Viral Video : ಪ್ರೇಮಿಯೊಂದಿಗೆ ತೆರಳುತ್ತಿದ್ದ ಪತ್ನಿಯನ್ನು ಬೈಕ್ ನಲ್ಲಿ ಚೇಸ್ ಮಾಡಿದ ಪತಿ ..!

Viral Video : ಸ್ಕೂಟಿಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ನೋಡಿದ ಪತಿ, ಕೂಡಲೇ ಕಾರ್ಯಪ್ರವೃತನಾಗುತ್ತಾನೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಯೋಜನೆಯನ್ನು ಕೂಡಾ ಹಾಕಿಕೊಳ್ಳುತ್ತಾನೆ.  

Written by - Ranjitha R K | Last Updated : Sep 20, 2022, 04:04 PM IST
  • ಪ್ರಿಯಕರನೊಂದಿಗೆ ಇದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ
  • ಬೈಕ್ ನಲ್ಲಿ ಫುಲ್ ಚೇಸಿಂಗ್
  • ವೈರಲ್ ಆಯಿತು ಚೇಸಿಂಗ್ ವಿಡಿಯೋ
Viral Video : ಪ್ರೇಮಿಯೊಂದಿಗೆ ತೆರಳುತ್ತಿದ್ದ ಪತ್ನಿಯನ್ನು ಬೈಕ್ ನಲ್ಲಿ ಚೇಸ್ ಮಾಡಿದ ಪತಿ ..!  title=
Viral Video (photo instagram)

Viral Video : ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾವಾಗ ಯಾವ ವಿಡಿಯೋ ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ದೃಶ್ಯಗಳನ್ನು ಕಣ್ಣ ಮುಂದೆ ಬರುತ್ತಿದ್ದಂತೆಯೇ ನಗು ಬಂದು ಬಿಡುತ್ತದೆ. ಆದರೆ ಈಗ ಹೊರ ಬಿದ್ದಿರುವ ವಿಡಿಯೋ ಎಂಥವರನ್ನು ಕೂಡಾ ಬೆಚ್ಚಿ ಬೀಳಿಸದೆ ಇರದು. ಪ್ರೇಮಿಯೊಂದಿಗೆ ಡೇಟಿಂಗ್‌ಗೆ ಹೋಗುತ್ತಿದ್ದ ಪತ್ನಿಯನ್ನು ಪತ್ನಿಯನ್ನು ಹಿಂಬಾಲಿಸಿ ಹಿಡಿದ ವಿಡಿಯೋ ಇದು.  

ರೆಡ್ ಹ್ಯಾಂಡ್ ಆಗಿ ಪತ್ನಿಯನ್ನು ಪ್ರೇಮಿಯೊಂದಿಗೆ ಹಿಡಿದ ಪತಿ :
ಸ್ಕೂಟಿಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ನೋಡಿದ ಪತಿ, ಕೂಡಲೇ ಕಾರ್ಯಪ್ರವೃತನಾಗುತ್ತಾನೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಯೋಜನೆಯನ್ನು ಕೂಡಾ ಹಾಕಿಕೊಳ್ಳುತ್ತಾನೆ. ಇದಕ್ಕಾಗಿ ಕ್ಯಾಮೆರಾ ಆನ್ ಮಾಡಿ ಕೊಂಡೇ, ಪತ್ನಿ ಮತ್ತು ಆಕೆಯ ಪ್ರಿಯಕರ ಸವಾರಿ ಮಾಡುತ್ತಿದ್ದ ಸ್ಕೂಟಿಯನ್ನು ಚೇಸ್ ಮಾಡುತ್ತಾನೆ. ಮೊದಲು ತನ್ನ ಪತ್ನಿಯನ್ನು ಕರೆದು ಗಾಡಿ ನಿಲ್ಲಿಸುವಂತೆ ಹೇಳುತ್ತಾನೆ. ಆದರೆ ಗಾಬರಿಗೊಂಡ ಪತ್ನಿ ಮತ್ತು ಆಕೆಯ ಪ್ರಿಯಕರ ಸ್ಕೂಟಿಯನ್ನು ಮತ್ತಷ್ಟು ವೇಗವಾಗಿ ಓಡಿಸಿಕೊಂಡು ಹೋಗುತ್ತಾರೆ. 

ಇದನ್ನೂ ಓದಿ : Viral Video: ಸ್ನೇಕ್ ಬೋಟ್ ರೇಸ್‍ನಲ್ಲಿ ರಾಹುಲ್ ಗಾಂಧಿ ಭಾಗಿ

 ಪತಿ ಹೀಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿ ಬಿಡಬಹುದು ಎನ್ನುವ ಯೋಚನೆಯೂ ಅವರಿಗಿರಲಿಲ್ಲ. ಪತಿಯಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಅಂದುಕೊಂಡ ಆ ಪ್ರಿಯಕರ, ರಸ್ತೆ ಮಧ್ಯೆಯೇ ಸ್ಕೂಟಿ ನಿಲ್ಲಿಸಿ ಪರಾರಿಯಾಗಿಬಿಡುತ್ತಾನೆ. ಆ ವ್ಯಕ್ತಿ ಅದ್ಯಾವ ಮಾಯೆಯಲ್ಲಿ ಅಲ್ಲಿಂದ ಕಾಲ್ಕಿಳುತ್ತಾನೆ ಎನ್ನುವುದು ಪತಿಗೆ ಗೊತ್ತೇ ಆಗುವುದಿಲ್ಲ. 

 

 
 
 
 

 
 
 
 
 
 
 
 
 
 
 

A post shared by GiDDa CoMpAnY (@giedde)

 
 ಇದನ್ನೂ ಓದಿ : 
Viral Video: ನಿಜವಾದ ಪ್ರೇಮಕ್ಕೆ ಉದಾಹರಣೆ ಈ ವಿಡಿಯೋ! ರೋಮಿಯೋ ಜೂಲಿಯೆಟ್ ಕಥೆ ಮರೆತೇ ಹೋಗುತ್ತೆ!

ಈ ವಿಡಿಯೋ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಗಿಡ್ಡೆ ಹೆಸರಿನ ಪುಟದಲ್ಲೂ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News