ಇಸ್ಲಾಮಾಬಾದ್ [ಪಾಕಿಸ್ತಾನ]: ಪ್ರತಿಪಕ್ಷ ಜಾಮಿಯತ್ ಉಲೆಮಾ-ಇಸ್ಲಾಂ-ಫಜಲ್ (ಜಿಯುಐ-ಎಫ್) ನ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. 'ನಾನು ರಾಜೀನಾಮೆ ನೀಡುವುದಿಲ್ಲ' ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಹಿರಿಯ ಪತ್ರಕರ್ತರು ಮತ್ತು ವಿಶ್ಲೇಷಕರೊಂದಿಗಿನ ನಡೆದ ಸಭೆಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಜೆಯುಐ-ಎಫ್ ಮುಖ್ಯಸ್ಥ ಫಜ್ಲೂರ್ ರೆಹಮಾನ್ ಅವರ ಪ್ರತಿಭಟನೆಯ ಹಿಂದೆ ದೊಡ್ಡ ಪಿತೂರಿಯೇ ಇದೆ. ಇದು ಒಂದು ನಿರ್ದಿಷ್ಟ ಕಾರ್ಯಸೂಚಿಯಿಂದ ನಡೆಸಲ್ಪಡುತ್ತಿದೆ ಎಂದು ಹೇಳಿರುವುದಾಗಿ ಜಿಯೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ' ಮತ್ತು ನಾನು ರಾಜೀನಾಮೆ ನೀಡುವುದಿಲ್ಲ. ಪ್ರತಿಭಟನೆಯು ಕಾರ್ಯಸೂಚಿ ಆಧಾರಿತವಾಗಿದೆ ಮತ್ತು ಇದಕ್ಕೆ ವಿದೇಶಿ ಬೆಂಬಲವಿದೆ" ಎಂದು ಖಾನ್ ಸಭೆಯಲ್ಲಿ ಹೇಳಿದರು.
"ಮೌಲಾನಾ ಅವರ ಸಮಸ್ಯೆ ಏನು ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಲೇವಡಿ ಮಾಡಿದ ಇಮ್ರಾನ್, "ವಿರೋಧ ಪಕ್ಷದ ಕಾರ್ಯಸೂಚಿ ಏನೆಂಬುದೇ ಅರ್ಥವಾಗುತ್ತಿಲ್ಲ" ಎಂದರು.
"ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಆಜಾದಿ ಮಾರ್ಚ್ ಅನ್ನು ಜಿಯುಐ-ಎಫ್ ಮುಖ್ಯಸ್ಥರು ಘೋಷಿಸಿದ್ದಾರೆ," ನಕಲಿ ಚುನಾವಣೆಗಳ "ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ರೆಹಮಾನ್ ಆರೋಪಿಸಿದ್ದಾರೆ.
ಏತನ್ಮಧ್ಯೆ, ಕಾನೂನುಬದ್ಧ ಪ್ರತಿಭಟನೆಗಾಗಿ ನ್ಯಾಯಾಲಯಗಳು ನಿಗದಿಪಡಿಸಿದ ನಿಯತಾಂಕಗಳನ್ನು ಎಲ್ಲಿಯವರೆಗೂ ಕಾಪಾಡುವರೋ ಅಲ್ಲಿವರೆಗೆ ಪ್ರತಿಭಟನೆ ಮುಂದುವರಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ಡಾನ್ ವರದಿ ಮಾಡಿದೆ.
[With ANI Inputs]