Covid 19 Vaccine ತಯಾರಿಸುವ ಭಾರತೀಯ ಕಂಪನಿಗಳ ಮೇಲೆ ರಷ್ಯಾ-ಉ.ಕೊರಿಯಾ ಹ್ಯಾಕರ್ ಗಳ ದಾಳಿ

ಭಾರತದಲ್ಲಿ ಕೊವಿಡ್ 19 ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ 7 ಪ್ರಮುಖ ಕಂಪನಿಗಳು ಮತ್ತು ಇತರೆ ದೇಶಗಳ ಕಂಪನಿಗಳನ್ನು ಹ್ಯಾಕರ್ ಗಳು ಗುರಿಯಾಸಿರುವ ಕುರಿತು ಮೈಕ್ರೋಸಾಫ್ಟ್ ಪತ್ತೆಹಚ್ಚಿದೆ. ಈ ದೇಶಗಳಲ್ಲಿ ಕೆನಡಾ, ಫ್ರಾನ್ಸ್, ಭಾರತ, ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಪ್ರಮುಖ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಾಗೂ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ ಸಂಶೋಧಕರು ಶಾಮೀಲಾಗಿದ್ದಾರೆ. ಈ ಸೈಬರ್ ದಾಳಿಗಳನ್ನು ರಷ್ಯಾ ಹಾಗೂ ಉ.ಕೊರಿಯಾಗಳಿಂದ ನಡೆಸಲಾಗಿದೆ ಎನ್ನಲಾಗಿದೆ.

Last Updated : Nov 14, 2020, 02:40 PM IST
  • Covid19 ಲಸಿಕೆ ತಯಾರಿಕೆಯಲ್ಲಿ ನಿರತವಾಗಿರುವ ಭಾರತೀಯ ಕಂಪನಿಗಳ ಮೇಲೆ ಸೈಬರ್ ದಾಳಿ.
  • ಭಾರತ ಸೇರಿದಂತೆ ಇತರೆ ದೇಶಗಳ ಕಂಪನಿಗಳ ಮೇಲೂ ಕೂಡ ದಾಳಿ.
  • ರಷ್ಯಾ-ಉತ್ತರ ಕೊರಿಯಾ ಮೂಲದ ಸೈಬರ್ ದಾಳಿಖೋರರಿಂದ ಈ ದಾಳಿ ನಡೆದಿದೆ ಎಂದ ಮೈಕ್ರೋಸಾಫ್ಟ್.
Covid 19 Vaccine ತಯಾರಿಸುವ ಭಾರತೀಯ ಕಂಪನಿಗಳ ಮೇಲೆ ರಷ್ಯಾ-ಉ.ಕೊರಿಯಾ ಹ್ಯಾಕರ್ ಗಳ ದಾಳಿ title=

ನವದೆಹಲಿ: ಭಾರತದಲ್ಲಿ ಕೊವಿಡ್ 19 (Covid 19) ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ 7 ಪ್ರಮುಖ ಕಂಪನಿಗಳು ಮತ್ತು ಇತರೆ ದೇಶಗಳ ಕಂಪನಿಗಳನ್ನು ಹ್ಯಾಕರ್ ಗಳು ಗುರಿಯಾಸಿರುವ ಕುರಿತು ಮೈಕ್ರೋಸಾಫ್ಟ್ ಪತ್ತೆಹಚ್ಚಿದೆ. ಈ ದೇಶಗಳಲ್ಲಿ ಕೆನಡಾ, ಫ್ರಾನ್ಸ್, ಭಾರತ, ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಪ್ರಮುಖ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಾಗೂ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ ಸಂಶೋಧಕರು ಶಾಮೀಲಾಗಿದ್ದಾರೆ. ಈ ಸೈಬರ್ ದಾಳಿಗಳನ್ನು ರಷ್ಯಾ ಹಾಗೂ ಉ.ಕೊರಿಯಾಗಳಿಂದ ನಡೆಸಲಾಗಿದೆ ಎನ್ನಲಾಗಿದೆ.

ಇದನ್ನು ಓದಿ- Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ

ಆದರೆ ಮೈಕ್ರೋಸಾಫ್ಟ್ ಇದುವರೆಗೆ ವ್ಯಾಕ್ಸಿನ್ ನಿರ್ಮಾಪಕರ ಹೆಸರನ್ನು ಮಾತ್ರ ಬಹಿರಂಗಗೊಳಿಸಿಲ್ಲ. ಭಾರತದ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ನೇತೃತ್ವದಲ್ಲಿ ನಡೆಯುತ್ತಿರುವ ಕರೋನವೈರಸ್ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಕನಿಷ್ಠ 7 ಭಾರತೀಯ ಫಾರ್ಮಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಮೈಕ್ರೋಸಾಫ್ಟ್ ಪ್ರಕಾರ ಗುರಿಯಾಗಿಸಲಾಗಿರುವ ಫಾರ್ಮಾ ಕಂಪನಿಗಳಲ್ಲಿ ಬಹುತೇಕ ಕಂಪನಿಗಳ ವ್ಯಾಕ್ಸಿನ್ ಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ ಎನ್ನಲಾಗಿದೆ.

