ನವದೆಹಲಿ: ಅಮೆರಿಕದಲ್ಲಿ (America) ಸಂಭವಿಸಿದ ಭೀಕರ ಚಂಡಮಾರುತಕ್ಕೆ(Hurricane) 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮಾಹಿತಿಯ ಪ್ರಕಾರ, ಅರ್ಕಾನ್ಸಾಸ್ನಲ್ಲಿನ ನರ್ಸಿಂಗ್ ಹೋಮ್ ಮತ್ತು ದಕ್ಷಿಣ ಇಲಿನಾಯ್ಸ್ನ ಅಮೆಜಾನ್ ಗೋದಾಮಿಗೆ (Amazon Warehouse) ಶುಕ್ರವಾರ ರಾತ್ರಿ ಚಂಡಮಾರುತವು ಅಪ್ಪಳಿಸಿದ್ದು, ಇದರಿಂದಾಗಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದಲ್ಲದೆ, ಪ್ರತಿಕೂಲ ಹವಾಮಾನದಿಂದಾಗಿ ಟೆನ್ನೆಸ್ಸೀಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಮಿಸೌರಿಯಲ್ಲಿ 1 ಬಲಿ
ಚಂಡಮಾರುತದಿಂದಾಗಿ ಅಮೆಜಾನ್ ಗೋದಾಮಿನ ಮೇಲ್ಛಾವಣಿ ಕುಸಿದು ಕೆಲವು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಿಸೌರಿಯಲ್ಲಿ ತೀವ್ರ ಸುಂಟರಗಾಳಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಸುದ್ದಿ ಹೊರ ಬಂದಿದೆ. ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗ್ಗೆ ಮಧ್ಯಪಶ್ಚಿಮ ಮತ್ತು ದಕ್ಷಿಣದ ಕೆಲವು ಪ್ರದೇಶಗಳಲ್ಲಿ ಚಂಡಮಾರುತ ಅಪ್ಪಳಿಸಿದೆ.
ಒಬಿಯಾನ್ ಕೌಂಟಿಯಲ್ಲೂ ಚಂಡಮಾರುತವು ಹಾನಿಯನ್ನುಂಟು ಮಾಡಿದೆ
ಟೆನ್ನೆಸ್ಸೀಯಲ್ಲಿ, ವಾಯುವ್ಯದಲ್ಲಿರುವ ಲೇಕ್ ಕೌಂಟಿಯಲ್ಲಿ ಚಂಡಮಾರುತದಿಂದ ಎರಡು ಸಾವುಗಳು ವರದಿಯಾಗಿದ್ದು, ನೆರೆಯ ಓಬಿಯನ್ ಕೌಂಟಿಯಲ್ಲಿ ಒಂದು ಸಾವು ವರದಿಯಾಗಿದೆ ಎಂದು ಟೆನ್ನೆಸ್ಸೀ ತುರ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಡೀನ್ ಫ್ಲೈನರ್ ಹೇಳಿದ್ದಾರೆ. ಟೆನ್ನೆಸ್ಸೀ ಆರೋಗ್ಯ ಇಲಾಖೆಯು ಸಾವುಗಳನ್ನು ದೃಢಪಡಿಸಿದೆ ಎಂದು ಫ್ಲೈನರ್ ಹೇಳಿದ್ದಾರೆ. ಆದರೆ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಅಧಿಕಾರಿಗಳು ಈ ಮೊದಲು ಒಬಿಯಾನ್ ಕೌಂಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದು ಇಲ್ಲಿ ಗಮನಾರ್ಹ.
ರಕ್ಷಣಾ ತಂಡಗಳು ರಕ್ಷಣಾ ಕಾರ್ಯ ನಡೆಸುತ್ತಿವೆ
ಉತ್ತರ ಅರ್ಕಾನ್ಸಾಸ್ನ ಮೊನೆಟ್ ಮ್ಯಾನರ್ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಿದ ನಂತರ ಐದು ಜನರು ಗಾಯಗೊಂಡಿದ್ದಾರೆ ಮತ್ತು 20 ಜನರು ಚಂಡಮಾರುತದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕ್ರೇಗ್ಹೆಡ್ ಕೌಂಟಿ ನ್ಯಾಯಾಧೀಶ ಮಾರ್ವಿನ್ ಡೇ ಸಿಎಟಿ-ಟಿವಿಗೆ ತಿಳಿಸಿದ್ದಾರೆ. ಟೌಮನ್ನಿಂದ ವಿಪತ್ತು ರಕ್ಷಕರು ಮತ್ತು ಜೋನ್ಸ್ಬೊರೊದಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಚಂಡಮಾರುತದಲ್ಲಿ ಸಿಲುಕಿದವರ ಸಹಾಯಕ್ಕೆ ಧಾವಿಸಿದ್ದಾರೆ ಎಂದು ಟಿವಿ ಚಾನೆಲ್ ವರದಿ ಮಾಡಿದೆ.
