ಅಜೆರ್ಬೈಜಾನ್ ಮೇಲೆ ಅರ್ಮೇನಿಯಾ ಕ್ಷಿಪಣಿ ದಾಳಿ, 5 ಮಂದಿ ಮೃತ, 35 ಜನರಿಗೆ ಗಾಯ

ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಯುದ್ಧವನ್ನು ಕೊನೆಗೊಳಿಸಲು ಅಂತರರಾಷ್ಟ್ರೀಯ ಸಮುದಾಯದ ಪ್ರಯತ್ನಗಳು ವಿಫಲವಾಗುತ್ತಿವೆ. ಅರ್ಮೇನಿಯಾ ತನ್ನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಅಜೆರ್ಬೈಜಾನ್ ಹೇಳಿದೆ.  

Last Updated : Oct 17, 2020, 09:35 AM IST
  • ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ದೇಶಗಳಲ್ಲಿ ಯುದ್ಧದ ಭೀತಿ
  • ಅರ್ಮೇನಿಯಾ ಹಾರಿಸಿದ ಕ್ಷಿಪಣಿ ವಸತಿ ಪ್ರದೇಶಕ್ಕೆ ಬಿದ್ದು 20ಕ್ಕೂ ಹೆಚ್ಚು ಮನೆಗಳು ಧ್ವಂಸ
  • ದಾಳಿಯಲ್ಲಿ ಐವರು ಮೃತ, 35 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಜೆರ್ಬೈಜಾನ್ ಮೇಲೆ ಅರ್ಮೇನಿಯಾ ಕ್ಷಿಪಣಿ ದಾಳಿ, 5 ಮಂದಿ ಮೃತ, 35 ಜನರಿಗೆ ಗಾಯ title=

ಬಾಕು: ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಅರ್ಮೇನಿಯಾ ತನ್ನ ನೆಲೆಗಳನ್ನು ನಿರಂತರವಾಗಿ ಗುರಿಯಾಗಿಸುತ್ತಿದೆ ಎಂದು ಅಜೆರ್ಬೈಜಾನ್ ಆರೋಪಿಸಿದೆ.  ಇದಕ್ಕೆ ಸಾಕ್ಷಿ ಎಂಬಂತೆ ಇಂದು (ಅಕ್ಟೋಬರ್ 17) ಬೆಳಿಗ್ಗೆ ಅರ್ಮೇನಿಯಾ (Armenia) ಅಜೆರ್ಬೈಜಾನ್‌ನ ಎರಡನೇ ಅತಿದೊಡ್ಡ ನಗರವಾದ ಗಂಜದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದರೆ, 35 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

20 ಕ್ಕೂ ಹೆಚ್ಚು ಮನೆಗಳು ನಾಶ:
ಅರ್ಮೇನಿಯಾ ಹಾರಿಸಿದ ಕ್ಷಿಪಣಿ ವಸತಿ ಪ್ರದೇಶಕ್ಕೆ ಬಿದ್ದು 20ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿ ಐದು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಅಜೆರ್ಬೈಜಾನ್ (Azerbaijan) ಅಧ್ಯಕ್ಷರ ಸಹವರ್ತಿ ಹಿಕ್ಮತ್ ಹಾಜಿಯೆವ್ ಅವರು ಟ್ವೀಟ್ ಮಾಡುವ ಮೂಲಕ ನೀಡಿದರು. ಅರ್ಮೇನಿಯಾ ಉದ್ದೇಶಪೂರ್ವಕವಾಗಿ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಅರ್ಮೇನಿಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಅಜರ್ಬೈಜಾನ್ ವಿಧಿಸಿದೆ 3 ಷರತ್ತು

