Viral News: ಭಾರತದಲ್ಲಿದೆ ಬಾವಲಿಗಳನ್ನು ಪೂಜಿಸುವ ವಿಲಕ್ಷಣ ಗ್ರಾಮ..!

Weird Village In India: ಸರ್ಸಾಯಿ ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸರೋವರದ ಬಳಿ ಇರುವ ಅರಳಿ ಮರ ಸೇರಿದಂತೆ ವಿವಿಧ ಮರಗಳಲ್ಲಿ ಈ ಬಾವಲಿಗಳು ವಾಸಿಸುತ್ತವೆ. ಈ ಬಾವಲಿಗಳನ್ನು ನೋಡಲು ಸದಾ ಪ್ರವಾಸಿಗರ ದಂಡೇ ಇರುತ್ತದೆ. ಜನರು ಈ ಬಾವಲಿಗಳನ್ನು ಸಂಪತ್ತು ಮತ್ತು ಅದೃಷ್ಟದ ಹಿಂದೂ ದೇವತೆಯಾದ ಲಕ್ಷ್ಮಿದೇವಿಗೆ ಹೋಲಿಸುತ್ತಾರೆ.

Written by - Puttaraj K Alur | Last Updated : Jan 10, 2024, 06:39 PM IST
  • ಭಾರತದಲ್ಲಿದೆ ಬಾವಲಿಗಳನ್ನು ಭಕ್ತಿಯಿಂದ ಪೂಜಿಸುವ ಒಂದು ವಿಲಕ್ಷಣ ಹಳ್ಳಿ
  • ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ಸರ್ಸಾಯಿ ಗ್ರಾಮದಲ್ಲಿವೆ ಬಾವಲಿಗಳು
  • ಲಕ್ಷ್ಮಿದೇವಿಯ ಪ್ರತಿರೂಪದಂತಿರುವ ಬಾವಲಿ ನೋಡಲು ಬರುತ್ತಾರೆ ಪ್ರವಾಸಿಗರು
Viral News: ಭಾರತದಲ್ಲಿದೆ ಬಾವಲಿಗಳನ್ನು ಪೂಜಿಸುವ ವಿಲಕ್ಷಣ ಗ್ರಾಮ..!   title=
ಬಾವಲಿಗಳನ್ನು ಪೂಜಿಸುವ ವಿಲಕ್ಷಣ ಹಳ್ಳಿ!

ನವದೆಹಲಿ: ಮರಗಳಲ್ಲಿ ಬಾವಲಿಗಳು ತಲೆಕೆಳಗಾಗಿ ನೇತಾಡುವುದನ್ನು ನೀವು ನಿಸ್ಸಂಶಯವಾಗಿ ನೋಡಿರುತ್ತೀರಿ. ಈ ಬಾವಲಿಗಳನ್ನು ಪೂಜಿಸಲಾಗುತ್ತದೆ ಎಂದು ನಾವು ಹೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಹೌದು, ಬಾವಲಿಗಳನ್ನು ಪೂಜಿಸುವ ಭಾರತದ ಒಂದು ವಿಲಕ್ಷಣ ಹಳ್ಳಿಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.  

ಭಾರತದಲ್ಲಿ ಒಂದು ವಿಶೇಷ ಗ್ರಾಮವಿದೆ, ಅಲ್ಲಿ ಜನರು ಬಾವಲಿಗಳನ್ನು ಪೂಜಿಸುವುದು ಮಾತ್ರವಲ್ಲದೆ ಅವುಗಳು ತಮ್ಮನ್ನು ರಕ್ಷಿಸುತ್ತವೆಂದು ನಂಬಿದ್ದಾರೆ. ನಾವು ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ಸರ್ಸಾಯಿ ಗ್ರಾಮದ ಬಗ್ಗೆ ಮಾತನಾಡುತ್ತಿದ್ದೇವೆ. ಬಾವಲಿಗಳು ವಾಸಿಸುವ ಕಡೆ ಹಣದ ಕೊರತೆ ಇರುವುದಿಲ್ಲವೆಂದು ಸರ್ಸಾರಿ ಗ್ರಾಮದ ಜನರ ಅಭಿಪ್ರಾಯ. ಆದರೆ ಈ ಸರ್ಸಾಯಿ ಗ್ರಾಮಕ್ಕೆ ಬಾವಲಿಗಳು ಎಲ್ಲಿಂದ ಬಂದವು ಎಂಬುದು ಇನ್ನೂ ತಿಳಿದಿಲ್ಲ.

ಇದನ್ನೂ ಓದಿ: Ayodhya Ram Mandir: ಪ್ರಾಣಪ್ರತಿಷ್ಠಾಪನೆಗೆ ಶ್ರೀರಾಮನ ಹೆಸರಲ್ಲಿ ಟೋಪಿ ತಯಾರಿಸುತ್ತಿರುವ ಮುಸ್ಲಿಂ ಕುಟುಂಬ!