ಇದನ್ನು ಓದಿ- ಇತರ ದೇಶಗಳಂತೆ ಭಾರತದಲ್ಲಿಯೂ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆಯೇ?

ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಕಸ್ಟಮರ್ ಸಿಕ್ಯೋರಿಟಿ ಟ್ರಸ್ಟ್ ನ ಕಾರ್ಪೋರೆಟ್ ವೈಸ್ ಪ್ರೆಸಿಡೆಂಟ್ ಟಾಮ್ ಬಾರ್ಟ್, "ಒಂದು ಕ್ಲಿನಿಕಲ್ ರಿಸರ್ಚ್ ಆರ್ಗನೈಝೇಶನ್ ಕ್ಲಿನಿಕಲ್ ಟ್ರಯಲ್ ನಲ್ಲಿ ನಿರತವಾಗಿದೆ ಹಾಗೂ ಮತ್ತೊಂದು ಕಂಪನಿ ಕೊವಿಡ್ 19 ಟೆಸ್ಟ್ ಈಗಾಗಲೇ ಅಭಿವೃದ್ಧಿಗೊಳಿಸಿದೆ. ಇಂತಹುದೇ ಹಲವು ಸಂಸ್ಥೆಗಳನ್ನೂ ಗುರಿಯಾಗಿಸಲಾಗಿದೆ. ಇವರು ಸರ್ಕಾರದ ಜೊತೆಗೆ ಒಪ್ಪಂದವನ್ನಾದರು ಮಾಡಿಕೊಂಡಿರಬೇಕು ಅಥವಾ ಸರ್ಕಾರಿ ಏಜೆನ್ಸಿಗಳು ಹೂಡಿಕೆ ಮಾಡಿರಬೇಕು. ಸೈಬರ್ ದಾಳಿ ನಡೆಸಿದವರ ಹೆಸರು ಸ್ಟ್ರೋಟಿಯಂ, ಝಿಂಕ್ ಹಾಗೂ ಸೇರಿಯಂ ಆಗಿದೆ. ಸಾವಿರಾರು ಅಥವಾ ಲಕ್ಷಾಂತರ ದಾಳಿಗಳನ್ನು ನಡೆಸಿ ಜನರ ಖಾತೆಗೆ ಕನ್ನ ಹಾಕುವುದೇ ಇವರ ಉದ್ದೇಶವಾಗಿದೆ" ಎಂದು ಹೇಳಿದ್ದಾರೆ.

ಇದನ್ನು ಓದಿ-ಕೊರೋನಾದಿಂದ 'ಉದ್ಯೋಗ ಕಳೆದುಕೊಂಡ'ವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ಇವರೆಲ್ಲರೂ ಕ್ರೆಡೆನ್ಸಿಯಲ್ಸ್ ಗಳನ್ನು ಕಳ್ಳತನ ಮಾಡಿ ತಮ್ಮಷ್ಟಕ್ಕೆ ತಾವು ರಿಕ್ರೂ ಟರ್ ರೀತಿ ಪ್ರಸ್ತುತಪಡಿಸಿ ಜಾಬ್ ಗಾಗಿ ಸಂದೇಶಗಳನ್ನು ಕಳುಹಿಸುವಲ್ಲಿ ನಿರತರಾಗಿದ್ದಾರೆ. ಬಾರ್ಟ್ ಹೇಳುವಂತೆ, "ಈ ದಾಳಿಗಳ ಬಹುತೇಕ ಭಾಗಗಳನ್ನು ನಾವು ನಮ್ಮ ಸುರಕ್ಷಾ ತಂತ್ರಕ್ಕಾಗಿ ತಡೆದಿದ್ದೆವು. ಜೊತೆಗೆ ಎಲ್ಲ ವಿಭಾಗಗಳಿಗೆ ನಾವು ಈ ಕುರಿತು ಸೂಚನೆ ಕೂಡ ನೀಡಿದ್ದೇವೆ. ಯಾವ ಸಂಸ್ಥೆಗಳನ್ನು ಈ ದಾಳಿಕೋರರು ಗುರಿಯಾಗಿಸಿದ್ದಾರೆಯೋ ಅವರಿಗೆ ಸಹಾಯ ನೀಡುವುದಾಗಿ ಕೂಡ ನಾವು ಹೇಳಿದ್ದೇವೆ" ಎಂದಿದ್ದಾರೆ. ಈ ಮೊದಲು ಕೂಡ ಆರೋಗ್ಯ ವಲಯವನ್ನು ಸೈಬರ್ ದಾಳಿಕೋರರು ಗುರಿಯಾಗಿಸಿದ್ದರು. ಸ್ವಲ್ಪ ಸಮಯದ ಮೊದಲು, ಅಮೆರಿಕಾದಾದ್ಯಂತ ಅನೇಕ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ನಂತರ ಸುಲಿಗೆಗಾಗಿ ಕರೆಮಾಡಲಾಗಿತ್ತು ಎಂಬುವುದು ಇಲ್ಲಿ ಉಲ್ಲೇಖನೀಯ.

Trending News