇಗಮಿತಿ ನಿಯಮಗಳನ್ನು ಜಾರಿಗೊಳಿಸಬೇಕು" ಎಂದಿದ್ದಾರೆ

ಇದನ್ನೂ ಓದಿ-"ಕಾಂಡೋಮ್ ಗಳನ್ನು ಹೆಚ್ಚು ಬಳಸುತ್ತಿರುವುದು ಮುಸ್ಲಿಮರೇ"

ಪ್ರಸ್ತುತ ಅಸ್ಸಾಂನ ಭೇಟಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಅತಿಕ್ರಮಣ ಮತ್ತು ಘೇಂಡಾಮೃಗಗಳ ಬೇಟೆಯಿಂದ ಮುಕ್ತಗೊಳಿಸಿದ್ದಕ್ಕಾಗಿ, ಬೋಡೋಲ್ಯಾಂಡ್ ಪ್ರದೇಶದ ಮೂಲಕ ಹಸುಗಳ ಕಳ್ಳಸಾಗಣೆಯನ್ನು ತಡೆದಿದ್ದಕ್ಕಾಗಿ ಮತ್ತು ಅಕ್ರಮ ಅಡಿಕೆ ವ್ಯಾಪಾರವನ್ನು ನಿಲ್ಲಿಸಿದ್ದಾಕಾಗಿ  ಅಸ್ಸಾಂ ಸರ್ಕಾರವನ್ನು ಶ್ಲಾಘಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News