ರಷ್ಯಾದ ಪ್ರಯತ್ನ ವಿಫಲ:
ವಿವಾದಿತ ಪ್ರದೇಶವಾದ ನಾಗೋರ್ನೊ-ಕರಬಖ್‌ಗೆ ಸಂಬಂಧಿಸಿದಂತೆ ಎರಡೂ ದೇಶಗಳ ಸೈನ್ಯಗಳು ಕಳೆದ ಹಲವು ದಿನಗಳಿಂದ ಮುಖಾಮುಖಿಯಾಗಿವೆ. ರಷ್ಯಾದ ಉಪಕ್ರಮದ ಮೇರೆಗೆ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವೆ ಕದನ ವಿರಾಮವನ್ನು ಸಹ ಒಪ್ಪಲಾಯಿತು, ಆದರೆ ಕೆಲವು ಗಂಟೆಗಳ ನಂತರ ಮತ್ತೆ ಯುದ್ಧ ಪ್ರಾರಂಭವಾಯಿತು. ಈಗ ಅರ್ಮೇನಿಯಾ ಕ್ಷಿಪಣಿಯನ್ನು ಹಾರಿಸುವ ಮೂಲಕ ತನ್ನ ಆಕ್ರಮಣ ಶೀಲ ಪ್ರವೃತ್ತಿಯನ್ನು ಸ್ಪಷ್ಟಪಡಿಸಿದ್ದು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಪರಸ್ಪರ ಆರೋಪ:
ಎರಡೂ ದೇಶಗಳು ಮೊದಲಿನಿಂದಲೂ ಪರಸ್ಪರ ಯುದ್ಧವನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸುತ್ತಿವೆ. ಕದನ ವಿರಾಮಕ್ಕೆ ಒಪ್ಪಿದ ಒಪ್ಪಂದದ ಹೊರತಾಗಿಯೂ ಈ ಆರೋಪಗಳಿಂದಾಗಿ ಪರಿಸ್ಥಿತಿ ಮತ್ತೆ ಹದಗೆಟ್ಟಿತು. ಶುಕ್ರವಾರ ಅರ್ಮೇನಿಯನ್ ರಕ್ಷಣಾ ಸಚಿವಾಲಯವು ಯಾವುದೇ ಪ್ರಚೋದನೆಯಿಲ್ಲದೆ ಅಜರ್ಬೈಜಾನ್ ನಾಗೋರ್ನೊ-ಕರಾಬಖ್ ಮೇಲೆ ಬಾಂಬ್ ದಾಳಿ ನಡೆಸಿದೆ. ಇದಕ್ಕೆ ಅರ್ಮೇನಿಯನ್ ಸೈನ್ಯವು ಪ್ರತೀಕಾರ ತೀರಿಸಿಕೊಂಡಿತು ಎಂದು ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದೆ.

ಅರ್ಮೇನಿಯಾದೊಂದಿಗಿನ ಯುದ್ಧದಲ್ಲಿ 3,000ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡ ಅಜರ್ಬೈಜಾನಿ

ಏನಿದು ವಿವಾದ?
ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧಕ್ಕೆ ಪ್ರಮುಖ ಕಾರಣವೆಂದರೆ ನಾಗೋರ್ನೊ-ಕರಬಖ್ (Nagorno-Karabakh) ಪ್ರದೇಶ. ಅಜರ್ಬೈಜಾನ್ ಈ ಪ್ರದೇಶದ ಪರ್ವತ ಪ್ರದೇಶವನ್ನು ತನ್ನದೇ ಎಂದು ವಿವರಿಸಿದರೆ, ಅರ್ಮೇನಿಯಾವನ್ನು ಇಲ್ಲಿನ ಭೂ ಭಾಗಗಳನ್ನು ಆಕ್ರಮಿಸಿಕೊಂಡಿದೆ. 1994ರಲ್ಲಿ ಹೋರಾಟ ಕೊನೆಗೊಂಡಾಗಿನಿಂದ ಈ ಪ್ರದೇಶವು ಅರ್ಮೇನಿಯಾದ ಆಕ್ರಮಣದಲ್ಲಿದೆ. 2016ರಲ್ಲಿಯೂ ಈ ಪ್ರದೇಶದ ಮೇಲೆ ಉಭಯ ದೇಶಗಳ ನಡುವೆ ರಕ್ತಸಿಕ್ತ ಯುದ್ಧ ನಡೆದಿದ್ದು, ಇದರಲ್ಲಿ 200 ಜನರು ಸಾವನ್ನಪ್ಪಿದ್ದಾರೆ. ಈಗ ಉಭಯ ದೇಶಗಳು ಮತ್ತೊಮ್ಮೆ ಮುಖಾಮುಖಿಯಾಗಿವೆ.
 

Trending News