ಮುಸ್ಲಿಂ ಯುವಕನ ಮೇಲೆ ದೈವದ ಆವಾಹನೆ! 18 ವರ್ಷಗಳ ಬಳಿಕ ನಡೆದ ದೈವಿಕ ಪವಾಡ

Daiva invocation on the Muslim youth: ಸುಮಾರು 30 ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಭೂಸ್ವಾಧೀನ ಮಾಡಿಕೊಂಡು ಉದ್ಯಮ ಆರಂಭಿಸಿತ್ತು.

Written by - Bhavishya Shetty | Last Updated : Oct 2, 2023, 04:09 PM IST
    • ದೈವಗಳಿಗೆ ಸಂಬಂಧಿಸಿದ ಅಚ್ಚರಿಯ ಘಟನೆಯೊಂದು ತುಳುನಾಡಿನಲ್ಲಿ ಮುನ್ನೆಲೆಗೆ ಬಂದಿದೆ
    • 18 ವರ್ಷದ ಮುಸ್ಲಿಂ ಯುವಕನ ಮೈ ಮೇಲೆ ದೈವದ ಆವಾಹನೆ
    • ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಘಟನೆ
ಮುಸ್ಲಿಂ ಯುವಕನ ಮೇಲೆ ದೈವದ ಆವಾಹನೆ! 18 ವರ್ಷಗಳ ಬಳಿಕ ನಡೆದ ದೈವಿಕ ಪವಾಡ title=
Daiva invocation on the Muslim youth

Daiva invocation on the Muslim youth: ಕರಾವಳಿ ಜಿಲ್ಲೆ ಅಥವಾ ತುಳುನಾಡಿನಲ್ಲಿ ದೇವರ ಜೊತೆಗೆ ದೈವಗಳನ್ನು ಪೂಜಿಸುವುದು, ನಂಬುವುದು ವಿಶೇಷ ಸಂಗತಿ. ದೇವರಂತೆ ದೈವಗಳಿಗೂ ವಿಶೇಷ ರೀತಿಯಲ್ಲಿ ಆರಾಧನೆ ಕೈಗೊಳ್ಳುವುದು ಇಲ್ಲಿನ ಜನರ ಸಂಸ್ಕೃತಿ. ಇನ್ನು ಕಾಂತಾರ ಸಿನಿಮಾ ತೆರೆಗೆ ಬಂದ ತುಳುನಾಡು ಮಾತ್ರವಲ್ಲದೆ, ಇತರ ಊರುಗಳ ಜನರೂ ಕಷ್ಟ ಕಾರ್ಪಣ್ಯ ದೂರ ಮಾಡಲು ದೈವದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಕೊನೆಗೂ ಅಭಿಮಾನಿಗಳ ಆಸೆ ಪೂರೈಸಿದ ಅಡೀಡಸ್! ಟೀಂ ಇಂಡಿಯಾ ವಿಶ್ವಕಪ್ ಜೆರ್ಸಿಯಲ್ಲಿ ಈ ಬದಲಾವಣೆ

ಇದೀಗ ದೈವಗಳಿಗೆ ಸಂಬಂಧಿಸಿದ ಅಚ್ಚರಿಯ ಘಟನೆಯೊಂದು ತುಳುನಾಡಿನಲ್ಲಿ ಮುನ್ನೆಲೆಗೆ ಬಂದಿದೆ. ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ 18 ವರ್ಷದ ಮುಸ್ಲಿಂ ಯುವಕನ ಮೈ ಮೇಲೆ ದೈವದ ಆವಾಹನೆಯಾಗಿದೆ.  

ಸುಮಾರು 30 ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಭೂಸ್ವಾಧೀನ ಮಾಡಿಕೊಂಡು ಉದ್ಯಮ ಆರಂಭಿಸಿತ್ತು. ಆದರೆ ಆ ಜಾಗದಲ್ಲಿದ್ದ ಪಿಲಿಚಾಮುಂಡಿ ದೈವದ ಗಡುವಾಡು ಸ್ಥಳ ಕಂಪನಿಯ ಪಾಲಾಗಿತ್ತು. ಈ ಬಳಿಕ ಅಲ್ಲಿನ ಭಕ್ತರು ದೈವವನ್ನು ಪೆರ್ಮುದೆಯ ಸೋಮನಾಥಧಾಮಕ್ಕೆ ಪೂಜಾ ಕ್ರಮಗಳನ್ನು ನೆರವೇರಿಸಿ ಸ್ಥಳಾಂತರ ಮಾಡಿದ್ದರು ಎನ್ನಲಾಗಿದೆ.

ಇನ್ನು ಸ್ಥಳಾಂತರದ ಬಳಿಕ ಗಡುವಾಡು ಸ್ಥಳದಲ್ಲಿ ಸುಮಾರು 18 ವರ್ಷಗಳಿಂದ ಆರಾಧನೆ ನಿಂತಿತ್ತು. ಇದಾದ ಬಳಿಕ ಕಂಪನಿ ಮಾತ್ರವಲ್ಲದೆ, ಅಲ್ಲಿನ ಗ್ರಾಮಸ್ಥರಿಗೂ ಅನೇಕ ಸಂಕಷ್ಟಗಳು ಎದುರಾಗಿದ್ದವು. ತ್ರಿಕಾಲ ಪೂಜಾ ಕೈಂಕರ್ಯ ನಡೆಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಈ ನಡುವೆ 2 ತಿಂಗಳ‌ ಹಿಂದೆ ದೈವಸ್ಥಾನದ ಆವರಣ ಗೋಡೆ ನಿರ್ಮಾಣದ ವೇಳೆ ಅಲ್ಲಿದ್ದ ಒಡಿಶಾ ಮೂಲದ ಮುಸ್ಲಿಂ ಯುವಕನ ಮೈ ಮೇಲೆ ದೈವ ಆವಾಹನೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 20 ತಿಂಗಳ ಬಳಿಕ ತಂಡಕ್ಕೆ ಮರಳಿದ ಸ್ಟಾರ್ ಸ್ಪಿನ್ನರ್ ಬಗ್ಗೆ ಮಾಜಿ ಕ್ರಿಕೆಟರ್ ಕಮೆಂಟ್!

ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಊರಿನವರು ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಇಟ್ಟಿದ್ದರು. ಈ ಸಂದರ್ಭದಲ್ಲಿ ಗಡುವಾಡು ಸ್ಥಳದಲ್ಲಿ ದೈವಕ್ಕೆ ನೇಮೋತ್ಸವ ಮಾಡಬೇಕು ಎಂದ ಸೂಚನೆಯನ್ನು ಕೊಡಲಾಯಿತು. ಇದೀಗ ಈ ಸೂಚನೆಯ ಮೇರೆಗೆ 18 ವರ್ಷದ ಬಳಿಕ ಪಿಲಿಚಾಮುಂಡಿ ದೈವಕ್ಕೆ ಅದೇ ಜಾಗದಲ್ಲಿ ನೇಮೋತ್ಸವ ನಡೆಸಲು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News