ನವದೆಹಲಿ: ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನಕ್ಕೆ ಮುಂಚಿತವಾಗಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಮೇರಿಕಾ ಸ್ವಾಗತಿಸಿದ ರೀತಿಯಲ್ಲಿನ ವ್ಯತ್ಯಾಸವನ್ನು ಪಾಕಿಸ್ತಾನದ ಟ್ವಿಟ್ಟರ್ ಬಳಕೆದಾರರು ವಿಡಿಯೋ ಮೂಲಕ ಗುರುತಿಸಿದ್ದಾರೆ.
Video 1 : Maleeha Lodhi received Selected Imran Khan
Video 2 : Modi has been received by Director, Trade and International Affairs, Christopher Olson and other officials. US Ambassador to India Kenneth Juster. pic.twitter.com/gYHkxA7PtO
— جاوید اقبال (@javedeqbalpk) September 21, 2019
ಪ್ರಧಾನಿ ಮೋದಿಯವರನ್ನು ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಕ್ರಿಸ್ಟೋಫರ್ ಓಲ್ಸನ್, ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ವಿಮಾನ ನಿಲ್ದಾಣದ ಇತರ ಅಧಿಕಾರಿಗಳು ಸ್ವಾಗತಿಸಿದರೆ, ಸೌದಿ ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಅವರ ವಿಮಾನದಲ್ಲಿ ಯುಎಸ್ ಗೆ ಆಗಮಿಸಿದ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಯುಎನ್ ರಾಯಭಾರಿ ಮಾಲೀಹಾ ಲೋಧಿ ಸ್ವಾಗತಿಸಿದ್ದಾರೆ. ಈ ವಿಡಿಯೋದಲ್ಲಿನ ವ್ಯತ್ಯಾಸಕ್ಕೆ ಟ್ವಿಟ್ಟರ್ ಬಳಕೆದಾರರೊಬ್ಬರು ಆಯ್ಕೆಯಾದವರು ಮತ್ತು ಚುನಾಯಿತರಾದವರು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಇಮ್ರಾನ್ ಖಾನ್ ಶುಕ್ರವಾರದಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ಖಾನ್ ಅವರ ಭಾಷಣವು ಕಾಶ್ಮೀರದ ಬಗ್ಗೆ ಭಾರತದ ನಡೆಯನ್ನು ಕೇಂದ್ರೀಕರಿಸುವ ನಿರೀಕ್ಷೆಯಿದೆ, ಆದರೆ ಭಾರತ ಜಾಗತಿಕ ವೇದಿಕೆಯಲ್ಲಿ ಜವಾಬ್ದಾರಿಯುತ ಸದಸ್ಯರಾಗಿ ಅಭಿವೃದ್ಧಿ, ಶಾಂತಿ ಮತ್ತು ಭದ್ರತಾ ರಂಗಗಳಲ್ಲಿ ತಮ್ಮ ದೇಶದ ಕೊಡುಗೆಯನ್ನು ಕೇಂದ್ರೀಕರಿಸಲಿದೆ ಎಂದು ನವದೆಹಲಿ ಸ್ಪಷ್ಟಪಡಿಸಿದೆ.