ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಬಿಡುಗಡೆಗೊಳಿಸಿದ Google Chrome

ಮಾಹಿತಿ ತಂತ್ರಜ್ಞಾನದ ದೈತ್ಯ ಗೂಗಲ್ (ಗೂಗಲ್) ತನ್ನ ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್ ಕ್ರೋಮ್ (ಗೂಗಲ್ ಕ್ರೋಮ್) ಗಾಗಿ ನವೀಕರಣವನ್ನು ಬಿಡುಗಡೆ ಮಾಡಿದೆ. ಬಳಕೆದಾರರು ಇದೀಗ ಅದನ್ನು ಸುಲಭವಾಗಿ ಬಳಸಬಹುದಾಗಿದೆ.

Last Updated : May 22, 2020, 08:07 PM IST
ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಬಿಡುಗಡೆಗೊಳಿಸಿದ Google Chrome title=

ನವದೆಹಲಿ: ಮಾಹಿತಿ ತಂತ್ರಜ್ಞಾನದ ದೈತ್ಯ ಗೂಗಲ್ (ಗೂಗಲ್) ತನ್ನ ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್ ಕ್ರೋಮ್ (ಗೂಗಲ್ ಕ್ರೋಮ್) ಗಾಗಿ ಅಪ್ಡೇಟ್ ಬಿಡುಗಡೆ ಮಾಡಿದೆ. ಹೀಗಾಗಿ ಬಳಕೆದಾರರು ಅದನ್ನು ಸುಲಭವಾಗಿ ಬಳಸಲು ಸಾಧ್ಯವಾಗಲಿದೆ. ಬಳಕೆದಾರರು ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು Chrome ಬ್ರೌಸರ್‌ನಲ್ಲಿ ಹೊಸ ಸುರಕ್ಷಿತ ಬ್ರೌಸಿಂಗ್ ಮೋಡ್ ಆಯ್ಕೆಯನ್ನು ಸೇರಿಸಿದೆ. ಬಳಕೆಯಿಂದ ಫಿಶಿಂಗ್, ಮಾಲ್‌ವೇರ್ ಮತ್ತು ಇತರ ಸೈಬರ್‌ಗಳು ದಾಳಿಯನ್ನು ತಪ್ಪಿಸಲು ಸಾಧ್ಯವಾಗಲಿದೆ. ಕಂಪನಿ ಡೆಸ್ಕ್ಟಾಪ್ ಗಳಿಗಾಗಿ ಗೌಪ್ಯತೆ ಮತ್ತು ಸುರಕ್ಷತೆಯಾ ಹೊಸ ಅಪ್ಡೇಟ್ ಮಾಡಿದೆ.

ಹೊಸ ಅಪ್ಡೇಟ್ ಗಳ ಸಹಾಯದಿಂದ, ಬಳಕೆದಾರರು ತಮ್ಮ ಡೇಟಾದಲ್ಲಿ ಹಂಚಿಕೆಯನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗಲಿದೆ. ಇದು ಅಪಾಯಕಾರಿ ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಅಥವಾ ಯಾವುದೇ ಅಪಾಯಕಾರಿ ಅಪ್ಲಿಕೇಶನ್ ಅಥವಾ ವಿಸ್ತರಣೆಯನ್ನು ಡೌನ್‌ಲೋಡ್ ಮಾಡುವುದರಿಂದ ಬಳಕೆದಾರರನ್ನು ರಕ್ಷಣೆ ಒದಗಿಸಲಿದೆ. ಅಷ್ಟೇ ಅಲ್ಲ, ಹೆಚ್ಚಿನ ಗೌಪ್ಯತೆಗಾಗಿ incognito mode(ಅಜ್ಞಾತ ಮೋಡ್‌)ನಲ್ಲಿ ಅಧಿಕ ಖಾಸಗಿತನ ಸಿಗಲಿದೆ. ಅಜ್ಞಾತ ಮೋಡ್‌ನಲ್ಲಿ ಮೂರನೇ ವ್ಯಕ್ತಿಯ ಕುಕೀಗಳನ್ನು ನಿರ್ಬಂಧಿಸುವ ಆಯ್ಕೆಯನ್ನು Chrome ನೀಡಲಿದೆ. ಈ ಕಾರಣದಿಂದಾಗಿ, ಆನ್‌ಲೈನ್ ಜಾಹೀರಾತುದಾರರಿಗೆ ಈ ಕುಕೀಗಳ ಮೂಲಕ ಬಳಕೆದಾರರನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ.

ಅಲ್ಲದೆ, ಗೂಗಲ್ ಕ್ರೋಮ್ ಇದೀಗ ತನ್ನ ಬಳಕೆದಾರರಿಗೆ ಅವರ ಪಾಸ್ವರ್ಡ್ ಸೋರಿಕೆಯಾಗಿದೆಯೇ ಎಂಬುದನ್ನೂ ಸಹ ತಿಳಿಸಲಿದೆ. Chrome ಈಗ ಬಾರ್‌ಕೋಡ್ ಪತ್ತೆಹಚ್ಚುವಿಕೆಯನ್ನು ಸಹ ಬೆಂಬಲಿಸಲಿದೆ. ಚಿತ್ರದಲ್ಲಿ ನೀಡಲಾಗಿರುವ ಬಾರ್‌ಕೋಡ್ ಅನ್ನು ಪತ್ತೆ ಹಚ್ಚಿ ಡಿಕೋಡ್ ಮಾಡಲಿದೆ.

ತಪ್ಪಾದ ಅಥವಾ ಅನಗತ್ಯ ವಿಸ್ತರಣೆಗಳನ್ನು ಸ್ಥಾಪಿಸಿದ್ದರೆ, ಅವುಗಳನ್ನು ಹೇಗೆ ಮತ್ತು ಎಲ್ಲಿ ತೆಗೆದುಹಾಕಬಹುದು ಎಂಬುದನ್ನು ಸಹ ಈ ಟೂಲ್ ತಿಳಿಸಿಕೊಡಲಿದೆ. ಅಲ್ಲದೆ, ಈ ಮರು ವಿನ್ಯಾಸವು (ರೀಡಿಸೈನ್ )ಕುಕೀಗಳನ್ನು ನಿರ್ವಹಣೆಯನ್ನು ಸುಲಭಗೊಳಿಸಲಿದೆ. ಬಳಕೆದಾರರು ಯಾವುದೇ ವೆಬ್‌ಸೈಟ್‌ಗಳಲ್ಲಿನ  ಎಲ್ಲಾ ಕುಕೀಗಳನ್ನು ನಿರ್ಬಂಧಿಸಬಹುದಾಗಿದೆ.

ಬಳಕೆದಾರರು ಹೆಚ್ಚಾಗಿ ತಮ್ಮ ಬ್ರೌಸಿಂಗ್ ಹಿಸ್ಟರಿ ಅನ್ನು ಅಳಿಸುತ್ತಾರೆ. ಹೀಗಾಗಿ, ಗೌಪ್ಯತೆ ಹಾಗೂ ಸುರಕ್ಷತೆಯ ಮೇಲ್ಭಾಗದಲ್ಲಿ ಕ್ಲಿಯರ್ ಬ್ರೌಸಿಂಗ್ ಡೇಟಾದ ಆಯ್ಕೆಯನ್ನು ಗೂಗಲ್ ನೀಡಿದೆ. ಕಂಪನಿಯ ಪ್ರಕಾರ, ಕ್ರೋಮ್‌ನ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಕೂಡ ಹೊಸ ಅಪ್ಡೇಟ್ ಹಾಗೂ ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಲಿವೆ.

Trending News