Lion-Rhinoceros Viral Video: ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಖತ್ ವೈರಲ್ ಆಗುತ್ತಲೇ ಇರುತ್ತವೆ. ಅದು ಮುದ್ದಾದ ಬೆಕ್ಕಿನ ವೀಡಿಯೊಗಳಾಗಿರಬಹುದು ಅಥವಾ ವನ್ಯಜೀವಿಗಳ ವಿಸ್ಮಯ-ಸ್ಫೂರ್ತಿದಾಯಕ ವೀಡಿಯೊಗಳಾಗಿರಬಹುದು, ನೋಡಲು ಮಜಾ ಬರುತ್ತದೆ. ಇಂದು ನಾವು ಹೇಳಹೊರಟಿರುವ ವಿಡಿಯೋ ಅಹ್ಲಾದಕರವಾಗಿರುವ ಜೊತೆ ನಿಮಗೆ ಕೊಂಚ ಗೊಂದಲವನ್ನುಂಟು ಮಾಡುವುದು ಸಹಜ.
ಇದನ್ನೂ ಓದಿ: Lion funny video: ಪಂಜರದೊಳಗಿದ್ದರೇನಂತೆ! ಗೇಲಿ ಮಾಡಿದರೆ ಹೀಗೂ ತಿರುಗಿ ಬೀಳುತ್ತದೆ ಕಾಡಿನ ರಾಜ!
ಪ್ರಾಣಿಗಳ ವೀಡಿಯೊಗಳು ನಾವು ಯೋಚಿಸುವುದಕ್ಕಿಂತ ಕೊಂಚ ವಿಭಿನ್ನವಾಗಿಯೇ ಇರುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅಂತಹ ಒಂದು ವೀಡಿಯೊದಲ್ಲಿ ಕಾಡಿನ ರಾಜ ಸಿಂಹವನ್ನು ಘೇಂಡಾಮೃಗಗಳು ಅಟ್ಟಾಡಿಸಿಕೊಂಡು ಬರುತ್ತಿರುವುದನ್ನು ಕಾಣಬಹುದು.
"ಹಾಗಾದರೆ ಘೇಂಡಾಮೃಗ ಕಾಡಿನ ರಾಜನೇ?!" ಎಂಬ ಶೀರ್ಷಿಕೆ ನೀಡಿರುವ ವಿಡಿಯೋ ಮೈಕ್ರೋಬ್ಲಾಗಿಂಗ್ ಪ್ಲಾಟ್’ಫಾರ್ಮ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಎರಡು ಘೇಂಡಾಮೃಗಗಳು ಕಾಡಿನಲ್ಲಿ ಸಿಂಹವನ್ನು ಅಡ್ಡಹಾಕಿರುವುದು ಕಾಣಬಹುದು.
ಈ ವಿಡಿಯೋ ಶೇರ್ ಮಾಡಿದ ಕೆಲವು ಗಂಟೆಗಳಲ್ಲಿ 91,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. 1,700 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ನೂರಾರು ಮಂದಿ ರಿಟ್ವೀಟ್ ಮಾಡಿದ್ದಾರೆ.
Then the rhino is the king of the forest!pic.twitter.com/EgE0NlpkGK
— The Figen (@TheFigen_) April 5, 2023
ಇದನ್ನೂ ಓದಿ: Good Signs: ಈ ಶುಭ ಸಂಕೇತಗಳು ಶನಿದೇವನ ಕೃಪೆಯಿದೆ ಎಂಬುದರ ಸೂಚಕ: ದಿಢೀರ್ ಧನಪ್ರಾಪ್ತಿಗೈಯುವನು ಛಾಯಾಪುತ್ರ!
ಈ ವಿಡಿಯೋಗೆ ಚಿತ್ರ ವಿಚಿತ್ರ ಕಮೆಂಟ್’ಗಳು ಕೂಡ ಬಂದಿವೆ. ಒಬ್ಬರು “ಹಿರಿಯತೆಯನ್ನು ಗೌರವಿಸುವಂತೆ ತೋರುತ್ತಿದೆ, ಅವೆಲ್ಲವೂ ಈಗಷ್ಟೇ ಬೆಳೆಯುತ್ತಿರುವ ಯುವ ಸಿಂಹಗಳಾಗಿರಬೇಕು" ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬರು, "ಕಾಡಿನ ರಾಜನು ಅವುಗಳಿಗೆ ಕೊಂಚ ಅತ್ತಿಂದಿತ್ತ ಓಡಲು ಸಮಯ ನೀಡಿದ್ದಾನೆ. ಹೆಚ್ಚೇನು ಇಲ್ಲ" ಎಂದಿದ್ದಾರೆ. ಮತ್ತೊಬ್ಬರು "ಯಾರು ಈ ವಿಡಿಯೋ ಚಿತ್ರೀಕರಿಸುತ್ತಿದ್ದಾರೆ? ಅತ್ಯಂತ ಸುಂದರ ದೃಶ್ಯ" ಎಂದು ಹೇಳಿದರೆ, "ಓ ಸಿಂಹಗಳೇ, ನಡೆಯಿರಿ, ನಿಜವಾದ ಕಾಡಿನ ರಾಜನು ಬಂದಿದ್ದಾನೆ" ಎಂದು ಇನ್ನೋರ್ವ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.