ಸುಖೋಯ್-30ಎಂಕೆಐ ಯುದ್ಧ ವಿಮಾನದ ಮೂಲಕ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ

    

Last Updated : Nov 22, 2017, 04:20 PM IST
ಸುಖೋಯ್-30ಎಂಕೆಐ ಯುದ್ಧ ವಿಮಾನದ ಮೂಲಕ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ title=

ವಿಶ್ವದ ಅತ್ಯಂತ ವೇಗದ ಬ್ರಹ್ಮೋಸ್ ಕ್ಷಿಪಣಿ ಮತ್ತೊಂದು ದಾಖಲೆ ಬರೆದಿದ್ದು, ಸುಖೋಯ್-30ಎಂಕೆಐ ಯುದ್ಧ ವಿಮಾನದ ಮೂಲಕ  ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 

ಇದೇ ಮೊದಲ ಬಾರಿಗೆ ಸುಮಾರು 2.5 ಟನ್ ತೂಕದ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತೀಯ ವಾಯು ಪಡೆಯ ದೊಡ್ಡ ಯುದ್ಧ ವಿಮಾನ ಸುಖೋಯ್-30 ಎಂಕೆಐಗೆ ಅಳವಡಿಸಿ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಈ ಕ್ಷಿಪಣಿಯನ್ನು ಸುಖೋಯ್‌ 30ಎಂಕೆಐಗೆ ಜೋಡಿಸಿರುವುದರಿಂದ ಸರ್ಜಿಕಲ್‌ ದಾಳಿಗೆ ಮತ್ತೊಂದು ಹೊಸ ಅಸ್ತ್ರ ಸಿಕ್ಕಿದಂತಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಈ ಹಿಂದೆ ಬ್ರಹ್ಮೋಸ್  ಕ್ಷಿಪಣಿಯನ್ನು ಭೂಮಿಯ ಮೇಲೆ ಮೊಬೈಲ್ ಲಾಂಚರ್ ಮೂಲಕ ಒಡಿಶಾದಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಬಳಿಕ ಜಲಾಂತರ್ಗಾಮಿ ನೌಕೆ ಮತ್ತು ಸಮರ ನೌಕೆಗಳಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಇದೀಗ  ಸುಖೋಯ್ ಯುದ್ಧ ವಿಮಾನಕ್ಕೆ ಅಳವಡಿಸಿ ಉಡಾಯಿಸಲಾಗಿದ್ದು, ಈ ಕ್ಷಿಪಣಿ ಶಬ್ದದ ವೇಗಕ್ಕಿಂತಲೂ 3 ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ ಎಂಡು ರಕ್ಷಣಾ ಮೂಲಗಳು ತಿಳಿಸಿವೆ.

Trending News