ಈ ಬಾವಲಿಗಳನ್ನು ನೋಡಲು ಸದಾ ಪ್ರವಾಸಿಗರ ದಂಡೇ ಇರುತ್ತದೆ. ಜನರು ಈ ಬಾವಲಿಗಳನ್ನು ಸಂಪತ್ತು ಮತ್ತು ಅದೃಷ್ಟದ ಹಿಂದೂ ದೇವತೆಯಾದ ಲಕ್ಷ್ಮಿದೇವಿಗೆ ಹೋಲಿಸುತ್ತಾರೆ. ಸರ್ಸಾಯಿ ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸರೋವರದ ಬಳಿ ಇರುವ ಅರಳಿ ಮರ ಸೇರಿದಂತೆ ವಿವಿಧ ಮರಗಳಲ್ಲಿ ಈ ಬಾವಲಿಗಳು ವಾಸಿಸುತ್ತವೆ. ಈ ಸರೋವರವನ್ನು 1402(BC)ರಲ್ಲಿ "ತಿರ್ಹತ್" ರಾಜ ಶಿವ ಸಿಂಗ್ ನಿರ್ಮಿಸಿದನೆಂದು ಹೇಳಲಾಗಿದೆ. ಈ ಸರೋವರದ ಪಕ್ಕದಲ್ಲಿರುವ 50 ಎಕರೆ ಪ್ರದೇಶವು ಹಲವಾರು ದೇವಾಲಯಗಳನ್ನು ಹೊಂದಿದೆ.

ಗ್ರಾಮಸ್ಥರ ಪ್ರಕಾರ, ರಾತ್ರಿ ವೇಳೆ ಗ್ರಾಮದ ಹೊರಗಿನವರು ಯಾರಾದರೂ ಕೆರೆಯ ಬಳಿ ಹೋದರೆ ಬಾವಲಿಗಳು ಕಿರುಚಲು ಪ್ರಾರಂಭಿಸುತ್ತವೆ. ಆದರೆ ಅವರು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲವಂತೆ. ಇಲ್ಲಿ ಬಾವಲಿಗಳಿಲ್ಲದೆ ಯಾವುದೇ ಧಾರ್ಮಿಕ ಸಮಾರಂಭ ಅಪೂರ್ಣವಂತೆ. ಇದು ಇಲ್ಲಿನ ಬಾವಲಿಗಳಿಗೆ ನೀಡುವ ಗೌರವವಂತೆ. ಗ್ರಾಮದಲ್ಲಿರುವ ಹಲಸಿನ ಮರಗಳನ್ನೇ ಮನೆ ಮಾಡಿಕೊಂಡಿರುವ ಈ ಬಾವಲಿಗಳ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆಯಾಗಿದೆ.

ಇದನ್ನೂ ಓದಿ: ಲಕ್ಷದ್ವೀಪ ಮಾತ್ರವಲ್ಲ… ಮಾಲ್ಡೀವ್ಸ್’ಗೆ ಸೆಡ್ಡು ಹೊಡೆಯುತ್ತೆ ಭಾರತದ ಈ 5 ಬೀಚ್’ಗಳು

ಹಳ್ಳಿಗರು ಈ ಬಾವಲಿಗಳನ್ನು ಪೂಜಿಸುವುದರ ಜೊತೆಗೆ ರಕ್ಷಿಸುತ್ತಾರೆ. ಈ ಬಾವಲಿಗಳಿಗೆ ಸಾಂಪ್ರದಾಯಿಕ ನೈವೇದ್ಯವಿಲ್ಲದೆ ಯಾವುದೇ ಮಂಗಳಕರ ಕಾರ್ಯಕ್ರಮ ಅಪೂರ್ಣವಂತೆ. ಮಧ್ಯಕಾಲೀನ ಕಾಲದಲ್ಲಿ ವೈಶಾಲಿಗೆ ದೊಡ್ಡ ಸಾಂಕ್ರಾಮಿಕ ರೋಗವು ಅಪ್ಪಳಿಸಿತು, ಅದರಲ್ಲಿ ಅನೇಕರು ಪ್ರಾಣ ಕಳೆದುಕೊಂಡರು ಎಂದು ಗ್ರಾಮಸ್ಥರು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಬಾವಲಿಗಳು ಈ ಗ್ರಾಮಕ್ಕೆ ಮೊದಲು ಬಂದಿದ್ದು, ಗ್ರಾಮಸ್ಥರು ಹೇಳುವಂತೆ ಗ್ರಾಮ ಅಂದಿನಿಂದ ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿಲ್ಲವಂತೆ.

ಈ ಬಾವಲಿಗಳು ಮಾನವನ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಬ್ಯಾಕ್ಟೀರಿಯಾವನ್ನು ಕೊಲ್ಲುವ ರಾಸಾಯನಿಕಗಳನ್ನು ಒಳಗೊಂಡಿರುವ ನಿರ್ದಿಷ್ಟ ವಾಸನೆಯನ್ನು ಹೊರಸೂಸುತ್ತವೆ ಎಂದು ಗ್ರಾಮಸ್ಥರು ಹೇಳುವ ಕಥೆಯಲ್ಲಿ ಹುರುಳಿದೆ ಎಂದು ತಜ್ಞರು ನಂಬಿದ್ದಾರೆ. ಈ ಬಾವಲಿಗಳನ್ನು ನೋಡಲು ಗ್ರಾಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಯಾವುದೇ ಕ್ರಮ ಕೈಗೊಳ್ಳದ ಆಡಳಿತ ಮಂಡಳಿಯ ನಡೆಯಿಂದ ಗ್ರಾಮದ ಜನತೆ ನಿರಾಸೆಗೊಂಡಿದ್ದಾರಂತೆ. ಇಲ್ಲಿ ಸಾವಿರಾರು ಬಾವಲಿಗಳಿದ್ದು, ಅವುಗಳನ್ನು ನೋಡಲು ಅಂತಾನೇ ವರ್ಷವಿಡೀ ಲಕ್ಷಾಂತರ ಪ್ರವಾಸಿಗರು ಈ ಗ್ರಾಮಕ್ಕೆ ಆಗಮಿಸುತ್ತಾರಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News