ಇದನ್ನೂ ಓದಿ-Viral Video: ವಿಮಾನ ನಿಲ್ದಾಣದಲ್ಲಿ ಸ್ವಯಂಚಾಲಿತವಾಗಿ ಚಲಿಸಿದ ಸೂಟ್ಕೇಸ್!
ಕಟ್ಟಡ ಕುಸಿತದಲ್ಲಿ 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಆತಂಕ
ಸೇಂಟ್ ಲೂಯಿಸ್ನಲ್ಲಿರುವ ಟಿವಿ ಚಾನೆಲ್ಗಳ ದೃಶ್ಯಾವಳಿಗಳು ಇಲಿನಾಯ್ಸ್ನ ಎಡ್ವರ್ಡ್ಸ್ವಿಲ್ಲೆ ಬಳಿಯ ಅಮೆಜಾನ್ ಕೇಂದ್ರದಲ್ಲಿ ಹಲವಾರು ತುರ್ತು ವಾಹನಗಳನ್ನು ತೋರಿಸಿವೆ. ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದು ಇದುವರೆಗೆ ದೃಢಪಟ್ಟಿಲ್ಲ, ಆದರೆ ಇಲಿನಾಯ್ಸ್ನ ಕಾಲಿನ್ಸ್ವಿಲ್ಲೆಯ ತುರ್ತು ನಿರ್ವಹಣಾ ಸಂಸ್ಥೆ ಇದನ್ನು "ಅಪಾರ ಸಂಖ್ಯೆಯಲ್ಲಿ ಪ್ರಾಣಹಾನಿ ಮಾಡಿದ ಘಟನೆ" ಎಂದು ಫೇಸ್ಬುಕ್ನಲ್ಲಿ ವಿವರಿಸಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ 100ಕ್ಕೂ ಹೆಚ್ಚು ಮಂದಿ ಕಟ್ಟಡ ಕುಸಿದು ಬಿದ್ದಾಗ ಅವಶೇಷಗಳ ಅಡಿ ಸಿಕ್ಕಿಬಿದ್ದಿರುವ ಆತಂಕವಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಲ ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.
ಇದನ್ನೂ ಓದಿ-104 ಆಫ್ಘನ್ ನಿರಾಶ್ರಿತರನ್ನು ವಿಶೇಷ ವಿಮಾನದಲ್ಲಿ ಸ್ಥಳಾಂತರಿಸಿದ ಭಾರತ
ಗಾಳಿಯು ಅಪಾಯದ ವೇಗದಲ್ಲಿ ಬೀಸುತ್ತಿತ್ತು
ಭೀಕರ ಗಾಳಿ ಮತ್ತು ಚಂಡಮಾರುತವು ಸೇಂಟ್ ಲೂಯಿಸ್ ಮೂಲಕ ಹಾದುಹೋದಾಗ ಕಟ್ಟಡವೊಂದು ಕುಸಿದಿದೆ. ಮಿಸೌರಿಯ ಸೇಂಟ್ ಚಾರ್ಲ್ಸ್ ಮತ್ತು ಸೇಂಟ್ ಲೂಯಿಸ್ ಕೌಂಟಿಗಳ ಭಾಗಗಳಲ್ಲಿ 70 mph ವೇಗದ ಗಾಳಿ ಬೀಸಿದ ವರದಿಯಾಗಿದೆ. ಸೇಂಟ್ ಚಾರ್ಲ್ಸ್ ಕೌಂಟಿಯಲ್ಲಿ ಮೂರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಮಿಸೌರಿಯ ಆಗಸ್ಟಾ ಬಳಿಯ ಹಲವಾರು ಮನೆಗಳು ಚಂಡಮಾರುತದಿಂದ ನಾಶಗೊಂಡಿವೆ. ಏತನ್ಮಧ್ಯೆ, ಅಮೆಜಾನ್ ವಕ್ತಾರ ರಿಚರ್ಡ್ ರೋಚಾ ಶುಕ್ರವಾರ ರಾತ್ರಿ ಲಿಖಿತ ನೀಡಿದ ಹೇಳಿಕೆಯಲ್ಲಿ ನಮ್ಮ ಉದ್ಯೋಗಿಗಳು ಮತ್ತು ಜನರ ಸುರಕ್ಷತೆಯು ಇದೀಗ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಹೇಳಿರುವ ಅವರು , ಶೀಘ್ರದಲ್ಲಿಯೇ ಉಳಿದ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.