ಅಫ್ಘಾನಿಸ್ತಾನದ ಹಿಂದೂಕುಶ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಳಿಗ್ಗೆ 7:39 ಕ್ಕೆ ಈ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಪ್ರಮಾಣದಲ್ಲಿ 5.1 ರಷ್ಟಿದೆ.  

Updated: Aug 16, 2019 , 10:07 AM IST
ಅಫ್ಘಾನಿಸ್ತಾನದ ಹಿಂದೂಕುಶ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು
Photo Courtesy: Screengrab IMD

ನವದೆಹಲಿ: ಅಫ್ಘಾನಿಸ್ತಾನದ ಹಿಂದೂಕುಶ್ ಹಿಮಾಲಯನ್ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಳಿಗ್ಗೆ 7:39 ಕ್ಕೆ ಈ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಪ್ರಮಾಣದಲ್ಲಿ 5.1 ತೀವ್ರತೆ ದಾಖಲಾಗಿದೆ.

ಇದಕ್ಕೂ ಮೊದಲು ಆಗಸ್ಟ್ 5 ರಂದು, ಬೋಯರ್-ಅಹ್ಮದ್ ಪ್ರಾಂತ್ಯದ ಇರಾನ್‌ನ ಕೊಹ್ಗಿಲುಯೆ ಮತ್ತು ಕೋರಮ್ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ ಅದು 5.2ರಷ್ಟು ದಾಖಲಾಗಿತ್ತು.

ಸುದ್ದಿ ಸಂಸ್ಥೆ ಕ್ಸಿನ್ಹುವಾ ಪ್ರಕಾರ, ಭೂಕಂಪದ ಕೇಂದ್ರ ಬಿಂದು 50.790 ಡಿಗ್ರಿ ಪೂರ್ವ ರೇಖಾಂಶ ಮತ್ತು 30.594 ಡಿಗ್ರಿ ಉತ್ತರ ಅಕ್ಷಾಂಶ 10 ಕಿಲೋಮೀಟರ್ ಆಳದಲ್ಲಿತ್ತು. ಇರಾನ್‌ನ ಖುಜಿಕಿಸ್ತಾನ್ ಪ್ರಾಂತ್ಯದ ಉತ್ತರ ನಗರಗಳಲ್ಲಿ ಭೂಕಂಪದ ಅನುಭವವಾಗಿತ್ತು.