ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ವಿಚಾರವನ್ನು ಯುಎಸ್ ಗೆ ತಿಳಿಸಿಲ್ಲ-ಅಮೇರಿಕಾ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಉದ್ದೇಶದ ಬಗ್ಗೆ ಭಾರತವು ಅಮೆರಿಕಕ್ಕೆ ಮಾಹಿತಿ ನೀಡಿಲ್ಲ ಎಂದು ಅಮೆರಿಕಾದ ರಾಜ್ಯ ಇಲಾಖೆ ಬುಧವಾರದಂದು ತಿಳಿಸಿದೆ.

Last Updated : Aug 7, 2019, 08:57 PM IST
ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ವಿಚಾರವನ್ನು ಯುಎಸ್ ಗೆ ತಿಳಿಸಿಲ್ಲ-ಅಮೇರಿಕಾ   title=
file photo

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಮಾಡುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಉದ್ದೇಶದ ಬಗ್ಗೆ ಭಾರತವು ಅಮೆರಿಕಕ್ಕೆ ಮಾಹಿತಿ ನೀಡಿಲ್ಲ ಎಂದು ಅಮೆರಿಕಾದ ರಾಜ್ಯ ಇಲಾಖೆ ಬುಧವಾರದಂದು ತಿಳಿಸಿದೆ.

"ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮೊದಲು ಭಾರತ ಸರ್ಕಾರವು ಯುಎಸ್ ಸರ್ಕಾರವನ್ನು ಸಂಪರ್ಕಿಸುವುದಾಗಿ ಅಥವಾ ತಿಳಿಸುವುದಾಗಿ ಮಾಡಿಲ್ಲ " ಎಂದು ಯುಎಸ್ ಸ್ಟೇಟ್ ವಿಭಾಗದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಬ್ಯೂರೋ ಟ್ವಿಟ್ಟರ್ ನಲ್ಲಿ ಪ್ರಸ್ತಾಪಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸುವ ಸರ್ಕಾರದ ಯೋಜನೆಗಳ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ನ್ಯೂಸ್ ವೆಬ್‌ಸೈಟ್ ದಿ ಪ್ರಿಂಟ್ ಸೋಮವಾರ ವರದಿ ಮಾಡಿತ್ತು.

ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ದಿ ಪ್ರಿಂಟ್ ಆಗಸ್ಟ್ 1 ರಂದು ಜೈಶಂಕರ್ ಅವರು ಪೊಂಪಿಯೊ ಅವರಿಗೆ ಬ್ಯಾಂಕಾಕ್‌ನಲ್ಲಿ ವಿವರಿಸಿದ್ದರು ಮತ್ತು ಫೆಬ್ರವರಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಮ್ಮ ಯುಎಸ್ ಕೌಂಟರ್ ಪಾರ್ಟ್ ಜಾನ್ ಬೋಲ್ಟನ್ ಬೋಲ್ಟನ್ ಅವರೊಂದಿಗೆ ಮಾತನಾಡಿದ್ದರು ಎಂದು ಅದು ವರದಿ ಮಾಡಿತ್ತು.

Trending News