ಅಮೆರಿಕದ Wisconsin ಮಾಲ್‌ನಲ್ಲಿ ಗುಂಡಿನ ದಾಳಿ, 8 ಮಂದಿಗೆ ಗಾಯ

ಅಮೆರಿಕದ ಮಾಲ್‌ ಒಂದರಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ. ಘಟನೆ ವರದಿಯಾದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು, ಆದರೆ ದಾಳಿಕೋರನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ವರದಿಯಾಗಿದೆ.

Last Updated : Nov 21, 2020, 08:11 AM IST
  • ವಿಸ್ಕಾನ್ಸಿನ್‌ನಲ್ಲಿ ಮಿಲ್ವಾಕೀಯಲ್ಲಿ ನಡೆದಿರುವ ಘಟನೆ
  • ದಾಳಿಕೋರರನ್ನು ಹಿಡಿಯಲು ಪೊಲೀಸರ ಹರಸಾಹಸ
  • ಸ್ಥಳೀಯ ಮೇಯರ್ ಘಟನೆಯನ್ನು ದೃಢಪಡಿಸಿದ್ದಾರೆ
ಅಮೆರಿಕದ Wisconsin ಮಾಲ್‌ನಲ್ಲಿ ಗುಂಡಿನ ದಾಳಿ, 8 ಮಂದಿಗೆ ಗಾಯ title=

ವಾಷಿಂಗ್ಟನ್: ಅಮೆರಿಕದ ವಿಸ್ಕಾನ್ಸಿನ್‌ನ ಮಾಲ್‌ನಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ 8 ಜನರು ಗಾಯಗೊಂಡಿದ್ದಾರೆ. ದಾಳಿಕೋರ ಯಾರು ಮತ್ತು ಅವರು ಯಾವ ಉದ್ದೇಶದಿಂದ ಗುಂಡು ಹಾರಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಇಲ್ಲಿಯವರೆಗೆ ವಿಫಲರಾಗಿದ್ದಾರೆ.

ಸ್ಥಳೀಯ ಮೇಯರ್ ಡೆನ್ನಿಸ್ ಮೆಕ್‌ಬ್ರೈಡ್ ಪ್ರಕಾರ, ವಿಸ್ಕಾನ್ಸಿನ್‌ನ ಮಿಲ್ವಾಕಿ (Milwaukee) ಯಲ್ಲಿರುವ ಮೇಫೀಲ್ಡ್ ಶಾಪಿಂಗ್ ಮಾಲ್‌ನಲ್ಲಿ (Shopping Mall) ಹಠಾತ್ ಗುಂಡಿನ ಚಕಮಕಿ ನಡೆದಾಗ ಭೀತಿ ಉಂಟಾಯಿತು. ಈ ಘಟನೆಯಲ್ಲಿ ಈವರೆಗೆ 8 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಶೂಟೌಟ್‌ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Covid 19 Vaccine ತಯಾರಿಸುವ ಭಾರತೀಯ ಕಂಪನಿಗಳ ಮೇಲೆ ರಷ್ಯಾ-ಉ.ಕೊರಿಯಾ ಹ್ಯಾಕರ್ ಗಳ ದಾಳಿ

ಗುಂಡಿನ ದಾಳಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದರು,  ಸುಮಾರು 75 ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಅಪರಾಧಿಯನ್ನು ಹಿಡಿಯಲು ವಿಫಲವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಶೂಟೌಟ್‌ನಲ್ಲಿ ಗಾಯಗೊಂಡ ಜನರನ್ನು ಸ್ಟ್ರೆಚರ್‌ನಲ್ಲಿ ಮಾಲ್‌ನಿಂದ ಹೊರಗೆ ಕರೆದೊಯ್ಯಲಾಗುತ್ತಿರುವುದನ್ನು ತೋರಿಸಲಾಗಿದೆ.

15 ಸುತ್ತು ಗುಂಡು ಹಾರಿಸಲಾಯಿತು:-
ಸ್ಥಳೀಯ ಎಬಿಸಿ ನ್ಯೂಸ್ ನೆಟ್‌ವರ್ಕ್‌ನ WISN12 12 ನಲ್ಲಿನ ಲೈವ್ ಟಿವಿ ದೃಶ್ಯಗಳು ಮೆಸ್ಸಿಯ ಡಿಪಾರ್ಟ್ಮೆಂಟ್ ಸ್ಟೋರ್ ಹೊರಗೆ ಡಜನ್ಗಟ್ಟಲೆ ಪೊಲೀಸ್ ವಾಹನಗಳನ್ನು ತೋರಿಸುತ್ತವೆ. ಗುಂಡಿನ ಶಬ್ದ ಕೇಳಿದ ನಂತರ ಮಾಲ್ ನೌಕರರು ಮತ್ತು ಅಂಗಡಿಯವರು ತಮ್ಮನ್ನು ಒಳಗೆ ಇರಿಸಿಕೊಂಡಿದ್ದರು. ಆದರೆ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅನೇಕ ಜನರು ಹೇಳಿದ್ದಾರೆ. ಅದೇ ಸಮಯದಲ್ಲಿ ಇನ್ನೊಬ್ಬ ವ್ಯಕ್ತಿಯು ಮಾಲ್ನಲ್ಲಿ ಕೆಲಸ ಮಾಡುವ ತನ್ನ ಸಹೋದರಿ 15 ಸುತ್ತು ಗುಂಡು ಹಾರಿಸುವ ಶಬ್ದವನ್ನು ಕೇಳಿರುವುದಾಗಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಸ್ಥಾನ ತೊರೆಯುತ್ತಿದ್ದಂತೆ ಜೈಲು ಪಾಲಾಗ್ತಾರಾ ಡೊನಾಲ್ಡ್ ಟ್ರಂಪ್...?

ದಾಳಿಕೋರರ ಬೇಟೆ ಮುಂದುವರೆದಿದೆ:
ಜನರೊಂದಿಗೆ ಸಂವಾದದ ಆಧಾರದ ಮೇಲೆ ಶೂಟರ್‌ನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಶೂಟರ್‌ನ ವಯಸ್ಸು ಸುಮಾರು 20 ರಿಂದ 30 ವರ್ಷ ಎಂದು ತಿಳಿದುಬಂದಿದೆ. ಇದಲ್ಲದೆ ಸುತ್ತಮುತ್ತಲಿನ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಹುಡುಕಲಾಗುತ್ತಿದೆ. ಶೀಘ್ರವೇ ದಾಳಿಕೋರರನ್ನು ಪತ್ತೆಹಚ್ಚಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Trending News